ETV Bharat / city

ರಾಜ್ಯ ಸಚಿವ ಸಂಪುಟ: ವಿಸ್ತರಣೆಯೋ? ಪುನರ್ ರಚನೆಯೋ? ಬಿಜೆಪಿ ಹೈಕಮಾಂಡ್​​ನ ನಿಗೂಢ ನಡೆ - ರಾಜ್ಯ ಸಚಿವ ಸಂಪುಟ ವಿಸ್ತರಣೆ

ಸಿಎಂ ಬೊಮ್ಮಾಯಿ ಸರ್ಕಾರದ ಹತ್ತಕ್ಕೂ ಹೆಚ್ಚು ಸಚಿವರನ್ನು ಕೈಬಿಟ್ಟು ಸಂಪುಟ ಪುನರ್ ರಚನೆ ಮಾಡುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆಯಂತೆ. ಆದರೆ ಚುನಾವಣೆ ಒಂದು ವರ್ಷವಿರುವಾಗ ಈ ನಿರ್ಧಾರ ಅಸಮಾಧಾನ ಮತ್ತು ಬಂಡಾಯ ಚಟುವಟಿಕೆಗಳಿಗೆ ಕಾರಣವಾಗಬಹುದೆಂಬ ಭೀತಿ ಸಹ ಹೈಕಮಾಂಡ್ ಅನ್ನು ಕಾಡುತ್ತಿದೆ.

BJP High Command Secret steps in Karnataka
ರಾಜ್ಯ ಸಚಿವ ಸಂಪುಟ: ವಿಸ್ತರಣೆಯೋ? ಪುನರ್ ರಚನೆಯೋ? ಬಿಜೆಪಿ ಹೈಕಮಾಂಡ್​​ನ ನಿಗೂಢ ನಡೆ
author img

By

Published : Apr 27, 2022, 7:31 AM IST

ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ರಾಜ್ಯದಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮಂತ್ರಿಮಂಡಲ ವಿಸ್ತರಣೆ ಮಾಡುವುದು ಉತ್ತಮವೋ? ಅಥವಾ ಕೆಲವು ಸಚಿವರನ್ನು ಕೈಬಿಟ್ಟು ಪುನರ್ ರಚನೆ ಮಾಡುವುದು ಹೆಚ್ಚು ಸೂಕ್ತವೇ? ಎನ್ನುವುದರ ಬಗ್ಗೆ ಯೋಚಿಸುತ್ತಿರುವ ಬಿಜೆಪಿ ಹೈಕಮಾಂಡ್ ರಾಜಕೀಯ ಲಾಭ - ನಷ್ಟದ ಲೆಕ್ಕಾಚಾರ ಹಾಕತೊಡಗಿದೆ.

ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಪ್ರಕ್ರಿಯೆಗಳ ಬಗ್ಗೆ ಹೈಕಮಾಂಡ್ ನಿಗೂಢ ನಡೆ ಅನುಸರಿಸುತ್ತಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯುಗೂ ಸಹ ಯಾವುದೇ ಸಂಗತಿ ತಿಳಿಸದೇ ತನ್ನದೇ ಆದ ಲೆಕ್ಕಾಚಾರದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ತೊಡಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂತ್ರಿಮಂಡಲದಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕ್ಯಾಬಿನೆಟ್ ವಿಸ್ತರಣೆಗೆ ಹೈಕಮಾಂಡ್ ಬಳಿ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಆದರೆ, ಇದಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದೆ ಹೈಕಮಾಂಡ್ ತನ್ನ ನಿಲುವನ್ನು ಗೌಪ್ಯವಾಗಿಟ್ಟುಕೊಂಡಿದೆ.

