ETV Bharat / city

ಕೇವಲ 90 ರೂಪಾಯಿ ಬಂಡವಾಳ ಹಾಕಿ ₹9 ಲಕ್ಷ ಮೌಲ್ಯದ 90 ಸೈಕಲ್​ ಕದ್ದ ಚೋರ - ಈಟಿವಿ ಭಾರತ ಕರ್ನಾಟಕ

ಕಟಿಂಗ್​ ಪ್ಲೇಯರ್​ ಬಳಸಿಕೊಂಡು ಸೈಕಲ್​ ಕಳ್ಳತನ ಮಾಡ್ತಿದ್ದ ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Bengaluru police arrest high end bicycle thief

author img

By

Published : Sep 5, 2022, 1:31 PM IST

ಬೆಂಗಳೂರು: ಕಳ್ಳತನಕ್ಕೆ ಕಳ್ಳರು ಹಾಕುವ ಬಂಡವಾಳ ಒಮ್ಮೊಮ್ಮೆ ಸಾವಿರ ರೂಪಾಯಿ ಲೆಕ್ಕದಲ್ಲಿದ್ದರೆ, ಕೆಲವೊಮ್ಮೆ ಸ್ಮಾರ್ಟ್ ಆಗಿ ವಿಚಾರ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡ್ತಾರೆ. ಇಲ್ಲೊಬ್ಬ ಕಳ್ಳ ಕೂಡ ಮಾಡಿದ್ದು ಕೂಡಾ ಅದನ್ನೇ.

ಕಳ್ಳನೋರ್ವ ಕೇವಲ 90 ರೂಪಾಯಿ ಕಟಿಂಗ್​ ಪ್ಲೇಯರ್​​​ ಬಳಸಿಕೊಂಡು ಹತ್ತಾರು ಸಾವಿರ ರೂಪಾಯಿ ಮೌಲ್ಯದ ಬೈಸಿಕಲ್​​ ಖದೀಯುತ್ತಿದ್ದ. ಆಂಧ್ರಪ್ರದೇಶದ ಚಿತ್ತೂರು ಮೂಲದ ನವೀನ್ ಅಪಾರ್ಟ್​​ಮೆಂಟ್​​​ಗಳ ಮುಂದೆ ಪಾರ್ಕಿಂಗ್​ ಮಾಡಿದ್ದ ಬೆಲೆ ಬಾಳುವ ಬೈಸಿಕಲ್​ ಕಳ್ಳತನ ಮಾಡ್ತಿದ್ದನು.

ಸಾವಿರಾರು ರೂ. ಮೌಲ್ಯದ ಸೈಕಲ್​ ಕಳ್ಳತನ ಮಾಡ್ತಿದ್ದ ಆರೋಪಿ ಬಂಧನ

ಇದನ್ನೂ ಓದಿ: ಫುಲ್ ಟೈಂ ಮೆಕ್ಯಾನಿಕ್, ಪಾರ್ಟ್ ಟೈಂ ಕಳ್ಳತನ.. ಇಬ್ಬರು ಆರೋಪಿಗಳ ಬಂಧನ

ಬೆಂಗಳೂರಿನ ಮಹದೇವಪುರ ಸುತ್ತಮುತ್ತಲು ಬೈಸಿಕಲ್​​ ಕದ್ದು ಅವುಗಳನ್ನು ಅತಿ ಕಡಿಮೆ ಬೆಲೆಗೆ ಸೆಕ್ಯೂರಿಟಿ ಗಾರ್ಡ್​​​​ಗಳಿಗೆ ಮಾರಾಟ ಮಾಡುತ್ತಿದ್ದನಂತೆ. ಸೈಕಲ್​ ಕದ್ದರೆ ಯಾರೂ ದೂರು ಸಹ ನೀಡಲ್ಲ ಎಂಬ ಕಾರಣಕ್ಕಾಗಿ ಕಳ್ಳತನ ಮಾಡ್ತಿದ್ದನಂತೆ. ಆದರೆ, ಈತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನಿಂದ 9 ಲಕ್ಷ ರೂ ಮೌಲ್ಯದ 90 ಬೈಸಿಕಲ್​ ಸೀಜ್ ಮಾಡಲಾಗಿದೆ. ಸೈಕಲ್​ ಕಳೆದುಕೊಂಡವರು ಸೂಕ್ತ ದಾಖಲೆ ಕೊಟ್ಟು ಅವುಗಳನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಮಹದೇವಪುರ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.