ETV Bharat / city

ಬೆಂಗಳೂರು ಆತ್ಮಹತ್ಯೆಯ ಡೆತ್‌ನೋಟ್‌: ಅಪ್ಪನ ರಾಸಲೀಲೆ, ದೌರ್ಜನ್ಯಗಳನ್ನು ಇಂಚಿಂಚೂ ವಿವರಿಸಿದ ಮಕ್ಕಳು!

ಚಂದನವನದಂತಿದ್ದ ಆ ಸುಂದರ ಕುಟುಂಬವೀಗ ಸ್ಮಶಾನವಾಗಿದೆ. ಒಂದೇ ಕುಟುಂಬದ ಐವರು ನೇಣು ಕುಣಿಕೆಗೆ ಕೊರಳೊಡ್ಡಿದ್ದರೆ, ಮನೆ ಯಜಮಾನ ಶಂಕರ್ ಪತ್ನಿ-ಪುತ್ರಿಯರು-ಪುತ್ರನ ಮೇಲೆಯೇ ಬೆರಳು ಮಾಡಿ ತೋರಿಸಿದ್ದರು. ಆದರೆ ಮೂವರು ಮಕ್ಕಳು ಬರೆದಿರುವ 27 ಪುಟದ ಡೆತ್ ನೋಟ್ ಶಂಕರ್​​ಗೆ ತಿರುಗುಬಾಣವಾಗಿದೆ.

Bangalore
ಒಂದೇ ಕುಟುಂಬದ ಐವರ ಸಾವು ಪ್ರಕರಣ
author img

By

Published : Sep 20, 2021, 8:44 PM IST

Updated : Sep 20, 2021, 8:55 PM IST

ಬೆಂಗಳೂರು: ಒಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಕ್ಷಣಕ್ಕೊಂದು‌ ತಿರುವು ಸಿಗುತ್ತಿದೆ. ಮಕ್ಕಳು ಬರೆದಿರುವ ಡೆತ್‌ನೋಟ್ ಶಂಕರ್ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ಪುತ್ರಿಯರು ಸಹ ಪತಿಯರ ಮೇಲೆಯೂ ಸಾಕಷ್ಟು ಆರೋಪ‌ ಮಾಡಿದ್ದಾರೆ. ಹಾಗಾಗಿ ಶಂಕರ್ ಸೇರಿದಂತೆ ಇಬ್ಬರು ಅಳಿಯಂದಿರನ್ನು ವಿಚಾರಣೆಗೆ ಬರುವಂತೆ ಪೊಲೀಸರು ತಿಳಿಸಿದ್ದಾರೆ. ಹೀಗೆ ಇಂದು ಬೆಳಗ್ಗೆ ಠಾಣೆಗೆ ಬಂದವರು ಸಂಜೆಯವರೆಗೂ ಕಾದು,ಕಾದು ಸುಸ್ತಾಗಿ ಮನೆ ಕಡೆ ತೆರಳಿದ್ದಾರೆ.

ಆ ಮನೆಯಲ್ಲಿ ಹಣ, ಆಸ್ತಿ, ಅಂತಸ್ತು ಎಲ್ಲವೂ ಇದ್ದರೂ ನೆಮ್ಮದಿ ಮಾತ್ರ ಇರಲಿಲ್ಲ. ಚಂದನವನದಂತಿದ್ದ ಸುಂದರ ಕುಟುಂಬವೀಗ ಸ್ಮಶಾನವಾಗಿದೆ. ಒಂದೇ ಕುಟುಂಬದ ನಾಲ್ವರು ನೇಣು ಕುಣಿಕೆಗೆ ಕೊರಳೊಡ್ಡಿದ್ದರೆ, ಮನೆ ಯಜಮಾನ ಶಂಕರ್ ಪತ್ನಿ-ಪುತ್ರಿಯರು-ಪುತ್ರನ ಮೇಲೆಯೇ ಬೆರಳು ಮಾಡಿ ತೋರಿಸಿದ್ದರು. ಆದರೆ ಮೂವರು ಮಕ್ಕಳು ಬರೆದಿರುವ 27 ಪುಟದ ಡೆತ್ ನೋಟ್ ಶಂಕರ್​​ಗೆ ತಿರುಗುಬಾಣವಾಗುವ ಸಂಭವ ಹೆಚ್ಚಿದೆ

