ETV Bharat / city

ಹಿಮಾಲಯಕ್ಕೆ ಟ್ರಕ್ಕಿಂಗ್ ಹೋಗಿದ್ದ ವೈದ್ಯ ನಾಪತ್ತೆ: ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ ಕುಟುಂಬಸ್ಥರು - ವಸಂತನಗರದ ನಿವಾಸಿಯಾಗಿರುವ ಚಂದ್ರ ಮೋಹನ್

ಟ್ರಕ್ಕಿಂಗ್​ ಹವ್ಯಾಸವಿರುವ ಬೆಂಗಳೂರಿನ ವೈದ್ಯ ಚಂದ್ರ ಮೋಹನ್​ ಹಿಮಾಲಯಕ್ಕೆ ಟ್ರಕ್ಕಿಂಗ್​ ಹೋಗಿದ್ದಾರೆ. ಆದರೆ, ಜೂನ್​ 20 ರಿಂದ ಚಂದ್ರ ಮೋಹನ್​ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಬಗ್ಗೆ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

A doctor missing who had gone to the Himalaya to trekking
ಹಿಮಾಲಯಕ್ಕೆ ಟ್ರಕ್ಕಿಂಗ್ ಹೋಗಿದ್ದ ವೈದ್ಯ ನಾಪತ್ತೆ
author img

By

Published : Jun 27, 2022, 11:52 AM IST

ಬೆಂಗಳೂರು: ಹಿಮಾಲಯ‌ ಪರ್ವತಕ್ಕೆ ಟ್ರಕ್ಕಿಂಗ್​ಗೆ ಹೋಗಿದ್ದ ವೈದ್ಯ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗದೇ ಕಂಗಲಾಗಿರುವ ಕುಟುಂಬಸ್ಥರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ಚಂದ್ರಮೋಹನ್ ಕಾಣೆಯಾಗಿದ್ದಾರೆ. ವಸಂತನಗರದ ನಿವಾಸಿಯಾಗಿರುವ ಚಂದ್ರ ಮೋಹನ್ ಬೈಕ್​ನಲ್ಲಿ ಟ್ರಕ್ಕಿಂಗ್ ಮಾಡುವುದು ಹವ್ಯಾಸವಾಗಿತ್ತು‌.‌

ಹಿಮಾಲಯ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಬೈಕ್ ಮೂಲಕ ಟ್ರಕ್ಕಿಂಗ್ ಮಾಡುತ್ತಿದ್ದರು. ಅದೇ ರೀತಿ ಕೆಲ ದಿನಗಳ ಹಿಂದೆ ಹಿಮಾಲಯಕ್ಕೆ‌ ಪರ್ವತಕ್ಕೆ ಚಾರಣ ಬೆಳೆಸಿದ್ದರು. ಆದರೆ, ಜೂನ್ 20 ರಿಂದ ಚಂದ್ರ ಮೋಹನ್ ಸಂಪರ್ಕಕ್ಕೆ‌ ಸಿಕ್ಕಿಲ್ಲ.‌ ಪೋನ್ ನಂಬರ್ ಸ್ವಿಚ್ಡ್​​ ಆಫ್ ಬರುತ್ತಿದೆ. ಇದರಿಂದ ಆತಂಕ ವ್ಯಕ್ತಪಡಿರುವ ಕುಟುಂಬಸ್ಥರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ‌ ಮಿಸ್ಸಿಂಗ್ ಕಂಪ್ಲೈಂಟ್ ನೀಡಿದ್ದಾರೆ‌.

ಇದನ್ನೂ ಓದಿ : ಬಯಲು ಶೌಚಕ್ಕೆಂದು ಹೋದ ಮಗ ನಾಪತ್ತೆ: ತಿಂಗಳಿನಿಂದ ಕಣ್ಣೀರು ಹಾಕುತ್ತಿರುವ ಹೆತ್ತ ಕರುಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.