ETV Bharat / city

Bitcoin Scam..ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಕಟೀಲ್​​ ಉತ್ತರ ಕೊಡುವ ಅವಶ್ಯಕತೆಯಿಲ್ಲ: ಬಿ.ಸಿ ಪಾಟೀಲ್ - ಬಿಟ್ ಕಾಯಿನ್ ಪ್ರಕರಣ

ಬಿಟ್ ಕಾಯಿನ್ (Bitcoin Scam) ಅನ್ನುವ ಬದಲು ಬೆಟ್ ಕಾಯಿನ್‌ ಪ್ರಕರಣ ಎನ್ನಬೇಕು. ಕಾಂಗ್ರೆಸ್​​ನವರು ಅದರ ಮೇಲೆ ಬೆಟ್ ಮಾಡೋಕೆ ಹೊರಟಿದ್ದಾರೆ. ಅದನ್ನ ಉಪಯೋಗಿಸಿಕೊಂಡು ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ (Minister BC patil) ಆರೋಪಿಸಿದ್ದಾರೆ.

Minister BC patil
ಸಚಿವ ಬಿ.ಸಿ.ಪಾಟೀಲ್
author img

By

Published : Nov 17, 2021, 10:06 AM IST

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೌನವಾಗಿರೋದ್ಯಾಕೆ? ಎಂಬ ಪ್ರಿಯಾಂಕ್​​ ಖರ್ಗೆ (priyank kharge) ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ್ (Minister BC patil), ಎಲ್ಲರ ಹೇಳಿಕೆಗಳಿಗೆ ರಾಜ್ಯಾಧ್ಯಕ್ಷರು ಉತ್ತರ ಕೊಡಲು ಆಗಲ್ಲ. ಇನ್ನೂ ದೊಡ್ಡ ಖರ್ಗೆಯವರು ಹೇಳಿದ್ರೆ ಹೇಳಬಹುದು. ಒಂದು ಲೆವಲ್ ಅಂತ ಇರುತ್ತದೆ. ಈಗಿನ್ನೂ 2ನೇ ಬಾರಿ ಎಂಎಲ್ಎ ಆಗಿರುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಚಿವರು, ಬಿಟ್ ಕಾಯಿನ್ (Bitcoin Scam) ಅನ್ನುವ ಬದಲು ಬೆಟ್ ಕಾಯಿನ್‌ ಪ್ರಕರಣ ಎನ್ನಬೇಕು. ಕಾಂಗ್ರೆಸ್​​ನವರು ಅದರ ಮೇಲೆ ಬೆಟ್ ಮಾಡೋಕೆ ಹೊರಟಿದ್ದಾರೆ. ಅದನ್ನ ಉಪಯೋಗಿಸಿಕೊಂಡು ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದರು.

ದಾಖಲೆ ಇದ್ದರೆ ಬಿಡುಗಡೆ ಮಾಡಲಿ:

2018ರಲ್ಲಿ ಬಿಟ್ ಕಾಯಿನ್ ಹಗರಣ ಆಗಿತ್ತು ಅಂತ ಹೇಳುತ್ತಿದ್ದಾರೆ. ಹಾಗಿದ್ದರೆ ಆಗ ಯಾಕೆ ಆಗ ಸುಮ್ಮನೆ ಕೂತಿದ್ದರು. ಚುನಾವಣೆ ಹತ್ತಿರ ಬರುತ್ತಿದೆ ಅಂತ ಹೀಗೆಲ್ಲಾ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇಬ್ಬರು ಪ್ರಭಾವಿಗಳಿದ್ದರೆ ಹೇಳಲಿ. ಇದಕ್ಕೆ ಹರ್ಬಿ ಹಾವು ಅಂತಾರೆ. ಹಾವು ಬಿಟ್ಟು ಬಿಡ್ತೀನಿ ಹಾವು ಬಿಟ್ಟು ಬಿಡ್ತೀನಿ ಅಂತಿದಾರೆ.

ಇದ್ರೆ ಬಿಡಲಿ. ಅವರಿಗೆ ಯಾರು ತಡೆ ಹಾಕಿದ್ದಾರೆ. ಸುಮ್ಮನೆ ಗುಮ್ನನಗುಸ್ಕನ ತರಹ ಇವತ್ತ್ ಹೇಳ್ತೀನಿ, ನಾಳೆ ಹೇಳ್ತೀನಿ ಎನ್ನುತ್ತಿದ್ದಾರೆ. ನಾಳೆ ಬಾ ಅನ್ನೋ ಒಂದು ಕಥೆ ಇದೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಇದು ಒಂಥರಾ ಬ್ಲಾಕ್ ಮೇಲ್. ಇಬ್ಬರ ಹೆಸರಿದೆ ಅಂತ ಬ್ಲಾಕ್ ಮೇಲಿಂಗ್ ಮಾಡ್ತಿದ್ದಾರಾ?. ಏನ್ ರೋಲ್ ಕಾಲ್ ಮಾಡ್ತಿದ್ದಾರಾ ಅಥವಾ ಬ್ಲ್ಯಾಕ್ ಮೇಲಿಂಗ್ ಮಾಡ್ತಿದ್ದಾರಾ ಗೊತ್ತಿಲ್ಲ. ಏನು ಅವರರ ಉದ್ದೇಶ ಅಂತ?. ಹೆಸರು ಗೊತ್ತಿದ್ದರೆ ಹೇಳಲಿ ಎಂದು ಆಗ್ರಹಿಸಿದರು.

