ETV Bharat / city

ಬಿಜೆಪಿ ಮುಖಂಡ ಅನಂತರಾಜು ಸಾವು‌ ಪ್ರಕರಣ: ಠಾಣೆ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ‌ ಪ್ರೇಯಸಿ

ಬಿಜೆಪಿ ಮುಖಂಡ ಅನಂತರಾಜು ಸಾವು‌ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರೋಪಿತ ಮಹಿಳೆಯು ಇಂದು ಪೊಲೀಸ್​ ಠಾಣೆಯ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಅಲ್ಲದೇ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅನಂತರಾಜು ಪತ್ನಿ ವಿರುದ್ಧ ದೂರು ಸಹ ನೀಡಿದ್ದಾರೆ.

bjp leader anantaraju suicide case
ಬಿಜೆಪಿ ಮುಖಂಡ ಅನಂತರಾಜು ಸಾವು‌ ಪ್ರಕರಣ
author img

By

Published : Jun 1, 2022, 4:00 PM IST

ಬೆಂಗಳೂರು: ತಮಗೆ ಜೀವಬೆದರಿಕೆ ಹಾಕಿರುವುದಾಗಿ ಮೃತ ಅನಂತರಾಜು ಪತ್ನಿ ಸುಮಾ ವಿರುದ್ಧ ದೂರು ನೀಡಲು ಬಂದ ಅನಂತರಾಜು ಪ್ರೇಯಸಿ ಬಸ್ ಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂಭಾಗವೇ‌ ನಡೆದಿದೆ. ಮೃತ ಅನಂತರಾಜ್ ಜೊತೆ ಕಳೆದ ಆರು ವರ್ಷಗಳಿಂದ‌ ಲಿವಿಂಗ್ ಟೂ ಗೆದರ್ ಸಂಬಂಧ ಹೊಂದಿದ್ದ ಈಕೆ ಸುಮಾ ತಮಗೆ ಜೀವ ಬೆದರಿಕೆವೊಡ್ಡಿದ್ದಾರೆ.‌ ಜೊತೆಗೆ ಅನಂತರಾಜು ಆತ್ಮಹತ್ಯೆಗೆ‌ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು‌ ಕ್ರಮ‌ಕೈಗೊಳ್ಳಬೇಕೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ದೂರು ನೀಡಲು ಬಂದರೆ ವಿಚಾರಣೆ ಮಾಡಲು ಪೊಲೀಸರು ತಮ್ಮನ್ನು‌ ಕೂರಿಸಿಕೊಂಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಅರಿತು ಠಾಣಾ ಮುಂಭಾಗವೇ ವಾಹನವೊಂದಕ್ಕೆ ಸಿಲುಕಿಕೊಂಡು ಸಾಯಲು ಯತ್ನಿಸಿದ್ದಾರೆ. ಜೊತೆಯಲ್ಲಿದ್ದ ಸ್ನೇಹಿತ ಆ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಹನಿಟ್ರ್ಯಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂದ ಅನಂತರಾಜು ಪ್ರೇಯಸಿ

ಮೇ 12 ರಂದು ತಮ್ಮ ಮನೆಯಲ್ಲಿ‌ ನೇಣು ಬಿಗಿದುಕೊಂಡು ಅನಂತರಾಜು ಸಾವನ್ನಪ್ಪಿದ್ದರು. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅನಂತರಾಜು ಪತ್ನಿಯು ತನ್ನ ಗಂಡನ ಪ್ರೇಯಸಿ ಹಾಗೂ ಆಕೆಯ ಸಹಚರರು ಹನಿಟ್ರ್ಯಾಪ್ ಒತ್ತಡದಿಂದಾಗಿಯೇ ಅನಂತರಾಜು ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ತನಿಖೆ ವೇಳೆ ಆ ಮಹಿಳೆ ಮತ್ತು ಸುಮಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕರೆಗಳ ಸಂಭಾಷಣೆ ಪ್ರಕರಣಕ್ಕೆ ಹೊಸ ಸ್ವರೂಪ ಪಡೆದುಕೊಂಡಿತ್ತು. ಇದೇ ಆಧಾರದ‌‌ ಮೇರೆಗೆ ಅನಂತರಾಜು ಪ್ರೇಯಸಿಯನ್ನು ಬಂಧಿಸಿದರೆ ಪತ್ನಿ ಸುಮಾಳನ್ನು‌ ಎರಡು ಬಾರಿ ವಿಚಾರಣೆ ನಡೆಸಲಾಗಿತ್ತು.

