ETV Bharat / city

ಚಡ್ಡಿ ಮಾನವ ಕುಲದ‌ ಗೌರವ ಕಾಪಾಡುವ ಸಂಕೇತ: ಛಲವಾದಿ ನಾರಾಯಣ ಸ್ವಾಮಿ

ಸಿದ್ದರಾಮಯ್ಯ ಮನೆ ಬಳಿ ಚಡ್ಡಿ ಆಂದೋಲನವನ್ನು ಬಿಜೆಪಿ‌ ಕಾರ್ಯಕರ್ತರ ಮಾಡಿದರು. ಈ ವೇಳೆ ಛಲವಾದಿ ನಾರಾಯಣ ಸ್ವಾಮಿ ಚಡ್ಡಿ ಅನ್ನೋದು ಮಾನವ ಕುಲದ‌ಗೌರವ ಕಾಪಾಡುವ ಸಂಕೇತ ಎಂದರು.

ಛಲವಾದಿ ನಾರಾಯಣ ಸ್ವಾಮಿ
bjp activist chaddi Movement on Siddaramaiah house front in Bangalore
author img

By

Published : Jun 7, 2022, 6:03 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನೆ ಬಳಿ ಬಿಜೆಪಿ ಕಾರ್ಯಕರ್ತರು ಚಡ್ಡಿ ಆಂದೋಲನ ನಡೆಸಿದರು. ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಕುಮಾರ‌ ಪಾರ್ಕ್ ಈಸ್ಟ್ ಬಳಿಯ ಸಿದ್ದರಾಮಯ್ಯ ಸರ್ಕಾರಿ ಮನೆ ಬಳಿ ಚಡ್ಡಿ ಪ್ರದರ್ಶಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು ಚಡ್ಡಿಯನ್ನು ಪ್ರದರ್ಶಿಸಿದರು. ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಸಿದ್ದರಾಮಯ್ಯ ಮನೆಯ ಸ್ವಲ್ಪ ಅಂತರದಲ್ಲೇ ತಡೆದು ನಿಲ್ಲಿಸಿದರು. ಬಳಿಕ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಚಡ್ಡಿ ಮಾನವ ಕುಲದ‌ ಗೌರವ ಕಾಪಾಡುವ ಸಂಕೇತ

ಇದಕ್ಕೂ ಮೊದಲು ಮಾತನಾಡಿದ ಅವರು, ಚಡ್ಡಿ ಹಾಕುವವರು ಮಿಲಿಟರಿಯಲ್ಲೂ ಇದ್ದಾರೆ, ಪೊಲೀಸರಲ್ಲೂ ಇದ್ದಾರೆ‌, ರೈತರೆಲ್ಲರೂ ಹಾಕೋದು ಚಡ್ಡಿ. ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನ‌ ಮಾಡಿದ್ದಾರೆ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರು ಚಡ್ಡಿ ಸುಡುವ ಕಾರ್ಯಕ್ರಮ ಮಾಡುತ್ತೇವೆ ಅಂದಿದ್ದರು. ಅವರು ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದ್ದಾರೆ?. ಆರ್​ಎಸ್​ಎಸ್ ಕೂಡ ಈಗ ಚಡ್ಡಿಯಲ್ಲಿ ಇಲ್ಲ‌‌. ಆರ್​ಎಸ್​ಎಸ್​ನವರು ಪ್ಯಾಂಟ್ ಹಾಕಲು ಶುರು‌ಮಾಡಿದ್ದಾರೆ. ಚಡ್ಡಿ ಅನ್ನೋದು ಮಾನವ ಕುಲದ‌ಗೌರವ ಕಾಪಾಡುವ ಸಂಕೇತವಾಗಿದೆ. ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ. ಇರುವ ಚಡ್ಡಿಯನ್ನು ಕಿತ್ತು ಏಕೆ ಬೆತ್ತಲೆ ಆಗುತ್ತೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನು ಸಿದ್ದರಾಮಯ್ಯ ಮರೆಯಬಾರದು: ಸಚಿವ ಬಿ ಸಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.