ಬೆಂಗಳೂರು: ಲಾಕ್ಡೌನ್ ಹಾಗೂ ಇತರೆ ಸಂದರ್ಭಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಆರ್ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ವೆಂಕಟೇಶ್ ಅಲಿಯಾಸ್ ವೆಂಕಿ, ಕಾರ್ತಿಕ್ ಅಲಿಯಾಸ್ ಕಾರ್ತಿ ಬಂಧಿತರು. ಜಯಪ್ರಕಾಶ್ ಎಂಬುವವರು ಆರ್ಎಂಸಿ ಯಾರ್ಡ್ ಲಾರಿ ಸ್ಟಾಂಡ್ ಬಳಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು. ಆದರೆ ವಾಹನ ಕಳ್ಳತನವಾದ ಕಾರಣ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಸುಳಿವು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಸುಲಭವಾಗಿ ದುಡ್ಡು ಮಾಡುವುದಕ್ಕೆ ಹಾಗೂ ಶೋಕಿ ಜೀವನಕ್ಕೆ ಅಡ್ಡ ದಾರಿ ಹಿಡಿದು ರಸ್ತೆ ಬದಿ, ಮನೆ ಮುಂದೆ ನಿಲ್ಲಿಸಿರುವ ವಾಹನಗಳನ್ನ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ.
ಸದ್ಯ ಆರೋಪಿಗಳಿಂದ 1.8ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.