ವೈರಲ್ ಆದ ಮತ್ತೊಂದು ಆಡಿಯೋ ಕರೆ: ಅನಂತರಾಜು ನೇಣಿಗೆ ಶರಣಾಗುವ ಮುನ್ನವೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಸತ್ಯ ಹೊರ ಬಂದಿದೆ. ಆ ಸಮಯದಲ್ಲೇ ಡೆತ್ ನೋಟ್​ನ್ನು ಅನಂತರಾಜು ಬರೆದಿಟ್ಟಿದ್ದರು ಎಂಬುದನ್ನು ಪತ್ನಿ ಸುಮಾ ಅವರೇ ಆತನ ಪ್ರೇಯಸಿ ಬಳಿ ಮಾತನಾಡಿರುವ ಆಡಿಯೋ ಕರೆ‌ ವೈರಲ್ ಆಗಿದೆ. ಡೆತ್ ನೋಟ್ ಇದೆ ಅದನ್ನ ನಾನು ಯಾವಾಗ ಬೇಕಾದರೂ ಕೇಸ್ ಮಾಡಿಸ್ತಿನಿ ಎಂದು ಸುಮಾ ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋ ಸದ್ಯ ರಿವಿಲ್ ಆಗಿದೆ. ಹಾಗಾದರೆ ಮೊದಲ ಬಾರಿ ಅನಂತರಾಜು ಆತ್ಮಹತ್ಯೆ ಪ್ರಯತ್ನಪಟ್ಟಾಗ ಸುಮಾ ಯಾಕೆ ದೂರು ಕೊಡಲಿಲ್ಲ. ಗಂಡನ ಪ್ರೇಐಸಿ ಮೇಲೆ ಕಾನೂನು ಕ್ರಮಕ್ಕೆ ಯಾಕೆ ಮುಂದಾಗಲಿಲ್ಲ ಎಂಬ ಅನುಮಾನ ಹೆಚ್ಚಾಗ್ತಿದೆ.

ಹನಿಟ್ರ್ಯಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ: ಆತ್ಮಹತ್ಯೆ ಯತ್ನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತರಾಜು ಪ್ರೇಯಸಿ, ಅನಂತರಾಜು ಆತ್ಮಹತ್ಯೆ ತುಂಬಾ ನೋವು ತಂದಿದೆ. ನಾನು ಹನಿಟ್ರ್ಯಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ. ನಾವು ಆರು ವರ್ಷದಿಂದ ಆನಂತರಾಜು ಜೊತೆಗೆ ವಿಲ್ಲಿಂಗ್ ರಿಲೇಷನ್‌ಶಿಪ್​​ನಲ್ಲಿದ್ದೆವು. ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರಬಹುದು.

ಅನಂತರಾಜು ಈ ಹಿಂದೆ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ವೇಳೆ ಬಲವಂತವಾಗಿ ಡೆತ್ ನೋಟ್ ಬರೆಸಿಕೊಂಡಿದ್ದಾರೆ. ನಾನು ಸಾಮಾನ್ಯ ಮಹಿಳೆ‌. ನನಗೆ ದಿನೇ ದಿನೆ ಕಿರುಕುಳ ಹೆಚ್ಚಾಗುತ್ತಿದೆ. ನಾನು ತಪ್ಪು ಮಾಡಿಲ್ಲ, ಯಾವುದೇ ತನಿಖೆಗೂ ನಾನು ಸಿದ್ಧ. ಸಿಎಂ ಬಸವರಾಜ ಬೊಮ್ಮಯಿ ಅಥವಾ ಗೃಹಸಚಿವರು ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಆದಿಚುಂಚನಗಿರಿ ಶ್ರೀಗಳೊಂದಿಗೆ ನಾಗೇಶ್​ ಚರ್ಚಿಸಿದ್ದಾರೆ - ಗೃಹ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.