ETV Bharat / city

ರಿಸಲ್ಟ್​ ಲೇಟ್​ ಆದ್ರೂ ಪರವಾಗಿಲ್ಲ ಕರೆಕ್ಟಾಗಿ ಕೊಡ್ತಾರೆ: ಸರ್ಕಾರದ ಪರ ಆಯುಕ್ತರ ಬ್ಯಾಟಿಂಗ್!

author img

By

Published : Jul 6, 2020, 2:07 PM IST

ಕೆಲವರಿಗೆ ಪ್ರಾಣಭಯ ಅಥವಾ ಅವಸರ ಇದ್ದರೆ ಬೇರೆಡೆ ಟೆಸ್ಟ್ ಮಾಡಿಸಿಕೊಳ್ಳಬಹುದು. ಸರ್ಕಾರದ ಮೇಲೆ ನಮಗೆ ನಂಬಿಕೆ ‌ಇದೆ. ಕೊರೊನಾ ಟೆಸ್ಟ್​ಗೆ ಯಾವುದೇ ಶುಲ್ಕ ಇಲ್ಲ. ಈಗಾಗಲೇ ಸರ್ಕಾರ ಪೊಲೀಸರಿಗೆ ಪ್ರತ್ಯೇಕ ಚಿಕಿತ್ಸೆ ಮತ್ತು ಬೆಡ್ ವ್ಯವಸ್ಥೆ ಮಾಡಿದೆ.

Bhaskar Rao
ಭಾಸ್ಕರ್ ರಾವ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರಲ್ಲಿ ಒಂದೆಡೆ ಕೊರೊನಾ ದೃಢವಾದ್ರೆ,‌ ಮತ್ತೊಂದೆಡೆ ಕೊರೊನಾ ಸೋಂಕು ಇರುವ ಲಕ್ಷಣದ ರಿಪೋರ್ಟ್ ಕೊರೊನಾ ವಾರಿಯರ್ ಕೈಗೆ ಲೇಟಾಗಿ ತಲುಪುತ್ತಿದೆ.

ಇಂದು ಇದರ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮಾತನಾಡಿ, ಕೊರೊನಾ ಸೋಂಕಿನ ರೀಪೋರ್ಟ್ ಲೇಟಾಗಿ ಬಂದರೂ ಪರವಾಗಿಲ್ಲ. ಆದರೆ ಕರೆಕ್ಟ್ ಆಗಿಯೇ ಕೊಡ್ತಿದ್ದಾರೆ. ಸದ್ಯ ಲಕ್ಷಾಂತರ ಜನ ಕೊರೊನಾ ಟೆಸ್ಟ್ ಮಾಡಿಸ್ತಿದ್ದಾರೆ. ಹೀಗಾಗಿ ಟೆಸ್ಟ್ ರಿಪೋರ್ಟ್​ ಸ್ವಲ್ಪ ತಡವಾಗಿ ಬರ್ತಿದೆ. ಎಲ್ಲ ಪೊಲೀಸರಿಗೆ ಸರ್ಕಾರದ ಕಡೆಯಿಂದ ಲಭ್ಯವಿರುವ ಸವಲತ್ತಿನಿಂದ ಟೆಸ್ಟ್ ಮಾಡೋದಕ್ಕೆ ಹೇಳಿದ್ದೇನೆ ಎಂದರು.

ಹಾಗೇ ಕೆಲವರಿಗೆ ಪ್ರಾಣಭಯ ಅಥವಾ ಅವಸರವಿದ್ದರೆ, ಬೇರೆಡೆ ಟೆಸ್ಟ್ ಮಾಡಿಸಿಕೊಳ್ಳಬಹುದು. ಸರ್ಕಾರದ ಮೇಲೆ ನಮಗೆ ನಂಬಿಕೆ ‌ಇದೆ. ಕೊರೊನಾ ಟೆಸ್ಟ್​ಗೆ ಯಾವುದೇ ಶುಲ್ಕ ಇಲ್ಲ. ಈಗಾಗಲೇ ಸರ್ಕಾರ ಪೊಲೀಸರಿಗೆ ಪ್ರತ್ಯೇಕ ಚಿಕಿತ್ಸೆ ಮತ್ತು ಬೆಡ್ ವ್ಯವಸ್ಥೆ ಮಾಡಿದೆ ಎಂದಿದ್ದಾರೆ. ಹಾಗೆ ಇಂದು ವಿಧಾನಸೌದ ಸೆಕ್ಯುರಿಟಿ ಎಎಸ್ಐ ಒಬ್ಬರು ಸಾವನ್ನಪ್ಪಿರುವ ವಿಚಾರಕ್ಕೆ ನಿಜವಾಗಿಯೂ ಇದು ದುಃಖಕರವಾದ ವಿಚಾರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.