ಹೈಕಮಾಂಡ್​​ಗೆ ಬಂಡಾಯದ ಭೀತಿ: ಬೊಮ್ಮಾಯಿ ಮಂತ್ರಿಮಂಡಲದಲ್ಲಿನ ಹತ್ತರಿಂದ ಹನ್ನೆರಡು ಸಚಿವರನ್ನು ಕೈಬಿಟ್ಟು ಪುನರ್ ರಚನೆ ಮಾಡುವ ಸಾಧ್ಯತೆಗಳ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಆದರೆ, ಚುನಾವಣೆ ಒಂದು ವರ್ಷವಿರುವಾಗ ಹೆಚ್ಚು ಸಚಿವರನ್ನ ಕೈಬಿಟ್ಟರೆ ಮಂತ್ರಿಸ್ಥಾನ ಕಳೆದುಕೊಂಡವರ ಅಸಮಾಧಾನ ಮತ್ತು ಬಂಡಾಯ ಚಟುವಟಿಕೆಗಳ ಭೀತಿ ಹೈಕಮಾಂಡ್ ಅನ್ನು ಕಾಡುತ್ತಿದೆ. ಬಿಜೆಪಿ ಸರ್ಕಾರದ ಎರಡು ಅವಧಿ ಮತ್ತು ಹಿಂದಿನ ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾದವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಹೈಕಮಾಂಡ್ ಪರಿಶೀಲನೆ ನಡೆಸುತ್ತಿದೆ.

ಪುನರ್ ರಚನೆ ಮಾಡಿದರೆ ಹದಿನೈದಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳಿಗೆ ಅಧಿಕಾರ ನೀಡುವ ಅವಕಾಶವಿದೆ. ಜಾತಿವಾರು, ಪ್ರಾದೇಶಿಕವಾರು ಹಾಗೂ ಹೊಸ ಮುಖಗಳಿಗೆ ಮಂತ್ರಿ ಸ್ಥಾನ ನೀಡಬಹುದಾಗಿದೆ, ಈ ಮೂಲಕ ಕ್ಯಾಬಿನೆಟ್​​ ನಲ್ಲಿನ ಅಸಮಾತೋಲನ ಸರಿದೂಗಿಸುವ ಬಗ್ಗೆಯೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯತೊಡಗಿದೆ. ಸಂಪುಟ ಪುನರ್ ರಚನೆಯಿಂದ ಉಂಟಾಗುವ ಅಸಮಾಧಾನವನ್ನು ಹೊಸ ಮುಖಗಳಿಗೆ ಅವಕಾಶ ನೀಡುವ ಬ್ಯಾಲೆನ್ಸ್ ತಂತ್ರಗಾರಿಕೆ ಮೂಲಕ ಸರಿದೂಗಿಸಬಹುದಲ್ಲ.? ಎನ್ನುವ ಕುರಿತೂ ಹೈಕಮಾಂಡ್ ಸಮಾಲೋಚನೆ ನಡೆಸುತ್ತಿದೆ.

ಸಿಎಂ ದೆಹಲಿ ಭೇಟಿ ಮೇಲೆ ಕಣ್ಣು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ತಿಂಗಳ 30ರಂದು ಪ್ರಧಾನಿ ಕರೆದಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಒಂದು ದಿನ ಮೊದಲೇ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಹೈಕಮಾಂಡ್ ಅಪೇಕ್ಷೆ ಪಟ್ಟರೆ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಿಎಂ ದೆಹಲಿ ಭೇಟಿಯ ಫಲಿತಾಂಶವನ್ನು ಕಾತುರದಿಂದ ಕಾಯತೊಡಗಿದ್ದಾರೆ.

ಹೈಕಮಾಂಡ್ ನಿರ್ಣಯ ವಿಳಂಬ: ಈ ತಿಂಗಳ ಅಂತ್ಯದ ವೇಳೆಗೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಅಂತಿಮ ನಿರ್ಧಾರ ತಗೆದುಕೊಳ್ಳುತ್ತದೆ ಎಂದು ಹೇಳಲಾಗಿತ್ತು. ಆದರೆ, ಹೈಕಮಾಂಡ್ ಇನ್ನೂ ಸಭೆ ಸೇರಿ ಯಾವುದೇ ತೀರ್ಮಾನಕ್ಕೆ ಬರದಿರುವುದು ಮತ್ತಷ್ಟು ವಿಳಂಬದ ಮುನ್ಸೂಚನೆ ನೀಡಿದೆ. ಮೇ ತಿಂಗಳ ಮೊದಲ ವಾರ ಹೈಕಮಾಂಡ್ ಸಭೆ ಸೇರಿ ಸಂಪುಟ ವಿಸ್ತರಣೆ ಬಗ್ಗೆ ತನ್ನ ನಿಲುವು ತಿಳಿಸುವ ಸಾಧ್ಯತೆಗಳಿವೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಪ್ರವಾಸಕ್ಕೆ ಸಿಎಂ ಸಿದ್ಧತೆ: ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಿಂದ ಲಾಭಿ ಆರಂಭ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.