ETV Bharat / city

ಸಿದ್ದರಾಮಯ್ಯ ಅವರು ನೀಡಿದ ಯೋಜನೆಗಳೇ ಚುನಾವಣೆ ಗೆಲ್ಲೋಕೆ ಸಾಕಿತ್ತು.. ಸಂಕಟ ತೋಡಿಕೊಂಡ ಕೈ ಮುಖಂಡರು

author img

By

Published : Jan 8, 2021, 8:40 PM IST

ಸಮಸ್ಯೆ ಆಲಿಸಿದ ನಾಯಕರು ಪ್ರತಿಯೊಬ್ಬರ ಮಾತುಗಳನ್ನು ವೇದಿಕೆ ಕೆಳಗೆ ಕುಳಿತು ಆಲಿಸಿದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷರು, ಹಾಗೂ ಹಿರಿಯ ನಾಯಕರು ಅಂತಿಮವಾಗಿ ಎಲ್ಲಾ ವಿಚಾರವನ್ನೂ ಗುರುತು ಹಾಕಿಕೊಂಡರು..

ಕಾಂಗ್ರೆಸ್​​ ಪಕ್ಷ ಸಂಘಟನೆಯಲ್ಲಿ ವಿಫಲ
ಕಾಂಗ್ರೆಸ್​​ ಪಕ್ಷ ಸಂಘಟನೆಯಲ್ಲಿ ವಿಫಲ

ಬೆಂಗಳೂರು : ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಪಕ್ಷದ ಸಂಘಟನೆ ವಿಫಲವಾಗುತ್ತಿದೆ. ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರಿನ ಮೈಸೂರು ರಸ್ತೆ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ನಾನಾ ಜಿಲ್ಲೆಗಳ ಕಾಂಗ್ರೆಸ್ ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ಮತ್ತು ಸಂಕಲ್ಪ ಸಮಾವೇಶದಲ್ಲಿ ಮುಖಂಡರಿಂದ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಪಕ್ಷದ ರಾಜ್ಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂಬ ಭರವಸೆ ನೀಡಿದ್ದಾರೆ.

ಚುನಾವಣೆ ಬಂದಾಗ ಮಾತ್ರ ವಿಶೇಷ ಕಾಳಜಿ : ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು, ಸಂಘಟನೆ ವಿಚಾರದಲ್ಲಿ ನಾವುಗಳೇ ವಿಫಲರಾಗುತ್ತಿದ್ದೇವೆ. ಪಕ್ಷದ ಸಂಘಟನೆ ವಿಚಾರದಲ್ಲಿ ನಾವು, ಪದಾಧಿಕಾರಿಗಳು, ಜಿಲ್ಲಾ ಸಂಘಟಕರು ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಇರುವ ಮುಖಂಡರುಗಳು ಚುನಾವಣೆ ಬಂದ್ರೆ ಮಾತ್ರ ವಿಶೇಷ ಕಾಳಜಿ ತೋರಿಸಿ ಕಾರ್ಯನಿರ್ವಹಿಸುತ್ತಾರೆ.

ಉಳಿದಂತೆ ಎಲ್ಲಿ ಇರುತ್ತಾರೆ ಎಂದು ಗೊತ್ತಾಗಲ್ಲ, ಸಮಸ್ಯೆಗಳು ಬಂದಾಗ ಬೇರೆ ಪಕ್ಷದವರು ಬಂದು ಸಮಸ್ಯೆ ಪರಿಹಾರ ಮಾಡುತ್ತಾರೆ. ನಾವು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಜೊತೆಗೆ ಕಾಂಗ್ರೆಸ್ ಈವರೆಗೂ ಮಾಡಿರುವ ಕೆಲಸಗಳನ್ನು ಧೈರ್ಯವಾಗಿ ಹೇಳಲು ಹೆದರುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಲಿಗೆ ನಾಯಕರ ವಿಫಲತೆ ಕಾರಣ : ಸಿದ್ದರಾಮಯ್ಯ ಅವರು ನೀಡಿರುವ ಯೋಜನೆಗಳೇ ಸಾಕಿತ್ತು ಚುನಾವಣೆಯಲ್ಲಿ ಗೆಲ್ಲಲು. ಆದ್ರೆ, ನಮ್ಮ ಜಿಲ್ಲಾ ನಾಯಕರು, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‌ ನಾಯಕರು ವಿಫಲರಾಗಿದ್ದಾರೆ. ಹೊಸ ಟೆಕ್ನಾಲಜಿಗಳನ್ನು ನಮ್ಮ ಪಕ್ಷದ ನಾಯಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲ. ಯುವಕರಿಗೆ, ಮಹಿಳೆಯರಿಗೆ ನಮ್ಮ ಪಕ್ಷದಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ, ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಜಿಲ್ಲಾ ಮುಖಂಡರು ವಿವರ ನೀಡಿದರು.

ಸಮಸ್ಯೆ ಆಲಿಸಿದ ನಾಯಕರು ಪ್ರತಿಯೊಬ್ಬರ ಮಾತುಗಳನ್ನು ವೇದಿಕೆ ಕೆಳಗೆ ಕುಳಿತು ಆಲಿಸಿದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷರು, ಹಾಗೂ ಹಿರಿಯ ನಾಯಕರು ಅಂತಿಮವಾಗಿ ಎಲ್ಲಾ ವಿಚಾರವನ್ನೂ ಗುರುತು ಹಾಕಿಕೊಂಡರು.

ಬಿಜೆಪಿ ಸೇರುವಂತೆ ಪೊಲೀಸರ ಒತ್ತಡ : ಇದರಲ್ಲಿ ಅತ್ಯಂತ ಪ್ರಮುಖವಾಗಿ ಬಿಜೆಪಿ ಪರವಾಗಿ ಪೊಲೀಸರು ನಮಗೆ ಬಲವಂತ ಮಾಡುತ್ತಿದ್ದು, ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನುವ ವಿಚಾರವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲಿದೆ. ಆದಷ್ಟು ಶೀಘ್ರ ಇಂತu ತಾಣಗಳಲ್ಲಿನ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.