ETV Bharat / city

ಈಗ ಬೆದರಿಕೆಗೆ ಮಣಿಯುವ ಸರ್ಕಾರ ಇಲ್ಲ, ಈಗ ಇರುವುದು ಬಿಜೆಪಿ ಗವರ್ನಮೆಂಟ್​: ಸಿ.ಟಿ.ರವಿ - ಜೇಮ್ಸ್ ಸಿನಿಮಾ ಬಗ್ಗೆ ಸಿಟಿ ರವಿ ಹೇಳಿಕೆ

ಈಗ ಇರೋದು ಬಿಜೆಪಿ ಸರ್ಕಾರ. ಅದು ರಾಷ್ಟ್ರ ಹಿತದ ಬಗ್ಗೆ ಯೋಚನೆ ಮಾಡುತ್ತದೆ. ಅವರ ಮೂಗಿಗೆ ನೇರವಾಗಿ ತೀರ್ಪು ಬಂದ್ರೆ ಸಂವಿಧಾನದ ಬಗ್ಗೆ ಮಾತಾಡ್ತಾರೆ. ನ್ಯಾಯಾಲಯದ ಬಗ್ಗೆ ಮಾತನಾಡುತ್ತಾರೆ.‌ ಇಲ್ಲವಾದರೆ ಅವರ ಅಜೆಂಡಾ ಬಗ್ಗೆ ಮಾತನಾಡುತ್ತಾರೆ ಎಂದು ಸಿ.ಟಿ.ರವಿ ಕಿಡಿಕಾಡಿದರು.

bjp-leader-ct-ravi-on-karnataka-bund-and-james-movie
ಈಗ ಬೆದರಿಕೆಗೆ ಮಣಿಯುವ ಸರ್ಕಾರ ಇಲ್ಲ, ಈಗ ಇರುವುದು ಬಿಜೆಪಿ ಸರ್ಕಾರ: ಸಿ.ಟಿ.ರವಿ
author img

By

Published : Mar 17, 2022, 12:22 PM IST

Updated : Mar 17, 2022, 1:25 PM IST

ಬೆಂಗಳೂರು: ಈಗ ಬೆದರಿಕೆಗೆ ಮಣಿಯುವ ಸರ್ಕಾರ ಇಲ್ಲ. ಬೆದರಿಕೆಗೆ ಮಣಿಯುವುದಿಲ್ಲ. ಬೆದರಿಸಲು ಸಾಧ್ಯನೂ ಇಲ್ಲ ಎಂದು ಬಂದ್​ಗೆ ಕರೆ‌‌ ನೀಡಿದ ಸಂಘಟನೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನ್ಯಾಯಾಲಯವನ್ನು ಬೆದರಿಸಬಹುದು ಅಂದು ಕೊಂಡಿದ್ದರೆ, ನ್ಯಾಯಾಲಯ ಬೆದರುವುದಿಲ್ಲ. ಸರ್ಕಾರವನ್ನೂ ಬೆದರಿಸಲು ಸಾಧ್ಯವಿಲ್ಲ. ಈಗ ಇರೋದು ಬಿಜೆಪಿ ಸರ್ಕಾರ. ಅದು ರಾಷ್ಟ್ರ ಹಿತದ ಬಗ್ಗೆ ಯೋಚನೆ ಮಾಡುತ್ತದೆ. ಅವರ ಮೂಗಿಗೆ ನೇರವಾಗಿ ತೀರ್ಪು ಬಂದ್ರೆ ಸಂವಿಧಾನದ ಬಗ್ಗೆ ಮಾತನಾಡ್ತಾರೆ. ನ್ಯಾಯಾಲಯದ ಬಗ್ಗೆ ಮಾತನಾಡುತ್ತಾರೆ.‌ ಇಲ್ಲವಾದರೆ ಅವರ ಅಜೆಂಡಾ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಜಿನ್ನಾ ಮಾನಸಿಕತೆ ಬಿಟ್ಟುಬಿಡಿ: ಹಿಂದೆ ಶಬಾನಾ ವಿಚಾರವಾಗಿ ತೀರ್ಪು ಬಂದಾಗ ಹೀಗೆಯೇ ಮಾಡಿದ್ದರು. ಅಂದಿನ ರಾಜೀವ್ ಗಾಂಧಿ ಸರ್ಕಾರ ಬೆದರಿಕೆಗೆ ಮಣಿದಿತ್ತು. ಇದು ನಿಮ್ಮ ಅಜೆಂಡಾವನ್ನು ಮುಂದುವರಿಸಿಕೊಂಡು ಹೋಗುವ ಕಾಲ ಅಲ್ಲ. ಜಿನ್ನಾ ಮಾನಸಿಕತೆ ಬಿಟ್ಟು ಬಿಡಿ. ಭಾರತೀಯತೆಯನ್ನು ಮೈಗೂಡಿಸಿಕೊಳ್ಳಿ. ಜಿನ್ನಾ ಅಜೆಂಡಾ ಈಗ ನಡೆಯೋದಿಲ್ಲ ಎಂದು ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ಅಂಬೇಡ್ಕರ್​ ಏನು ಹೇಳಿದ್ದರು ಅನ್ನೋದನ್ನ ಓದಿ: ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್, ಬುರ್ಖಾ ಬ್ಯಾನ್ ಮಾಡಿಲ್ಲ. ಫ್ರಾನ್ಸ್, ಆಸ್ಟ್ರೇಲಿಯಾ ಬುರ್ಖಾ ಬ್ಯಾನ್ ಮಾಡಿದೆ. ಭಾರತ ಆಗಲಿ, ಕರ್ನಾಟಕ ಆಗಲಿ ಹಿಜಾಬ್, ಬುರ್ಖಾ ಬ್ಯಾನ್ ಮಾಡಿಲ್ಲ. ಶಾಲೆಗಳಲ್ಲಿ ಯಾಕೆ ಬ್ಯಾನ್ ಅಂದ್ರೆ, ಎಲ್ಲ ಮಕ್ಕಳು ಒಂದೇ ಅನ್ನೋದಕ್ಕೆ. ಎಲ್ಲರೂ ಒಂದಾಗಿ ಕಲಿಯಬೇಕು ಎಂಬ ಕಾರಣಕ್ಕೆ. ಡಾ. ಬಿ.ಆರ್ ಅಂಬೇಡ್ಕರ್ ಬುರ್ಖಾ ಬಗ್ಗೆ ಏನು ಹೇಳಿದ್ದಾರೆ ಓದಿ. ಬುರ್ಖಾ ಮಾನಸಿಕ ಗುಲಾಮಗಿರಿ ಅಂತ ತಿಳಿಸಿದ್ದಾರೆ. ಅಂಬೇಡ್ಕರ್ ಮಾತನ್ನ ಹೇಳುವವರು, ಒಮ್ಮೆ ಓದಿ ಎಂದು ಸಲಹೆ ನೀಡಿದರು.

