ETV Bharat / city

ಪರಿಷತ್​​ನಲ್ಲಿ ಸರಳ ಬಹುಮತ ಪಡೆಯುವಲ್ಲಿ ಎಡವಿದ ಕೇಸರಿ ಪಡೆ: ಆದ್ರೂ ಇನ್ಮುಂದೆ ಬಿಜೆಪಿಗಿಲ್ಲ ಬಿಲ್ ಪಾಸ್ ಕಿರಿಕಿರಿ..!

author img

By

Published : Dec 14, 2021, 7:31 PM IST

Updated : Dec 14, 2021, 10:24 PM IST

ವಿಧಾನ ಪರಿಷತ್​​ನಲ್ಲಿ ಬಿಜೆಪಿ ತನ್ನ ಸಂಖ್ಯಾ ಬಲವನ್ನು 32 ರಿಂದ 37ಕ್ಕೆ ಹೆಚ್ಚಿಸಿಕೊಂಡಿದೆ. ಆದರೂ ಕೂಡ ಸರಳ ಬಹುಮತ ಪಡೆಯುವಲ್ಲಿ ಎಡವಿದೆ. 75 ಸದಸ್ಯ ಬಲದ ಪರಿಷತ್​​ನಲ್ಲಿ ಅಗತ್ಯ ಬಹುಮತಕ್ಕೆ 38 ಸದಸ್ಯರ ಅತ್ಯಗತ್ಯ.

BJP
ಬಿಜೆಪಿ

ಬೆಂಗಳೂರು: 20 ನಗರ ಸ್ಥಳೀಯ ಸಂಸ್ಥೆಗಳ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನ ಪರಿಷತ್​​​ನಲ್ಲಿ ಬಿಜೆಪಿ ಸರಳ ಬಹುಮತ ಸಾಧಿಸಿಕೊಳ್ಳುವಲ್ಲಿ ಸಫಲವಾಗಿದೆ. ಪ್ರಮುಖ ವಿಧೇಯಕಗಳ ಅನುಮೋದನೆಗೆ ಆಗುತ್ತಿದ್ದ ಅಡ್ಡಿ ನಿವಾರಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿಧಾನ ಪರಿಷತ್​​ನಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ. 75 ಸದಸ್ಯ ಬಲದ ವಿಧಾನ ಪರಿಷತ್​​ನಲ್ಲಿ 32 ಸದಸ್ಯ ಬಲ ಹೊಂದಿದ್ದ ಬಿಜೆಪಿ, ಜೆಡಿಎಸ್ ಬೆಂಬಲದೊಂದಿಗೆ ಮೈತ್ರಿ ಸಾಧಿಸಿಕೊಂಡು ಉಪ ಸಭಾಪತಿ ಸ್ಥಾನ ಗಿಟ್ಟಿಸಿಕೊಂಡಿತ್ತು. ಇದೀಗ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಹುಮತಕ್ಕೆ ಬೇಕಾದ ಸಂಖ್ಯೆ ತಲುಪುವ ಸನಿಹದಲ್ಲಿ ಎಡವಿದ್ದು, ಕೇವಲ ಒಂದು ಸ್ಥಾನದ ಕೊರತೆಯಿಂದ ಸದನದಲ್ಲಿ ಪ್ರತಿಪಕ್ಷಗಳಿಗೆ ಸರಿಸಮನಾದ ಸ್ಥಾನಗಳನ್ನು ಪಡೆಯಲು ಮಾತ್ರ ಸಫಲವಾಗಿದೆ.

32 ಸದಸ್ಯರನ್ನು ಹೊಂದಿದ್ದ ಬಿಜೆಪಿಯ 6 ಸದಸ್ಯರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಗಳು ಸೇರಿ 25 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. 6 ಸ್ಥಾನಗಳ ಜೊತೆ ಹೆಚ್ಚುವರಿಯಾಗಿ 6 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಪರಿಷತ್​​ನಲ್ಲಿ ತನ್ನ ಸಂಖ್ಯಾ ಬಲವನ್ನು 32 ರಿಂದ 37ಕ್ಕೆ ಹೆಚ್ಚಿಸಿಕೊಂಡಿದೆ. ಆ ಮೂಲಕ 75 ಸದಸ್ಯ ಬಲದ ಪರಿಷತ್ ನಲ್ಲಿ ಅಗತ್ಯ ಬಹುಮತಕ್ಕೆ ಬೇಕಿರುವ ಸಂಖ್ಯೆಯಾದ 38ನ್ನು ತಲುಪುವಲ್ಲಿ ಕೊನೆ ಕ್ಷಣದಲ್ಲಿ ಎಡವಿದ್ದು, ಸಭಾಪತಿಯನ್ನ ನೆಚ್ಚಿಕೊಳ್ಳಬೇಕಿದೆ.

