ETV Bharat / city

ರೈಲ್ವೆ ಪೊಲೀಸರಿಗೆ ಕೊರೊನಾ ದೃಢ: ಆರೋಗ್ಯ ಇಲಾಖೆ ಎಡವಟ್ಟಿನಿಂದ ವರದಿ ವಿಳಂಬ - ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಸ್ಟೇಷನ್

ಹತ್ತು ದಿನದ ಹಿಂದೆಯೇ ಕೋವಿಡ್​ ಟೆಸ್ಟ್​ ಮಾಡಿಸಲಾಗಿತ್ತಾದರೂ ಆರೋಗ್ಯ ಇಲಾಖೆಯ ಎಡವಟ್ಟಿನಿಂದಾಗಿ ವರದಿ ತಡವಾಗಿ ಬಂದಿದ್ದು, ರೈಲ್ವೆ ಪೊಲೀಸರಿಗೆ ಸೋಂಕು ದೃಢವಾಗಿದೆ.

Bengaluru railway police infected with covid 19
ರೈಲ್ವೆ ಪೊಲೀಸರಿಗೆ ಕೊರೊನಾ ಧೃಡ
author img

By

Published : Jul 13, 2020, 10:51 AM IST

ಬೆಂಗಳೂರು: ಉತ್ತರ ಭಾರತ‌ ಮೂಲದ ಕಾರ್ಮಿಕರ ತಪಾಸಣೆ, ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ಮತ್ತು ಸಿಲಿಕಾನ್ ಸಿಟಿಯಿಂದ ತಮ್ಮ ತಮ್ಮ ಊರುಗಳಿಗೆ ಜನರನ್ನ ಕಳುಹಿಸುವ ವೇಳೆ ಕಾರ್ಯ ನಿರ್ವಹಿಸಿದ್ದ ರೈಲ್ವೆ ಪೊಲೀಸರಿಗೆ ಈಗ ಕೊರೊನಾ ವೈರಸ್​ ಅಂಟಿದೆ.

ರೈಲ್ವೆ ಎಸ್ಪಿ ಕಚೇರಿಯ ಐದು ಮಂದಿಗೆ, ಸಂಗೊಳ್ಳಿ ರಾಯಣ್ಣ ಪೊಲೀಸ್ ಠಾಣೆಯ ಏಳು ಸಿಬ್ಬಂದಿಗೆ, ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಸ್ಟೇಷನ್​​ನ ಐವರು ಸಿಬ್ಬಂದಿಗೆ‌ ಸೋಂಕು ದೃಢವಾಗಿದೆ.

ಹತ್ತು ದಿನದ ಹಿಂದೆಯೇ ಪೊಲೀಸರಿಗೆ ಕೋವಿಡ್​ ಟೆಸ್ಟ್​ ಮಾಡಿಸಲಾಗಿತ್ತಾದರೂ ಆರೋಗ್ಯ ಇಲಾಖೆಯ ಎಡವಟ್ಟಿನಿಂದಾಗಿ ವರದಿ ತಡವಾಗಿ ಬಂದಿದೆ. ಈ ಮಧ್ಯೆ ಸೋಂಕಿತ ಸಿಬ್ಬಂದಿಯ ಸಂಪರ್ಕ ಜಾಲ ಕೂಡ ದೊಡ್ಡದಾಗಿದ್ದು, ನೂರಕ್ಕೂ‌ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಮತ್ತೊಂದೆಡೆ ಯಶವಂತಪುರ ಮತ್ತು ಕಂಟೇನ್ಮೆಂಟ್​ ರೈಲ್ವೆ ನಿಲ್ದಾಣ ಸಿಬ್ಬಂದಿಗೆ ಕೂಡ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಇನ್ನೂ ಕೂಡ ವರದಿ ಕೈ ಸೇರಿಲ್ಲ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.