ETV Bharat / city

Missing 2000 crores.. ಬೆಂಗಳೂರಿನಾದ್ಯಂತ ಆಪ್​ನಿಂದ ರಸ್ತೆ 'ಗುಂಡಿಗಳ ಪೂಜೆ' - ಬೆಂಗಳೂರು ರಸ್ತೆ ಸಮಸ್ಯೆ

ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದ್ದು, ಜನರು ಬಿಬಿಎಂಪಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಪ್​ ಪಕ್ಷದಿಂದ ವಿನೂತನ ಪ್ರತಿಭಟನೆ ನಡೆದಿದೆ.

bangalore Pothole problem
"ಗುಂಡಿಗಳ ಪೂಜೆ"
author img

By

Published : Oct 20, 2021, 1:28 PM IST

ಬೆಂಗಳೂರು: ನಗರದಲ್ಲಿ ಕೋಟ್ಯಂತರ ವೆಚ್ಚದ ರಸ್ತೆಗಳು ಕಾಮಗಾರಿಯ ಕಳಪೆ ಮಟ್ಟವನ್ನು ಎತ್ತಿ ತೋರಿಸುತ್ತಿವೆ. ಪ್ರತಿ ಡಾಂಬರು ರಸ್ತೆಗಳಲ್ಲಿ ಅನೇಕ ಗುಂಡಿಗಳಿವೆ. ರಸ್ತೆಗುಂಡಿಗೆ ಬಿದ್ದರೂ ಅಪಾಯ, ತಪ್ಪಿಸಲು ಹೋಗಿ ಅಡ್ಡಾದಿಡ್ಡಿ ವಾಹನ ಓಡಿಸಿದರೂ ಅಪಾಯ ಎನ್ನುವ ಪರಿಸ್ಥಿತಿಯಿದೆ.

ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ

ಇಷ್ಟಾದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಕ್ರಮ ಕೈಗೊಳ್ಳುವ ವಿಚಾರ ಕೇವಲ ಹೇಳಿಕೆಗೆ ಸೀಮಿತವಾಗಿದ್ದು, ನಗರದ ಪ್ರಮುಖ ಪ್ರದೇಶ ಸೇರಿದಂತೆ ಹೊರವಲಯಗಳ ರಸ್ತೆಗಳಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚು ಕಾಣುತ್ತಿವೆ ಎನ್ನುವ ಅಸಮಾಧಾನದ ಮಾತುಗಳು ಕೇಳಿಬಂದಿದವೆ. ಅಷ್ಟೇ ಅಲ್ಲದೇ ಜಲ ಮಂಡಳಿಯ ಮ್ಯಾನ್ ಹೋಲ್​​ಗಳು ರಸ್ತೆ ಸಮನಾಂತರಕ್ಕೆ ಇರದೇ, ರಸ್ತೆಯ ಮೇಲೆ ಬಂದು ಅಥವಾ ರಸ್ತೆ ಸಮತಟ್ಟಿಗಿಂತ ಆಳದಲ್ಲಿದ್ದು, ವಾಹನಗಳು ಆಯತಪ್ಪಿ ಬೀಳುವ ಸ್ಥಿತಿಯಲ್ಲಿದೆ.

ಜನರ ಕಣ್ಣೊರೆಸಲು ಪಾಲಿಕೆ ಗುಂಡಿ ಮುಚ್ಚುವ ಪ್ರಯತ್ನ ನಡೆಸಿದರೂ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮತ್ತೆ ಮತ್ತೆ ಕಿತ್ತು ಬರುತ್ತಿವೆ. ಮತ್ತೆ ಗುಂಡಿ ನಿರ್ಮಾಣವಾಗುತ್ತಿವೆ. ಮಳೆ ಬಂದಾಗ ಈ ಹೊಂಡಗಳಲ್ಲಿ ನೀರು ತುಂಬುವುದರಿಂದ ವಾಹನ ಸವಾರರು ತಿಳಿಯದೇ ಈ ಗುಂಡಿಗಳಿಂದಾಗಿ ಆಯತಪ್ಪಿ ಬೀಳುವ ಘಟನೆಗಳು, ಗಾಯಗೊಳ್ಳುವುದು ಸಾಮಾನ್ಯವಾಗಿವೆ. ಕಳೆದ ತಿಂಗಳು ರಸ್ತೆಗುಂಡಿಯಿಂದಲೇ ಮೂವರು ಸಾವನ್ನಪ್ಪಿದ್ದಾರೆ.

