ETV Bharat / city

ಪರಿಷತ್‌ ಗೆಲ್ಲೋಕೆ ಬಿಜೆಪಿ ಹೈ ಅಲರ್ಟ್‌; ಅಭ್ಯರ್ಥಿಗಳ ಹೆಸರು ಘೋಷಣೆಗೂ ಮೊದಲೇ ಪ್ರಚಾರ - ಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗೂ ಮೊದಲೇ ಪ್ರಚಾರ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (Legislative Council Election) ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದ ಮಂತ್ರದ ಜಪಿಸುತ್ತಿದೆ. ಉಪ ಚುನಾವಣೆಯ ಫಲಿತಾಂಶದಿಂದ ಎಚ್ಚೆತ್ತುಕೊಂಡಿರುವ ಕೇಸರಿ ನಾಯಕರು ಈ ಬಾರಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಮೊದಲೇ ಪ್ರಚಾರ ಆರಂಭಿಸಿದ್ದಾರೆ.

Bjp Leaders started Campaign for mlc elections in karnataka
ಪರಿಷತ್‌ ಗೆಲ್ಲೋಕೆ ಬಿಜೆಪಿ ಹೈ ಅಲರ್ಟ್‌; ಅಭ್ಯರ್ಥಿಗಳ ಹೆಸರು ಘೋಷಣೆಗೂ ಮೊದಲೇ ಪ್ರಚಾರ
author img

By

Published : Nov 21, 2021, 2:38 AM IST

ಬೆಂಗಳೂರು: ಉಪ ಚುನಾವಣಾ (by election) ಫಲಿತಾಂಶದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ ವಿಧಾನ ಪರಿಷತ್ ಚುನಾವಣೆಯಲ್ಲಿ (Legislative Council Election) ಒಗ್ಗಟ್ಟಿನ ಮಂತ್ರ ಜಪಿಸಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರದ ಅಖಾಡಕ್ಕಿಳಿದಿದ್ದು, ರಾಜ್ಯ ಬಿಜೆಪಿಯ ಅಗ್ರನಾಯಕ ಯಡಿಯೂರಪ್ಪರನ್ನೂ ಪ್ರಚಾರಕ್ಕೆ ಬಳಸಿಕೊಂಡಿದೆ.

ಅತಿಯಾದ ಆತ್ಮವಿಶ್ವಾಸದಿಂದ ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಎದುರಿಸಿದ್ದ ಬಿಜೆಪಿ (BJP) ಸಿಂಧಗಿಯಲ್ಲಿ ಗೆದ್ದರು ಹಾನಗಲ್‌ನಲ್ಲಿ ಮುಗ್ಗರಿಸಿತ್ತು. ಯಡಿಯೂರಪ್ಪರನ್ನ ವಿಶ್ವಾಸಕ್ಕೆ ಪಡೆಯದೇ ಇದ್ದದ್ದು ಮತ್ತು ಬಿಜೆಪಿಯಲ್ಲಿ ಮಾಸ್ ಲೀಡರ್ ಆಗಿ ಕಾಣಿಸಿಕೊಳ್ಳುತ್ತಿರುವ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನ ಕಡೆಗಣಿಸಿದ್ದು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಈ ಬಾರಿ ಅಂತಹ ತಪ್ಪು ಮರುಕಳಿಸದಂತೆ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.

ವಿಧಾನ ಪರಿಷತ್ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಮೊದಲ ಹಂತದ ಪ್ರಚಾರಕ್ಕೆ ಯಡಿಯೂರಪ್ಪ ನೇತೃತ್ವದ ಒಂದು ತಂಡ ಸೇರಿ ನಾಲ್ಕು ತಂಡ ರಚಿಸಿ ಪ್ರಚಾರ ಕಾರ್ಯ ನಡೆಸಿದೆ. ತಂಡದಲ್ಲಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರಗೂ ಅವಕಾಶ ಕಲ್ಪಿಸಿದ್ದು. ಬಹುತೇಕ ಎಲ್ಲ ನಾಯಕರನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.