ಮೂವರು ಮಕ್ಕಳು ತಂದೆಯೇ ಸರಿ ಇಲ್ಲ ಎಂದು ಡೆತ್‌ನೋಟ್​​ನಲ್ಲಿ ಬರೆದಿದ್ದಾರೆ‌. ಹಾಗಾಗಿ ಪೊಲೀಸರು ಸತ್ಯಾಸತ್ಯತೆಯ ತನಿಖೆ ನಡೆಸುತ್ತಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ ಬ್ಯಾಡರಹಳ್ಳಿ ಠಾಣೆ ಇನ್ಸ್​​ಪೆಕ್ಟರ್ ರಾಜೀವ್, ಮನೆ ಯಜಮಾನ ಹಲ್ಲಗೆರೆ ಶಂಕರ್ ಸೇರಿದಂತೆ ಇಬ್ಬರು ಅಳಿಯಂದರಿಗೆ ನೋಟಿಸ್ ನೀಡಿದ್ದರು. ಹೀಗಾಗಿ, ಇಂದು ಬೆಳಗ್ಗೆ 10.50ಕ್ಕೆ ವಿಚಾರಣೆಗೆ ಆಗಮಿಸಿದ ಮೂವರು ಸಂಜೆಯವರೆಗೂ ಠಾಣೆಯಲ್ಲಿ ಕಾದು ವಾಪಸ್ಸಾದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: 5 ದಿನದಿಂದ ಶವಗಳ ಮಧ್ಯೆಯೇ ಅನ್ನ-ನೀರಿಲ್ಲದೆ ಬದುಕಿದ ಕಂದಮ್ಮ

ಸದ್ಯ ಸ್ಥಳ‌ ಮಹಜರು ವೇಳೆ 27 ಪುಟಗಳ 3 ಡೆತ್ ನೋಟ್, 3 ಲ್ಯಾಪ್ ಟಾಪ್ ಮತ್ತು ಪೆನ್ ಡ್ರೈವ್ ಸಿಕ್ಕಿದೆ‌. ಲ್ಯಾಪ್​​​ಟಾಪ್‌ನಲ್ಲಿ ತಂದೆ ಮೇಲೆ ಮಾಡಿರುವ ಆರೋಪಗಳ‌ ಸಾಕ್ಷಿ ಇದೆ ಎಂದು ಹೇಳಿದ್ದು‌, ಪೊಲೀಸರು ತಜ್ಞರ ಮೂಲಕ‌ ಲ್ಯಾಪ್ ಟಾಪ್ ಶೋಧ ನಡೆಸಿದ್ದಾರೆ.

ಜತೆಗೆ ಡೆತ್ ನೋಟ್ ಅವರೇ ಬರೆದಿದ್ದಾ? ಎಂಬುವುದನ್ನು ತಿಳಿಯಲು ಹ್ಯಾಂಡ್ ರೈಟಿಂಗ್ ತಜ್ಞರಿಗೆ ರವಾನಿಸಿದ್ದಾರೆ. ಹಾಗಾಗಿ ಸೂಕ್ತ ಪರಿಶೀಲನೆಯ ಬಳಿಕ ಶಂಕರ್ ಸೇರಿದಂತೆ ಇಬ್ಬರು ಅಳಿಯಂದಿರನ್ನು ವಿಚಾರಣೆಗೆ ಬುಲಾವ್ ನೀಡಲಿದ್ದಾರೆ. ಡೆತ್​​ನೋಟ್‌ನಲ್ಲಿ ಮಾಡಿ‌ರುವ ಆರೋಪಗಳ ಮೇಲೆ ಪ್ರಶ್ನೆ ಮಾಡಲಿದ್ದಾರೆ.

ಇಂದು ವಿಚಾರಣೆಗೆ ಕರೆದಿದ್ದರಾದರೂ ಬ್ಯಾಡರಹಳ್ಳಿ ಠಾಣೆ ಇನ್ಸ್​​ಪೆಕ್ಟರ್ ಅವರನ್ನು ಫ್ರೀಡಂ ಪಾರ್ಕ್​ನಲ್ಲಿ ನಡೆದ ಪ್ರತಿಭಟನೆಯ ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತ್ತು. ಹಾಗಾಗಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಡೆತ್‌ನೋಟ್ ಪರಿಶೀಲಿಸಿ ಮತ್ತೆ ವಿಚಾರಣೆಗೆ ಪೊಲೀಸರು ಕರೆಯಲಿದ್ದಾರೆ. ಸದ್ಯ ಸಂಜೆ 4.20ಕ್ಕೆ ಠಾಣೆಯಿಂದ ತೆಳಿದ ಶಂಕರ್ ಮತ್ತು ಅಳಿಯಂದಿರು ನಾಳೆ ಮೃತರ ತಿಥಿ ಕಾರ್ಯದ ಬಳಿಕ ಬುಧವಾರ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಗುವಿಗೆ ಕಿವಿ ಚುಚ್ಚಿಸುವ ವಿಚಾರದಲ್ಲಾದ ಮನಸ್ತಾಪವೇ ಐವರ ಸಾವಿಗೆ ಕಾರಣವಾಯ್ತಾ?

