ಬೆಂಗಳೂರು: ಬಿಜೆಪಿಯವರಿಗೆ ಮಹದಾಯಿ, ಕಾವೇರಿ, ಕೃಷ್ಣೆಯ ಬಗ್ಗೆ ಬೇಕಿಲ್ಲ. ಅವರ ಕ್ಷೇತ್ರದ ಅಭಿವೃದ್ಧಿ ಅವರಿಗೆ ಬೇಕಿದೆ ನಮ್ಮ ಪ್ರತಿಪಕ್ಷ ಶಾಸಕರ ಅಭಿವೃದ್ಧಿಯೂ ಬೇಕಿಲ್ಲ ಎಂದು ಸರ್ಕಾರಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ರಾಜ್ಯಕ್ಕೆ ಬಂದ್ರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹದಾಯಿ ಪ್ರಸ್ತಾಪ ಮಾಡಿಲ್ಲ. ಜತೆಗೆ ನಮ್ಮ ಅವಧಿಯಲ್ಲಿ ಮಂಜೂರು ಮಾಡಿದ ಕೆಲಸವನ್ನೂ ನಿಲ್ಲಿಸುತ್ತಿದ್ದಾರೆ. ಅದಕ್ಕೆ ಅಧಿಕಾರಿಗಳಿಗೆ ಸೂಚನೆಯನ್ನೂ ಕೊಡ್ತಿದ್ದಾರೆ. ಮುಂದೆ ಅದಕ್ಕೆ ಏನು ರೂಪುರೇಷೆ ಮಾಡ್ಬೆಕೋ ಮಾಡ್ತೇವೆ ಎಂದರು. ನಾಲ್ಕು ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಬೇಡ ಎಂಬ ವಿಚಾರ ಮಾತನಾಡಿ, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ, ಪಕ್ಷ ಪೂಜೆ ಮಾಡುವವನು. ಕಾಂಗ್ರೆಸ್ ಸ್ಥಾನಮಾನದ ಬಗ್ಗೆ ನಾನೇನು ಹೇಳಲ್ಲ. ಯಾರ್ಯಾರು ಏನೇನು ಮತ್ತು ಮಾಧ್ಯಮಗಳು ಏನು ತೋರಿಸುತ್ತಿವೆ ಎಂಬುದು ನನಗೆ ಗೊತ್ತು ಎಂದರು.