ಬೆಂಗಳೂರು: ಮಳೆ ಬಂದು ಬೆಳೆಹಾನಿಯಾಗಿ ಸಂಕಷ್ಟಕ್ಕೀಡಾಗಿರುವ ರೈತರು ಒಂದೆಡೆಯಾದ್ರೆ, ಇನ್ನೊಂದೆಡೆ ಏರಿಕೆಯಾಗಿರೋ ಬೆಲೆಗೆ ಈರುಳ್ಳಿ ಕೊಂಡ್ಕೊಳೋಕೆ ಆಗದೆ ತತ್ತರಿಸಿರುವ ಗ್ರಾಹಕರಿದ್ದು, ಈ ಮಧ್ಯೆ ಈರುಳ್ಳಿಯತ್ತ ಗ್ರಾಹಕರು ಬರ್ತಾನೇ ಇಲ್ವಲ್ಲಾ ಅಂತ ಮಾರಾಟಗಾರರು ತಲೆ ಮೇಲೆ ಕೈಹೊತ್ತುಕೊಳ್ಳೋ ಸ್ಥಿತಿ ಎದುರಾಗಿದೆ.
ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಕೆ.ಜಿಗೆ 100 ರಿಂದ 130 ರೂ. ಆಗಿರೋ ಹಿನ್ನೆಲೆ, ಕಡಿಮೆ ಗುಣಮಟ್ಟದ ಈರುಳ್ಳಿಗಳನ್ನು 40-60 ರೂಪಾಯಿಗೆ ಹಾಗೂ ಸಣ್ಣಗಾತ್ರದ ಈರುಳ್ಳಿಗೆ ಕೆ.ಜಿಗೆ 50 ರಂತೆ ಮಾರಾಟ ಮಾಡಲಾಗುತ್ತಿದೆ. ಸೇಬುಹಣ್ಣಿನ ಬೆಲೆಗಿಂತಲೂ ಹೆಚ್ಚು ಬೆಲೆಯಾಗಿರುವ ಈರುಳ್ಳಿ ಕೊಂಡುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಗೃಹಿಣಿಯರು ಈರುಳ್ಳಿ ಬೆಲೆ ಕೇಳಿಯೇ ದಂಗಾಗಿದ್ದಾರೆ. 10-15 ಕೆಜಿ ಕೊಳ್ಳುತ್ತಿದ್ದ ಹೋಟೆಲ್ ವ್ಯಾಪಾರಸ್ಥರೂ ಕೂಡಾ ಐದು ಕೆ.ಜಿಯಷ್ಟು ಕೊಂಡೋಗುತ್ತಿದ್ದಾರೆ. ಹೀಗೇ ಆದರೆ ಈರುಳ್ಳಿ ವ್ಯಾಪಾರ ಕಷ್ಟ ಅಂತಾರೆ ಈರುಳ್ಳಿ ಮಾರಾಟಗಾರರು.
ಈ ಕುರಿತು ಯಶವಂತಪುರ ಮಾರುಕಟ್ಟೆ ಈಟಿವಿ ಭಾರತ್ ಜೊತೆ ಮಾತನಾಡಿದ ಕೆಲ ಗ್ರಾಹಕರು, ಈರುಳ್ಳಿ ಬೆಲೆ ಕೇಳಿಯೇ ಕಣ್ಣಲ್ಲಿ ನೀರು ಬರುವ ಹಾಗಾಗಿದೆ. ಸರ್ಕಾರ ಏನಾದ್ರು ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.