27 ಪುಟಗಳ ಡೆತ್ ನೋಟ್:

ಸಾವಿನ ಮನೆ ಶೋಧ ಮಾಡಿದ ಪೊಲೀಸರಿಗೆ 27 ಪುಟಗಳ ಡೆತ್‌ನೋಟ್ ಸಿಕ್ಕಿದೆ. ಅದರಲ್ಲಿ ಸಿಂಚನ ಆತ್ಮಹತ್ಯೆಗೆ ಶರಣಾದ ಕೊಠಡಿಯಲ್ಲಿ 4 ಪುಟಗಳ ಡೆತ್ ನೋಟ್, ಸಿಂಧೂರಾಣಿ ಸಾವಿಗೆ ಶರಣಾದ ಕೋಣೆಯಲ್ಲಿ 4 ಪುಟಗಳ ಡೆತ್ ನೋಟ್ ಹಾಗೂ ಪುತ್ರ ಮಧುಸಾಗರ್ ಕೊಠಡಿಯಲ್ಲಿ ಬರೋಬ್ಬರಿ 19 ಪುಟಗಳ ಡೆತ್ ನೋಟ್ ಸಿಕ್ಕಿದೆ‌.

'ಎಂಡ್ ಅಬ್ಯೂಸ್ ವುಮೆನ್ ಅಂಡ್ ಚಿಲ್ಡ್ರನ್' ಶೀರ್ಷಿಕೆ​​:

ಈ ಡೆತ್‌ನೋಟ್‌ಗಳಲ್ಲಿ ಮಕ್ಕಳು ತಂದೆಯ ಮೇಲೆ ಸಾಲು ಸಾಲು ಆರೋಪ ಮಾಡಿದ್ದಾರೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೊನೆಯಾಗಲಿ ಎಂಬ ಶೀರ್ಷಿಕೆಯಲ್ಲಿ ಮೂವರು ಮಕ್ಕಳು ಡೆತ್ ನೋಟ್ ಬರೆದಿದ್ದಾರೆ‌. ಅದರಲ್ಲಿ ಮಧುಸಾಗರ್ ತಂದೆಯ ಮೇಲೆ ಆರೋಪಿಸಿದರೆ, ಇಬ್ಬರು ಪುತ್ರಿಯರು ತಂದೆ ಸೇರಿದಂತೆ, ಗಂಡನ ಮನೆಯವರ ಮೇಲೂ ಆರೋಪಗಳ ಪಟ್ಟಿ ಮಾಡಿದ್ದಾರೆ.

ಇದನ್ನೂ ಓದಿ: ಹಣ-ಆಸ್ತಿ ಎಲ್ಲವೂ ಇತ್ತು.. ಮಾನಸಿಕ ನೆಮ್ಮದಿ ಮರೆಯಾಗಿತ್ತು: ಮಕ್ಕಳ ದಾಂಪತ್ಯದ ಬಿರುಕಿಗೆ ಇಡೀ ಕುಟುಂಬ ಬಲಿ

ಮದುವೆಗಿಂತ ಮೊದಲಿಂದಲೂ ಮನೆಯಲ್ಲಿ ಸ್ವಾತಂತ್ರ್ಯವಿರಲಿಲ್ಲ. ಮನೆಯಿಂದ ಹೊರ ಹೋಗಲು ತಂದೆ ಬಿಡ್ತಾ ಇರಲಿಲ್ಲ. ಗಂಡನ ಮನೆಯಲ್ಲೂ ಕಿರುಕುಳ ಆಗುತಿತ್ತು. ಇತ್ತ ಅಪ್ಪ ಕೂಡ ಗಂಡನ ಮನೆಗೆ ಹೋಗುವಂತೆ ಪದೇ ಪದೇ ಹೇಳುತ್ತಿದ್ದರು. ಇದರಿಂದ ನೆಮ್ಮದಿ ಇಲ್ಲದಂತಾಗಿತ್ತು ಎಂದು ಬರೆದು ನೇಣಿಗೆ ಕೊರಳು ಒಡ್ಡಿದ್ದಾರೆ.