ಆರೋಪ ಮಾಡೋದು ಕಾಂಗ್ರೆಸ್​​ನ ಆಜನ್ಮ ಸಿದ್ಧ ಹಕ್ಕು:

ಮೌನವಾಗಿದ್ರೆ ಮೌನ ಅಂತೀರಾ, ಮಾತನಾಡಿದ್ರೆ ಜಾಸ್ತಿ ಮಾತನಾಡಿದ್ದೀರಾ ಅಂತೀರಾ. ಆರೋಪ ಮಾಡೋದು ಕಾಂಗ್ರೆಸ್​​ನ ಆಜನ್ಮ ಸಿದ್ಧ ಹಕ್ಕು. ಇದನ್ನ ಕಾಂಗ್ರೆಸ್ ತಿಳಿದುಕೊಂಡು ಬಿಟ್ಟಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡ್ತಿರಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು. ಆಡಳಿತವನ್ನ ಸ್ಥಗಿತಗೊಳಿಸಬೇಕು.

ಸರ್ಕಾರದ ದಾರಿ ತಪ್ಪಿಸಬೇಕು. ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ ಅದನ್ನ ತಪ್ಪಿಸಬೇಕು ಅನ್ನೋದು ಕಾಂಗ್ರೆಸ್ ಉದ್ದೇಶ. ಆದರೆ, ಉದ್ದೇಶ ಸಫಲವಾಗುವುದಿಲ್ಲ ಎಂದು ಸಚಿವ ಬಿ.ಸಿ ಪಾಟೀಲ್ (Minister BC patil)​​ ಕಿಡಿ ಕಾರಿದರು.

ಜೆಪಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ:

ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಪಕ್ಷದವರ ಹೆಸರನ್ನೂ ಬಹಿರಂಗ ಪಡಿಸಿದ್ದಾರೆ. ಅವರನ್ನ ರಕ್ಷಣೆ ಮಾಡಲು, ತಮ್ಮ ಪಕ್ಷಕ್ಕೆ ಕೆಟ್ಟ ಹೆಸರು ಬರಬಾರದು ಅನ್ನೋ ಉದ್ದೇಶಕ್ಕೆ ಬಿಜೆಪಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಆ ಗೂಬೆ ಅವರ ತಲೆ ಮೇಲೆ ಹೋಗಿ ಕೂರುತ್ತದೆ.

2018ರಲ್ಲಿ ಚೆನ್ನಾಗಿ ತನಿಖೆ ಮಾಡಬೇಕಿತ್ತು. ಆದರೆ, ಈ ಗಲಾಟೆ ಪ್ರಕರಣದಲ್ಲಿ ಇದನ್ನ ಮುಚ್ಚಿ ಹಾಕಿ, ಅವನು ಎಸ್ಕೇಪ್ ಮಾಡಿ ಅವನನ್ನ ರಕ್ಷಣೆ ಮಾಡಿ ಈಗ ಹೇಳುವಂತಹ ಅವಶ್ಯಕತೆ ಏನಿದೆ?. ಅವತ್ತು ನೀವು ಅವನ ಜತೆ ಏನೋ ಒಂದು ವ್ಯವಹಾರ ಮಾಡಿಕೊಂಡಿರಬೇಕಲ್ವಾ?. ಹಾಗಾಗಿ ನೀವು ಅವತ್ತು ಸುಮ್ಮನೆ ಕುಳಿತಿದ್ದೀರಿ. ಈಗ ಬೆಳಕಿಗೆ ಬರ್ತಿದೆ.

ನಿಮ್ಮ ಪಕ್ಷದ ಮೇಲೆ ಕೆಟ್ಟ ಹೆಸರು ಬರುತ್ತದೆ ಎಂದು ಬಿಜೆಪಿ (BJP) ಮೇಲೆ ಗೂಬೆ ಕೂರಿಸಲು ಹೊರಟಿದ್ದೀರಾ?. ಸರ್ಕಾರಕ್ಕೆ ಯಾವುದೇ ಮುಜಗರವಿಲ್ಲ. ಜನರಿಗೆ ಸತ್ಯ ಗೊತ್ತಿದೆ. ಯಾವ ವೇದಿಕೆಯಲ್ಲಿ ಏನ್ ಹೇಳ್ಬೇಕು ಅಲ್ಲಿ ಗೃಹ ಸಚಿವರು ಮಾತನಾಡ್ತಾರೆ ಎಂದು ಎಲ್ಲ ಆರೋಪಗಳಿಗೆ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದರು.

ಇದನ್ನೂ ಓದಿ: Bitcoin Scam: ಹಗರಣ ಗಂಭೀರವಲ್ಲದಿದ್ದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.