ETV Bharat / city

ಲೋಕಸಭೆ ಎಲೆಕ್ಷನ್‌ಗೆ ಬಿಜೆಪಿ ತಯಾರಿ: ರಾಜ್ಯದ ಈ ಸಂಸದರಿಗೆ ಕೊಕ್, ಹೊಸಬರಿಗೆ ಮಣೆ - ಲೋಕಸಭಾ ಚುನಾವಣೆ

ರಾಜ್ಯದ ಕೆಲವು ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ. ಹಿರಿಯ ಸಂಸದರ ಸ್ಥಾನಕ್ಕೆ ಹೊಸಬರಿಗೆ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಈಗಿನಿಂದಲೇ ಹುಡುಕಾಟ ನಡೆಸುತ್ತಿದೆ.

ಬಿಜೆಪಿ
bjp
author img

By

Published : Aug 7, 2022, 6:46 AM IST

ಬೆಂಗಳೂರು: 2024 ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗಲಿದ್ದು ಕಾರ್ಯತಂತ್ರ ನಡೆಯುತ್ತಿದೆ. ಹಿರಿಯ ಸಂಸದರಿಗೆ ಟಿಕೆಟ್ ನೀಡುವುದು ಬಹುತೇಕ ಅನುಮಾನ. ಹೊಸ ಮುಖಗಳಿಗೆ ಈಗಾಗಲೇ ಸದ್ದಿಲ್ಲದೇ ಶೋಧ ಶುರುವಾಗಿದೆ.

70-75 ವರ್ಷ ದಾಟಿದ ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಕ್ ನೀಡುವುದು ಖಚಿತವಾಗಿದ್ದು, ಯುವಕರತ್ತ ಕೇಸರಿ ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದೆ. ಮೂಲಗಳ ಪ್ರಕಾರ, ಆರರಿಂದ ಏಳು ಲೋಕಸಭಾ ಕ್ಷೇತ್ರದ ಹಾಲಿ ಎಂಪಿಗಳನ್ನು ಕೈ ಬಿಡುವ ಸಾಧ್ಯತೆ ಇದೆ. ಹೀಗಾಗಿ, ಚುನಾವಣೆಗೆ ಎರಡು ವರ್ಷ ಇರುವಾಗಲೇ ನೂತನ ಅಭ್ಯರ್ಥಿಗಳಿಗಾಗಿ ಹುಡುಕಾಟ ಪ್ರಾರಂಭವಾಗಿದೆ.

ಯಾರಿಗೆ ಟಿಕೆಟ್ ಸಿಗಲ್ಲ?: ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದ ಗೌಡ, ಚಿಕ್ಕಬಳ್ಳಾಪುರ- ಕೆ.ಪಿ. ಬಚ್ಚೇಗೌಡ, ತುಮಕೂರು- ಜಿ.ಎಂ.ಬಸವರಾಜ್, ಚಾಮರಾಜನಗರ-ವಿ.ಶ್ರೀನಿವಾಸ ಪ್ರಸಾದ್, ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್, ವಿಜಯಪುರ- ರಮೇಶ್ ಜಿಗಜಿಣಗಿ ಅವರಿಗೆಲ್ಲಾ ಟಿಕೆಟ್ ಸಿಗುವುದಿಲ್ಲ ಎಂದೇ ಹೇಳಲಾಗುತ್ತಿದೆ. ಈ ಸಂಸದರ ಗೆಲುವಿನ ಸಾಧ್ಯತೆಯೂ ಕ್ಷೀಣವಾಗಿರುವುದನ್ನು ಮನಗಂಡಿರುವ ವರಿಷ್ಠರು, ಆ ಕ್ಷೇತ್ರಗಳಲ್ಲಿ ಹೊಸ ಮುಖಗಳ ಹುಡುಕಾಟದಲ್ಲಿದ್ದಾರೆ ಎಂದು ತಿಳಿದುಬಂದಿದೆೆ.

ಹೊಸಬರಿಗೆ ಅವಕಾಶ: ಹೊಸ ಮುಖ, ಯುವ ಮುಖ, ಜಾತಿ ಪ್ರಾಬಲ್ಯ, ಜನಪ್ರಿಯತೆ ಬಿಜೆಪಿಯ ಸಿದ್ಧಾಂತವಾಗಿದ್ದು, ಶುದ್ಧಹಸ್ತ, ವಿದ್ಯಾವಂತ, ಉತ್ತಮ ಚಾರಿತ್ರ್ಯ ಇರುವಂತವರಿಗೆ ಆದ್ಯತೆ ನೀಡಲು ಪಕ್ಷ ಮುಂದಾಗಿದೆ. ಇದಕ್ಕಾಗಿ 6 ಕ್ಷೇತ್ರಗಳಲ್ಲಿ ಕಾರ್ಯಾರಂಭವಾಗಿದೆ‌ಯಂತೆ. ಯುವಕರಿಗೆ ಛಾನ್ಸ್‌ ಕೊಡುವ ದೂರದೃಷ್ಟಿ ಇಟ್ಟುಕೊಂಡಿರುವ ಬಿಜೆಪಿ, ಹೊಸ ಮತದಾರರ ಜೊತೆಗೆ ಹಳೆ ಮತದಾರರ ವಿಶ್ವಾಸವನ್ನೂ ಕಳೆದುಕೊಳ್ಳದಂತೆ ಯೋಜನೆ ರೂಪಿಸುತ್ತಿದೆ.

ಇದನ್ನೂ ಓದಿ: ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು : ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.