ಪಕ್ಷಗಳ ಬಲಾಬಲ

  • ಬಿಜೆಪಿ - ಚುನಾವಣೆಗೆ ಮೊದಲು 32 ಮತ್ತು ಚುನಾವಣೆ ನಂತರ 37
  • ಕಾಂಗ್ರೆಸ್ - ಚುನಾವಣೆಗೆ ಮೊದಲು 29 ಮತ್ತು ಚುನಾವಣೆ ನಂತರ 26
  • ಜೆಡಿಎಸ್ - ಚುನಾವಣೆಗೆ ಮೊದಲು 12 ಮತ್ತು ಚುನಾವಣೆ ನಂತರ 10
  • ಪಕ್ಷೇತರ - ಚುನಾವಣೆಗೆ ಮೊದಲು 1 - ಚುನಾವಣೆ ನಂತರ 1,
  • ಸಭಾಪತಿ-1

ಪರಿಷತ್ ಮೈತ್ರಿ ಮುಂದುವರಿಕೆ

ಪರಿಷತ್​​ನಲ್ಲಿ ಬಹುಮತ ಪಡೆದುಕೊಂಡರೂ ಆಡಳಿತಾರೂಢ ಬಿಜೆಪಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಮುಂದುವರೆಸಿಕೊಂಡು ಹೋಗಲಿದೆ. ಸದ್ಯ ಜೆಡಿಎಸ್​​ನ ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದು, ಬಿಜೆಪಿಯ ಎಂ.ಕೆ. ಪ್ರಾಣೇಶ್ ಉಪ ಸಭಾಪತಿಯಾಗಿದ್ದಾರೆ. ಮೈತ್ರಿ ಒಪ್ಪಂದದ ಪ್ರಕಾರ ಹೊರಟ್ಟಿ ಮತ್ತು ಪ್ರಾಣೇಶ್ ತಮ್ಮ ಹುದ್ದೆಗಳಲ್ಲೇ ಮುಂದುವರೆಯಲಿದ್ದು, ಪರಿಷತ್​​ನಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಬಾಧಿತವಾಗಿರಲಿದೆ.

ಪರಿಷತ್​​ನಲ್ಲಿ ಬಿಜೆಪಿಗೆ ಮೇಲುಗೈ

ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿ ಬರುವ ಹಲವು ವಿಧೇಯಕಗಳಿಗೆ ವಿಧಾನ ಪರಿಷತ್​​ನಲ್ಲಿ ಸಾಕಷ್ಟು ಬಾರಿ ಅಂಗೀಕಾರ ಸಿಗದ ಸನ್ನಿವೇಶ ಎದುರಾಗುತ್ತಿತ್ತು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದರೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಇದ್ದ ಕಾರಣ ಕೆಲ ವಿಧೇಯಕಗಳನ್ನು ಪಾಸ್ ಮಾಡಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡಬೇಕಾಗಿತ್ತು.

ನಂತರ ಪರಿಷತ್​​​​ನಲ್ಲಿಯೂ ಕಾಂಗ್ರೆಸ್- ಜೆಡಿಎಸ್ ದೋಸ್ತಿಗಳ ಮೈತ್ರಿ ಕಡಿತಗೊಂಡು ಬಿಜೆಪಿ - ಜೆಡಿಎಸ್ ಮೈತ್ರಿ ಏರ್ಪಟ್ಟಿದೆ. ಆದರೂ ಕೆಲವೊಂದು ವಿಷಯಗಳಲ್ಲಿ ಉಭಯ ಪಕ್ಷಗಳ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಇರುವುದರಿಂದ ಆಡಳಿತ ಪಕ್ಷವನ್ನು ಕೆಲವೊಮ್ಮೆ ಬೆಂಬಲಿಸುತ್ತಿಲ್ಲ. ಕೆಲ ವಿಧೇಯಕಗಳಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರಿಂದಾಗಿ ವಿಧೇಯಕಗಳನ್ನು ಮತಕ್ಕೆ ಹಾಕಿದಾಗ ಸರ್ಕಾರಕ್ಕೆ ಹಿನ್ನಡೆಯಾಗುತ್ತಿತ್ತು.