ಪುತ್ರ ಮಧುಸಾಗರ್ ಡೆತ್ ನೋಟ್ ನಲ್ಲಿ ತಂದೆಯ ಮೇಲೆ ಸಿಡಿಗುಂಡಿನಂತೆ ಆರೋಪಗಳ ಬಾಂಬ್ ಸಿಡಿಸಿದ್ದಾರೆ. ಆರೋಪಗಳು ಹೀಗಿವೆ..

  • 'ಅಪ್ಪ ಶಂಕರ್​ಗೆ ಐವರು ಮಹಿಳೆರ ಜೊತೆ ಅಕ್ರಮ ಸಂಬಂಧ':

ಅಪ್ಪನ ರಾಸಲೀಲೆ ಕಹಾನಿಯನ್ನು ತೆರೆದಿಟ್ಟಿರುವ ಪುತ್ರ ಮಧುಸಾಗರ್ ತಂದೆಗೆ ಐವರು ಮಹಿಳೆಯರ ಜೊತೆಗೆ ಅಕ್ರಮ ಸಂಬಂಧವಿತ್ತು. ಅಲ್ಲದೇ ರಾಜಾಜಿನಗರ ಕಚೇರಿಯಲ್ಲಿ ಅನೈತಿಕ ಚಟುವಟಿಕೆ ನಡಿಯುತಿತ್ತು. ಇದು ಇಡೀ ಕುಟುಂಬದ ನೆಮ್ಮದಿ ಹಾಳು ಮಾಡಿತ್ತು. ಮತ್ತೋರ್ವ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಳ್ಳಲು ಮುಂದಾಗಿದ್ದ. ಆಕೆ ಒಪ್ಪಕೊಳ್ಳದಿದ್ದಾಗ ಆಕೆಯ ಮಗಳನ್ನು ನನಗೆ ಮದುವೆ ಮಾಡಿಸಿ ಹತ್ತಿರವಾಗಲು ಹವಣಿಸುತ್ತಿದ್ದ‌. ತಂದೆ ಅಕ್ರಮ ಸಂಬಂಧದ ಸರಮಾಲೆಯ ಹೆಸರು, ಫೋಟೋ ಎಲ್ಲವೂ ಲ್ಯಾಪ್ ಟಾಪ್​​ನಲ್ಲಿ ಇರುವುದಾಗಿಯೂ ಡೆತ್ ನೋಟ್​​ನಲ್ಲಿ ಬರೆದಿದ್ದಾರೆ.

  • 'ಅಪ್ಪ ಮಹಿಳೆಯರಿಗೆ ಹಣದ ಆಮಿಷ ವೊಡುತ್ತಿದ್ದ':

ತಂದೆ ಶಂಕರ್​​ಗೆ ಅಕ್ರಮ ಸಂಬಂಧ ಇತ್ತು. ಹೇಳಿ ಕೇಳಿ ಶ್ರೀಮಂತಿಕೆ ಇದ್ದಿದ್ದರಿಂದ ಮೊದಲು ಆರ್ಥಿಕ ಸಹಾಯ ಮಾಡಿ ನಂತರ ಮಹಿಳೆಯರನ್ನು ಬಲೆಗೆ ಕೆಡವಿ ಅಕ್ರಮ ಸಂಬಂಧ ಇಟ್ಟುಕೊಳ್ಳುತ್ತಿದ್ದ. ಮಾತಿನ ಮೂಲಕ ಮೋಡಿ ಮಾಡಿ ಬಲೆಗೆ ಕೆಡವುತ್ತಿದ್ದ ಎಂದು ಆರೋಪಿಸಿದ್ದಾರೆ.