ಇನ್ನು ಬಿಬಿಎಂಪಿಯ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಹಲವು ಸಂಘಟನೆಗಳು ಗುಂಡಿ ಪೂಜೆ ಹೆಸರಿನಲ್ಲಿ ಪ್ರತಿಭಟಿಸಿ, ಪಾಲಿಕೆ ವಿರುದ್ಧ ವ್ಯಂಗ್ಯವಾಡಿದರೂ ರಸ್ತೆ ಸರಿಪಡಿಸಲಾಗುತ್ತಿಲ್ಲ. ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ನಡೆಸಿದರೂ ರಸ್ತೆಗುಂಡಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಮಳೆ ನೆಪ ಹೇಳಿ ಪಾಲಿಕೆಯೂ ಜಾರಿಕೊಳ್ಳುತ್ತಿದೆ ಎಂದು ಆಪ್​ ಆರೋಪಿಸಿದೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಆತಂಕದಲ್ಲಿ ಜನತೆ

ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲೇ ವಾರ್ಷಿಕವಾಗಿ 46.10 ಕೋಟಿ ರೂ. ಖರ್ಚು ಮಾಡುತ್ತಿದೆ. ಇದಲ್ಲದೇ ರಸ್ತೆ ಅಭಿವೃದ್ಧಿ, ಡಾಂಬರೀಕರಣ ಹೆಸರಿನಲ್ಲಿ 2015-16 ರಿಂದ ಈವರೆಗೆ 20,060 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಆಮ್​ ಆದ್ಮಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ಆಪ್ ಪಕ್ಷದಿಂದ "ಗುಂಡಿಗಳ ಪೂಜೆ":

ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಲು, ಜನ ಪ್ರತಿನಿಧಿಗಳನ್ನು ಎಚ್ಚರಿಸಲು ಆಮ್ ಆದ್ಮಿ ಪಕ್ಷ "ಗುಂಡಿಗಳ ಪೂಜೆ" ಹೆಸರಿನ ಪ್ರತಿಭಟನೆಯನ್ನು ನಗರದಾದ್ಯಂತ ನಡೆಸಿದೆ. ಜೀವನ್ ಭೀಮಾನಗರ ಮುಖ್ಯರಸ್ತೆಯ ಓಂ ಶಕ್ತಿ ದೇವಸ್ಥಾನದ ಎದುರು, ಬೆನ್ನಿಗಾನಹಳ್ಳಿ ವಾರ್ಡ್ ಕಸ್ತೂರಿನಗರ ಮುಖ್ಯರಸ್ತೆಯಲ್ಲಿ, ಸಿವಿ ರಾಮನ್ ನಗರದ ವಾರ್ಡ್ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ, ಹೆಬಿಆರ್ ವಾರ್ಡ್, ಕೆ.ಜಿ ಹಳ್ಳಿ, ನಾಗಾವರ, ಎಮ್ ಎಸ್ ನಗರ, ಪುಲಕೇಶಿನಗರ, ಮುನೇಶ್ವರ ನಗರ, ಬಾಪೂಜಿ ನಗರ, ದತ್ತಾತ್ರೇಯ ವಾರ್ಡ್, ಸುಂಕೇನಹಳ್ಳಿ ಹಾಗೂ ಮಲ್ಲೇಶ್ವರಂ ನಲ್ಲಿ ಗುಂಡಿಗಳಿಗೆ ಪೂಜೆ ಮಾಡಿ, ಆಡಳಿತ ಪಕ್ಷಗಳ ವೈಫಲ್ಯವನ್ನು ಎತ್ತಿ ತೋರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.