ಇದನ್ನೂ ಓದಿ: ಪರಿಷತ್​ ಚುನಾವಣೆ: ಗೆದ್ದ ಅಭ್ಯರ್ಥಿಗಳು ಯಾರ‌್ಯಾರು? ಇಲ್ಲಿದೆ ಫುಲ್​ ಡೀಟೇಲ್ಸ್​​!

ಆದರೆ, ಈಗ ಆ ಸಮಸ್ಯೆ ಬಿಜೆಪಿಗೆ ತಪ್ಪಿದಂತಾಗಿದೆ. ಬಹುಮತಕ್ಕೆ ಅಗತ್ಯ ಸಂಖ್ಯೆ ಬಿಜೆಪಿ ತಲುಪಿದ್ದರಿಂದಾಗಿ ಪರಿಷತ್​​ನಲ್ಲಿ ಜೆಡಿಎಸ್ ಸದಸ್ಯರು ವಿಧೇಯಕಗಳಿಗೆ ಬೆಂಬಲ ನೀಡದೇ ಇದ್ದರೂ ಬಿಲ್​​ಗಳನ್ನು ಮತಕ್ಕೆ ಹಾಕಿ ಪಾಸ್ ಮಾಡಿಸಿಕೊಳ್ಳಲು ಬಿಜೆಪಿಗೆ ಅನುಕೂಲವಾಗಲಿದೆ. ಹಾಗಾಗಿ ಇನ್ಮುಂದೆ ವಿಧಾನಸಭೆಯಲ್ಲಿ ಬಹುಮತದೊಂದಿಗೆ ಬಿಲ್​​ಗಳನ್ನು ಪಾಸ್ ಮಾಡಿಸಿಕೊಳ್ಳುವ ರೀತಿಯಲ್ಲಿಯೇ ಪರಿಷತ್​​ನಲ್ಲೂ ಪ್ರತಿಪಕ್ಷ ಸದಸ್ಯರ ವಿರೋಧವಿದ್ದರೂ ಬಿಲ್​ಗಳನ್ನು ಪಾಸ್ ಮಾಡಿಸಿಕೊಳ್ಳಬಹುದಾಗಿದೆ.

ಈ ಹಿಂದೆ ಮೊದಲ ಬಾರಿ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿದಾಗಲೂ ಮೊದಲ ಬಾರಿ ಪರಿಷತ್​​ನಲ್ಲಿ ಬಹುಮತ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಡಿ.ಹೆಚ್.ಶಂಕರಮೂರ್ತಿ ಸುದೀರ್ಘ ಅವಧಿಗೆ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದರು. 2013 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ಕೂಡ ಪರಿಷತ್​​ನಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿತ್ತು. ಶಂಕರಮೂರ್ತಿ ಅವರೇ ಸಭಾಪತಿಯಾಗಿ ಮುಂದುವರೆದಿದ್ದರು. ಬಿಜೆಪಿ ಸಂಖ್ಯೆ ಕಡಿಮೆಯಾದರೂ ಜೆಡಿಎಸ್ ಬೆಂಬಲದೊಂದಿಗೆ ಶಂಕರಮೂರ್ತಿ ಸಭಾಪತಿಯಾಗಿ ಮುಂದುವರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಜಾರಕಿಹೊಳಿ ವಿಚಾರದಲ್ಲಿ ಮೌನ:
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದು, ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಗೆದ್ದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಲಖನ್ ಬೆಂಬಲವನ್ನು ಬಿಜೆಪಿ ಪಡೆದುಕೊಂಡರೆ ಪರಿಷತ್ ನಲ್ಲಿ ಅಗತ್ಯ ಬಹುಮತದ ಸಂಖ್ಯೆ ಸಿಕ್ಕಂತಾಗಲಿದೆ. ಆದರೆ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾದ ಲಖನ್ ರನ್ನು ಬಿಜೆಪಿ ಯಾವ ರೀತಿ ಪರಿಗಣಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ

Last Updated : Dec 14, 2021, 10:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.