ETV Bharat / city

ಬಿಡಿಎ ಭ್ರಷ್ಟರಿಗೆ ಚಳಿ ಬಿಡಿಸಿದ ಖಾಕಿ: ಆರು ಮಂದಿ ಆರೋಪಿಗಳ ಬಂಧನ - ಬಿಡಿಎನಲ್ಲಿ ಅಕ್ರಮ ಆರೋಪ, ಆರು ಮಂದಿ ಬಂಧನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರು ಸೇರಿದಂತೆ ಆರು ಮಂದಿಯನ್ನು ಅಕ್ರಮವಾಗಿ ನಿವೇಶನಗಳ ಹಂಚಿಕೆ ಮಾಡಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.

bengaluru-police-arrests-6-person-including-bda-staff-over-corruption
ಬಿಡಿಎ ಭ್ರಷ್ಟರಿಗೆ ಚಳಿ ಬಿಡಿಸಿದ ಖಾಕಿ: ಆರು ಮಂದಿ ಆರೋಪಿಗಳ ಬಂಧನ
author img

By

Published : Jan 28, 2022, 10:57 AM IST

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ನಿವೇಶನಗಳ ಹಂಚಿಕೆ ಮಾಡಿದ ಆರೋಪದಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರು ಸೇರಿದಂತೆ ಆರು ಮಂದಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ‌.

ಬಿಡಿಎ ವಿಚಕ್ಷಣ ದಳ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬಿಡಿಎ ನೌಕರರ ಲೋಹಿತ್, ಸುನೀಲ್, ಮಂಜುನಾಥ್ ನಾಯಕ್, ರಾಮಚಂದ್ರ, ಬ್ರೋಕರ್ ವಿಕ್ರಮ್ ಜೈನ್ ಎಂಬುವವರನ್ನು ಬಂಧಿಸಿ, ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಬಿಡಿಎನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿರುವ ಲೋಹಿತ್, ಕಂಪ್ಯೂಟರ್ ವಿಭಾಗದ ಡೇಟಾ ಆಪರೇಟರ್ ಸುನೀಲ್ ಹಾಗೂ ಮಧ್ಯವರ್ತಿಗಳಾದ ಪವನ್, ವಿಕ್ರಂ ಜೈನ್, ಮಂಜು ನಾಯಕ್, ರಾಮಚಂದ್ರ ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳು ಎಚ್‌ಬಿಆರ್ ಲೇಔಟ್, ವಿಶ್ವೇಶ್ವರಯ್ಯ ಲೇಔಟ್, ಕೆಂಪೇಗೌಡ ಲೇಔಟ್ ಸೇರಿ ನಗರದ ಪ್ರತಿಷ್ಠಿತ ಲೇಔಟ್‌ನಲ್ಲಿರುವ ನಿವೇಶನಗಳನ್ನು ಅಕ್ರಮವಾಗಿ ಕಬಳಿಸುತ್ತಿದ್ದರು. ಬಳಿಕ ಇ-ಹರಾಜು ಮೂಲಕ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಳೆದ ವರ್ಷ ಬಿಡಿಎ ಮೇಲೆ ಎಸಿಬಿ ಬೃಹತ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿ ಎಫ್​ಐಆರ್ ದಾಖಲು ಮಾಡಲು ಅನುಮತಿ ಕೇಳಿದ್ದ ಎಸಿಬಿಗೆ, ರಾಜ್ಯ ಸರ್ಕಾರ 25 ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಲು ಅನುಮತಿ ನೀಡಿದ್ದು ಈಗ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ‌. ಈ ಪ್ರಕರಣದಲ್ಲಿ ಮಧ್ಯವರ್ತಿಗಳ ಜತೆ ಅಧಿಕಾರಿಗಳು ಶಾಮೀಲಾಗಿ ವಂಚಿಸಿದ್ದಾರೆ ಎಂಬುದು ಗೊತ್ತಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ: 3 ವರ್ಷದ ಹೆಣ್ಣು ಮಗುವಿನ ಮೇಲೆ 30 ವರ್ಷದ ಕಾಮುಕನಿಂದ ಅತ್ಯಾಚಾರ ಯತ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.