ETV Bharat / city

ಗರಿಷ್ಠ ತೃಪ್ತಿಯಿಂದ ವರ್ಗಾವಣೆಯಾಗುತ್ತಿದ್ದೇನೆ: ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್ ಪಂತ್ - ಪೊಲೀಸ್ ಆಯುಕ್ತ ಕಮಲ್ ಪಂತ್ ವರ್ಗಾವಣೆ

ನೇಮಕಾತಿ ವಿಭಾಗದ ಡಿಜಿಯಾಗಿ ವರ್ಗಾವಣೆ ಆದೇಶ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ ಕಮಲ್ ಪಂತ್ ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಸಹಕಾರದಿಂದಲೇ ನಾನು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.

bengaluru urban bengaluru police commissioner kamal pant transferred
ಪೊಲೀಸ್ ಆಯುಕ್ತ ಕಮಲ್ ಪಂತ್
author img

By

Published : May 16, 2022, 10:56 PM IST

ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ 22 ತಿಂಗಳು ಕಾಲ ಸೇವೆ ಸಲ್ಲಿಸಿದ್ದು, ಇದುವರೆಗಿನ ಪೊಲೀಸ್ ಸೇವೆಯಲ್ಲಿ ಕಮೀಷನರ್ ಆಗಿ ಕೆಲಸ ಮಾಡಿರುವುದು ನನ್ನ ಗರಿಷ್ಠ ತೃಪ್ತಿಯಾಗಿದೆ. ಡಿಜಿಯಾದ ಬಳಿಕವೂ ಒಂದು ವರ್ಷಕಾಲ ಮುಂದುವರೆಯಲು ಅವಕಾಶ ನೀಡಿದ್ದಾರೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ನಿರ್ಗಮಿತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.

ನೇಮಕಾತಿ ವಿಭಾಗದ ಡಿಜಿಯಾಗಿ ವರ್ಗಾವಣೆ ಆದೇಶ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಸಹಕಾರದಿಂದಲೇ ನಾನು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ಬೆಂಗಳೂರಿನ ಜನತೆ, ಮಾಧ್ಯಮಗಳ ಸಹಕಾರಕ್ಕೂ ವಂದನೆ ಸಲ್ಲಿಸುತ್ತೇನೆ ಎಂದರು.

ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ‌.‌ ನಗರ ಪೊಲೀಸ್ ಆಯುಕ್ತರಾಗಿ 22 ತಿಂಗಳು ಸೇವೆ ಮಾಡಿದ್ದು ಸಂಪೂರ್ಣ ತೃಪ್ತಿಯಿಂದ ವರ್ಗಾವಣೆಯಾಗುತ್ತಿದ್ದೇನೆ. ಇದು ನನ್ನ ಜೀವನದ ಗರಿಷ್ಠ ತೃಪ್ತಿ ಎಂದೇ ಹೇಳಬಹುದು. ಪ್ರತಾಪ್ ರೆಡ್ಡಿ ಸಹ ಸಮರ್ಥ ಅಧಿಕಾರಿಯಾಗಿದ್ದು, ಬಹುಶಃ ಅವರು ಮಂಗಳವಾರ ಅಧಿಕಾರ ಸ್ವೀಕರಿಸಬಹುದು ಎಂದು ಮಾಹಿತಿ ನೀಡಿದರು.

ಗರಿಷ್ಠ ತೃಪ್ತಿಯಿಂದ ವರ್ಗಾವಣೆಯಾಗುತ್ತಿದ್ದೇನೆ

ಆಯುಕ್ತರಾಗಿ ಎದುರಿಸಿದ ಸವಾಲುಗಳ ಬಗ್ಗೆ ಪ್ರತಿಕ್ರಿಯಿಸಿದ ಪಂತ್, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸೇರಿದಂತೆ ಅನೇಕ ದೊಡ್ಡಮಟ್ಟದ ಅಪರಾಧ ಪ್ರಕರಣಗಳಲ್ಲಿ ನಮ‌್ಮ‌‌ ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದಾರೆ. ನಗರದಲ್ಲಿ ಇಂದು ರೌಡಿ ಚಟುವಟಿಕೆ, ಮಾದಕ ದಂಧೆ ನಿಯಂತ್ರಣಕ್ಕೆ ಬಂದಿದೆ. ಸೈಬರ್ ಕ್ರೈಮ್ ತಡೆಗೆ ಸಿಐಆರ್ ಮಾದರಿ‌ ಜಾರಿಗೆ ತಂದಿದ್ದೇವೆ. ಇಂದು ದೇಶದಲ್ಲೇ ಸಿಐಆರ್ ಮಾದರಿ ಅನುಸರಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿ, ನಾನು ಈವರೆಗೂ ಅಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿಲ್ಲ. ನಮ್ಮ ಹಿರಿಯ ಐಪಿಎಸ್ ಅಧಿಕಾರಿಗಳಾದ ಅಜಯ್ ಸಿಂಗ್, ರಾಘವೇಂದ್ರ ಔರಾಧಕರ್ ಸೇರಿ ಹಲವರು ಕೆಲಸ ಮಾಡಿದ್ದಾರೆ. ಅವರ ಹಾಗೇ ಮುಂದಿನ ದಿನಗಳಲ್ಲಿ ನೇಮಕಾತಿ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಟ್ ಕಾಯಿನ್ ಪ್ರಕರಣದ ಕುರಿತು ಯಾವುದೇ ಗೊಂದಲವಿಲ್ಲ. ಕೇಂದ್ರ ತನಿಖಾ ಸಂಸ್ಥೆ ಮಾಡಬೇಕಾದ ಕೆಲಸವನ್ನು ನಾವು ತನಿಖೆ ಮಾಡಿದ್ದೇವೆ. ಈ ಬಗ್ಗೆ‌ ನನಗೆ‌ ಖುಷಿಯಿದೆ. ಯಾವುದೇ ಆಪಾದನೆ ಒಪ್ಪಲು ಸಾಧ್ಯವಿಲ್ಲ. ಅದೇ ರೀತಿ ಚಂದ್ರು ಕೊಲೆ‌ ಪ್ರಕರಣಕ್ಕೂ ವರ್ಗಾವಣೆಗೂ ತಳಕುಹಾಕಬೇಡಿ‌‌ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಬೈಕ್​ ರೇಸರ್​ ಹತ್ಯೆ ಪ್ರಕರಣ: ರೋಚಕತೆ ತನಿಖೆಯಲ್ಲಿ ಕೊನೆಗೂ ಬಂಧಿಯಾದ ಹೆಂಡತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.