ಜೇಮ್ಸ್​ಗೆ​ ತೆರಿಗೆ ವಿನಾಯಿತಿ ನೀಡಿದರೂ ಸ್ವಾಗತ: ದಿ ಕಾಶ್ಮೀರ ಫೈಲ್ಸ್ ಸಿನಿಮಾಗೆ ನೀಡಿದಂತೆ ಜೇಮ್ಸ್​ಗೂ ತೆರಿಗೆ ವಿನಾಯಿತಿ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎರಡು ಸಿನಿಮಾಗಳಿಗೆ ತಂದು ಹಾಕುವ ಕೆಲಸ ಬೇಡ. ದಿ ಕಾಶ್ಮೀರ ಪೈಲ್ ಸಿನಿಮಾ ಸತ್ಯಾಂಶಗಳ ಮೇಲೆ ತೆಗೆದಿರುವ ಸಿನಿಮಾ. ಜೇಮ್ಸ್ ಸಂದೇಶ ಇರುವ ಸಿನಿಮಾ. ಇದಕ್ಕೂ ಸಹ ತೆರಿಗೆ ವಿನಾಯಿತಿ ಕೊಟ್ಟರೆ ಸ್ವಾಗತಾರ್ಹ. ಆದರೆ ಎರಡು ಸಿನಿಮಾಗಳನ್ನ ಹೋಲಿಕೆ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಸತ್ಯಶೋಧಕರೊಮ್ಮೆ ನೋಡಿ: ಆರ್​ಎಸ್​ಎಸ್​ ಮುಖ್ಯಸ್ಥ

ದಿ ಕಾಶ್ಮೀರ ಫೈಲ್ಸ್ ಅನ್ನೋದು ಸತ್ಯ ಘಟನೆ ಬಗ್ಗೆ ಮಾಡಿದ ಚಿತ್ರ. ಮತಾಂಧತೆ ಕಳೆದುಕೊಂಡು ಹತ್ಯೆ ಮಾಡಿದ ಘಟನೆ‌ಯನ್ನು ಚಿತ್ರಿಸಲಾಗಿದೆ. ಕುಶಸ್ಥಳ ಇಂದು ಪಾಕಿಸ್ತಾನಕ್ಕೆ ಸೇರಿದೆ. ಉಗ್ರ ನರಸಿಂಹನ ಭೂಮಿ ಮುಲ್ತಾನಾ ಆಗಿದೆ. ಶಾರದೆ ಜನ್ಮಸ್ಥಳ ಕಾಶ್ಮೀರ ನಮ್ಮ ಬಳಿ ಇಲ್ಲ. ಅದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದೆ ಎಂದು ಸಿ.ಟಿ.ರವಿ ಹೇಳಿದರು.

Last Updated : Mar 17, 2022, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.