  • 'ಅಪ್ಪ ಮನೆ ಮುರುಕ, ತುಂಬಾ ಸ್ವಾರ್ಥಿ':

ಅಪ್ಪ ಮನೆ ಮುರುಕ. ಮಹಿಳೆಯರು, ಹೆಣ್ಣು ಮಕ್ಕಳ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡು ಮನೆ ಮುರಿಯುವ ಕೆಲಸ ಮಾಡುತ್ತಿದ್ದ. ಅಲ್ಲದೇ ಮಕ್ಕಳನ್ನು ಸ್ವತಂತ್ರ್ಯವಾಗಿ ಓಡಾಡಲು ಬಿಡುತ್ತಿರಲಿಲ್ಲ. ತನ್ನದೇ ಪ್ರತಿಯೊಂದು ನಡೆಯಬೇಕು ಎನ್ನುವ ಸ್ವಾರ್ಥ ಇತ್ತು. ಹಣದ ಹುಚ್ಚು ಮೈಗಂಟಿಸಿಕೊಂಡಿದ್ದ. ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿಸಿದ್ದ ಮನೆಯೂ ಸೋರುತ್ತಿತ್ತು ಎಂದು ಬರೆದಿದ್ದಾರೆ.

  • 'ಅಮ್ಮನಿಗೆ ಪದೇ ಪದೇ ಕಿರುಕುಳ ಕೊಡುತ್ತಿದ್ದ':

ತಂದೆ ಅಮ್ಮನಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದ. ಮದುವೆಯಾದಾಗಿನಿಂದಲೂ ಚಿತ್ರಹಿಂಸೆ ನೀಡಿದ್ದ. ಬಾಯಿಗೆ ಚಪ್ಪಲಿ ತುರುಕಿ ಹಲ್ಲೆ ಮಾಡಿದ್ದ. ತಾನೇ ಅಕ್ರಮ ಸಂಬಂಧ ಇಟ್ಟುಕೊಂಡು ತಾಯಿಯ ಶೀಲದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದ.

  • 'ಅಕ್ಕಂದಿರಿಗೆ ಹೊಡೆಯಲು ಅಳಿಯಂದಿರಿಗೆ ಪ್ರೇರೇಪಣೆ':

ಇಬ್ಬರು ಅಕ್ಕಂದಿರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಸಂಸಾರ ಸರಿ ಮಾಡೋದನ್ನು ಬಿಟ್ಟು ಅಳಿಯಂದಿರಿಗೆ ಅಕ್ಕಂದಿರಿಗೆ ಹೊಡೆಯುವಂತೆ ಪ್ರೇರಣೆ ನೀಡುತ್ತಿದ್ದ. ಇದರಿಂದ ಅಕ್ಕಂದಿರು ಸಾಕಷ್ಟು ಹಿಂಸೆ ಅನುಭವಿಸಿದ್ದರು.

  • 'ಸಮಾಜದಲ್ಲಿ ಮುಖವಾಡ ಹಾಕಿ ಜೀವನ':

ತಂದೆ ಹೊರಗಿದ್ದಂತೆ ಮನೆಯಲ್ಲಿ ಇರ್ತಾ ಇರಲಿಲ್ಲ. ಮುಖವಾಡದ ಜೀವನ ನಡೆಸುತ್ತಿದ್ದ. ಹೊರಗೆ ಎಲ್ಲರ ಜತೆ ಚೆನ್ನಾಗಿರುತ್ತಿದ್ದ. ಆದರೆ ಮನೆಯಲ್ಲಿ ಮಾತ್ರ ಉಗ್ರನಾಗ್ತಿದ್ದ. ಅಲ್ಲದೇ ಸ್ವಂತ ತಂಗಿಯನ್ನೇ ಗಂಡನಿಂದ ದೂರ ಮಾಡಿದ್ದ.

ಆರೋಪ ತಳ್ಳಿ ಹಾಕಿದ ಶಂಕರ್​

  • 'ಡೆತ್ ನೋಟ್ ನಲ್ಲಿ ಬರೆದಿರೋದೆಲ್ಲವೂ ಸುಳ್ಳು':

ಬ್ಯಾಡರಹಳ್ಳಿ ಠಾಣೆಗೆ ಆಗಮಿಸಿದ ಶಂಕರ್ ಮಕ್ಕಳು ಡೆತ್ ನೋಟ್‌ನಲ್ಲಿ ಬರೆದಿರೋದೆಲ್ಲವೂ ಸುಳ್ಳು. ಹಂತಹಂತವಾಗಿ ಸತ್ಯ ತಿಳಿಯಲಿದೆ. ನಾನು ಪ್ರಾಮಾಣಿಕವಾಗಿದ್ದೇನೆ ಎಂದು ಮಕ್ಕಳ ಡೆತ್ ನೋಟ್ ಆರೋಪ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಇಂದು ಪೊಲೀಸರಿಂದ ಸ್ಥಳ ಮಹಜರು

Last Updated : Sep 20, 2021, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.