ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಸಂಘದ ಸದಸ್ಯರು ಸತತ ಆರನೇ ದಿನವೂ ಮುಷ್ಕರ ನಡೆಸಿದರು.
ಹತ್ತು ಹಲವು ಬೇಡಿಕೆ ಇಟ್ಟಿರುವ ನೌಕರರು, ಸಮಸ್ಯೆಗಳನ್ನು ಬಗೆಹರಿಸುವವರೆಗೆ ಮುಷ್ಕರ ಕೈಬಿಡದಿರಲು ತೀರ್ಮಾನಿಸಿದರು. ಇತ್ತ ಮಧ್ಯಪ್ರವೇಶಿಸಿದ ಕುಲಪತಿ ಪ್ರೊ. ವೇಣುಗೋಪಾಲ್ ಅವರ ಬೇಡಿಕೆ ಈಡೇರಿಸುವ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದಿದ್ದಾರೆ.
ವಿಶ್ವವಿದ್ಯಾಲಯದ ನೌಕರರಿಗೆ ಆರೋಗ್ಯ ಕಾರ್ಡ್‌ನ ಕೂಡಲೇ ವಿತರಿಸಬೇಕು. ಅನುಕಂಪದ ಆಧಾರದ ಮೇಲೆ ನೇಮಕಕೊಂಡ ನೌಕರರನ್ನು ವಿದ್ಯಾರ್ಹತೆಗೆ ತಕ್ಕಂತೆ ಅವರು ಕೆಲಸಕ್ಕೆ ಸೇರಿದ ದಿನಾಂಕದಿಂದಲೇ ಗ್ರೂಪ್ ಸಿ ಹುದ್ದೆಗೆ ಪರಿಗಣಿಸಿ ಆದೇಶಿಸಬೇಕು. ದಿನಗೂಲಿ ನೌಕರರನ್ನ ಖಾಯಂಗೊಳಿಸಬೇಕು.
ಹೊರಗುತ್ತಿಗೆ ನೌಕಕರಿಗೆ ಕಾಲಕಾಲಕ್ಕೆ ಮುಂದುವರಿಕೆ ಆದೇಶವನ್ನ ಹೊರಡಿಸುವುದು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಮತ್ತೊಮ್ಮೆ ಕುಲಪತಿಗಳ ಮುಂದೆ ಸಂಘದ ಅಧ್ಯಕ್ಷ ಶಿವಪ್ಪ ಒತ್ತಾಯಿಸಿದರು.