ಅಭ್ಯರ್ಥಿಗಳ ಹೆಸರು ಘೋಷಣೆಗೂ ಮೊದಲೇ ಪ್ರಚಾರ
ಟಿಕೆಟ್ ಘೋಷಣೆ ನಂತರ ಅಖಾಡಕ್ಕೆ ದುಮುಕುವ ಬದಲು ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಮೊದಲೇ ಪ್ರಚಾರ ಕಾರ್ಯ ನಡೆಸಿರುವುದು ಈ ಬಾರಿ ಬಿಜೆಪಿಯ ವಿಶೇಷತೆ. ಎಲ್ಲ ನಾಯಕರು ಪಕ್ಷದ ಪರವಾಗಿ ಮತ ಹಾಕುವಂತೆ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ ಸದಸ್ಯರ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ನಾಲ್ಕು ತಂಡಗಳಿಂದ ನಾಲ್ಕು ದಿನಗಳ ಕಾಲ ಜನಸ್ವರಾಜ್ಯ ಸಮಾವೇಶ ನಡೆಯುತ್ತಿದ್ದು, ಪರಿಷತ್ ಚುನಾವಣೆಗೆ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ.

ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಬಾರದಂತೆ ಆರಂಭದಿಂದಲೇ ಯಡಿಯೂರಪ್ಪ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಯಡಿಯೂರಪ್ಪರನ್ನು ಕಡೆಗಣಿಸಿದರೆ ಪಕ್ಷಕ್ಕೆ ನಷ್ಟವಾಗುವುದು ಖಚಿತ. ಆಡಳಿತ ಪಕ್ಷವಾದರೂ ಗೆಲುವಿಗೆ ಯಡಿಯೂರಪ್ಪ ಅನಿವಾರ್ಯ ಎನ್ನುವುದನ್ನು ಮನಗಂಡಿರವ ಕೇಸರಿ ನಾಯಕರು ಇದೀಗ ಯಡಿಯೂರಪ್ಪ ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡೇ ಮುನ್ನಡೆಯುತ್ತಿದ್ದಾರೆ.

ಸಾಮೂಹಿಕ ನಾಯಕತ್ವ ಅನಿವಾರ್ಯ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸದ್ಯದ ಮಟ್ಟಿಗೆ ಕಷ್ಟಸಾಧ್ಯವಾಗಿದೆ. ಅವರಿಗಿನ್ನು ಮಾಸ್ ಇಮೇಜ್ ಬಂದಿಲ್ಲ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ರಾಜ್ಯವ್ಯಾಪಿ ವರ್ಚಸ್ಸಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸುವ ಅನಿವಾರ್ಯತೆಯಲ್ಲಿದೆ.

ಆಡಳಿತಾರೂಢ ಪಕ್ಷಕ್ಕೆ ಪರಿಷತ್ ಚುನಾವಣೆ ಮಹತ್ವದ್ದಾಗಿದ್ದು, ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡಲು ಈ ಚುನಾವಣೆ ಅಸ್ತ್ರವಾಗಿದೆ. ಸರ್ಕಾರದ ಮೇಲಿನ ಆರೋಪಗಳಿಗೆ ಫಲಿತಾಂಶದ ಮೂಲಕ ಉತ್ತರ ನೀಡುವ ಅನಿವಾರ್ಯತೆ ಬಿಜೆಪಿ ಮೇಲಿದೆ. ಸದ್ಯ ಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಒಳಗೊಂಡಂತೆ ಸಾಮೂಹಿಕ ನಾಯಕತ್ವದಲ್ಲಿ ಹೆಜ್ಜೆ ಇರಿಸಿದ್ದು, ಇದರ ಸಫಲತೆಯ ಆಧಾರದಲ್ಲಿ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ತಂತ್ರಗಾರಿಕೆ ನಡೆಸಲಿದೆ.

ಇದನ್ನೂ ಓದಿ: ಜಾರಕಿಹೊಳಿ‌ ಸಹೋದರರ ಕನಸಿಗೆ ಬಿಜೆಪಿ ಹೈಕಮಾಂಡ್ ಎಳ್ಳು ನೀರು: ಪಕ್ಷೇತರ ಅಭ್ಯರ್ಥಿ ಆಗ್ತಾರಾ 'ಲಖನ್'..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.