ETV Bharat / city

ರಾತ್ರೋರಾತ್ರಿ 35ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕಳ್ಳತನ: ಇದ್ದೂ ಇಲ್ಲದಂತಾದ ಕೋಟಿ ರೂ. ಸಿಸಿಟಿವಿ..! - ಬೈಕ್​ ಬ್ಯಾಟರಿ ಕಳ್ಳತನ

ರಾಜಧಾನಿಯಲ್ಲಿ ಒಂದೇ ರಾತ್ರಿ ಸುಮಾರು 35ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕಳ್ಳತನವಾಗಿವೆ. ಏರಿಯಾದಲ್ಲಿ ಸುಮಾರು ಒಂದೂವರೆ ಕೋಟಿ ರೂ. ಖರ್ಚು ಮಾಡಿ ಬಿಬಿಎಂಪಿ ಸಿಸಿಟಿವಿ ಅಳವಡಿಸಿದೆ. ಆ ಸಿಸಿಟಿವಿಗಳ ಪಕ್ಕದಲ್ಲೇ ಇದ್ದ ಬೈಕ್ ಬ್ಯಾಟರಿಯನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ. ಕನಿಷ್ಠ ಕಳ್ಳರ ಕೃತ್ಯವಾದರೂ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತೆ. ಅದರಿಂದ ಆರೋಪಿಗಳ ಚಹರೆ ಪತ್ತೆಯಾಗಬಹುದು ಅಂದ್ರೆ ಒಂದು ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ.

bike-battery-theft-in-bangalore-basaveshwar-nagar
ಬೈಕ್​ಗಳ ಬ್ಯಾಟರಿ ಕಳ್ಳತನ
author img

By

Published : Sep 9, 2021, 3:46 PM IST

ಬೆಂಗಳೂರು: ನಗರದಲ್ಲಿ ಬೈಕ್ ಬ್ಯಾಟರಿ ಕದಿಯುವ ಕಳ್ಳರ ತಂಡ ಕ್ರಿಯಾಶೀಲವಾಗಿದ್ದು, ಒಂದೇ ರಾತ್ರಿಯಲ್ಲಿ ಬರೋಬ್ಬರಿ 35 ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕದ್ದು ಪರಾರಿಯಾಗಿರುವ ಘಟನೆ ಸೆ.6ರ ಮಧ್ಯರಾತ್ರಿ ಬಸವೇಶ್ವರ ನಗರದ ಕೆ.ಹೆಚ್​.ಬಿ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೆ.6ರ ಮಧ್ಯರಾತ್ರಿ ಕಳ್ಳರ ಗುಂಪೊಂದು ಇಡೀ ಏರಿಯಾವನ್ನೇ ಗುಡಿಸಿ ಗುಂಡಾಂತರ ಮಾಡಿಬಿಟ್ಟಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದಾರೆ. ಹೆಚ್ಚಾಗಿ ಪಲ್ಸರ್ ಬೈಕ್​​ಗಳ ಬ್ಯಾಟರಿಯನ್ನು ಕದಿಯಲಾಗಿದೆ.

ರಾತ್ರೋ ರಾತ್ರಿ 35ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕಳ್ಳತನ

ಕಳ್ಳರ ಕಥೆ ಒಂದು ಕಡೆಯಾದ್ರೆ, ಏರಿಯಾದಲ್ಲಿ ಸುಮಾರು ಒಂದೂವರೆ ಕೋಟಿ ರೂ. ಖರ್ಚು ಮಾಡಿ ಬಿಬಿಎಂಪಿ ಸಿಸಿಟಿವಿ ಅಳವಡಿಸಿದೆ. ಆ ಸಿಸಿಟಿವಿಗಳ ಪಕ್ಕದಲ್ಲೇ ಇದ್ದ ಬೈಕ್ ಬ್ಯಾಟರಿಯನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ. ಕನಿಷ್ಠ ಕಳ್ಳರ ಕೃತ್ಯವಾದರೂ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತೆ, ಅದರಿಂದ ಆರೋಪಿಗಳ ಚಹರೆ ಪತ್ತೆಯಾಗಬಹುದು ಅಂದ್ರೆ ಒಂದು ಸಿಸಿಟಿವಿ ಸಹ ಕಾರ್ಯನಿರ್ವಹಿಸುತ್ತಿಲ್ಲ.

ಘಟನೆಯ ಬಳಿಕವಾದರೂ ಬಿಬಿಎಂಪಿ ಅಧಿಕಾರಿಗಳು ಬಂದು ಸರಿಪಡಿಸ್ತಾರೆ ಅಂದ್ರೆ, ಸರಿಪಡಿಸೋದಿರಲಿ ಘಟನೆಯಾಗಿ ನಾಲ್ಕು ದಿನ ಕಳೆದರು ಅತ್ತ ಸುಳಿಯಲೇ ಇಲ್ಲ. ಸದ್ಯ ಬೈಕ್ ಬ್ಯಾಟರಿ ಕದ್ದಿದ್ದಾರೆ ಮುಂದೊಂದು ದಿನ ಮಹಿಳೆಯರ ಚಿನ್ನದ ಸರ, ಮಕ್ಕಳನ್ನೇ ಕದ್ದು ಹೋಗೋದಿಲ್ಲ ಎಂಬ ಗ್ಯಾರಂಟಿ ಏನು? ಎಂದು ಬಿಬಿಎಂಪಿ ನಡೆ ಬಗ್ಗೆ ಬೈಕ್ ಮಾಲೀಕ ಹರೀಶ್ ಅಸಮಾಧಾನ ಹೊರಹಾಕಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.