ಬೆಂಗಳೂರು : ಲಾಕ್ಡೌನ್ 9ನೇ ದಿನಕ್ಕೆ ಕಾಲಿಟ್ಟಿದೆ. ಸಿಟಿ ಮಾರ್ಕೆಟ್‌ನಲ್ಲಿ ಜನರ ಸಂಖ್ಯೆ ವಿರಳವಾಗಿ ಕಂಡು ಬಂದಿತು.
ಓದಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಶಶಾಂಕ್ ಏಕಬೋಟೆ ಕೋವಿಡ್ಗೆ ಬಲಿ
ಸಿಟಿ ಮಾರ್ಕೆಟ್‌ನ ಬಹುತೇಕ ಕಂಟ್ರೋಲ್‌ಗೆ ತೆಗೆದುಕೊಂಡಿದ್ದ ಪೊಲೀಸರು, ತರಕಾರಿ, ಸೊಪ್ಪು, ಹಣ್ಣು, ಹೂವು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು.
ಜನ ಒಗ್ಗೂಡದಂತೆ ಖಾಕಿ ಕಣ್ಗಾವಲು ಇಟ್ಟಿದ್ದರು. ಪ್ರತಿರಸ್ತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ಹೊಯ್ಸಳ ಸಿಬ್ಬಂದಿ ನೀಡುತ್ತಿದ್ದರು.
ಹೊಯ್ಸಳ ವಾಹನದಲ್ಲಿ ಪೊಲೀಸರ ಗಸ್ತು ತಿರುಗಿದ್ದು, ಅಲ್ಲಲ್ಲಿ ಜನರು ಗುಂಪು ಸೇರಿದ್ದು ಬಿಟ್ಟರೆ ಕೆ.ಆರ್. ಮಾರ್ಕೆಟ್ ಪೂರ್ತಿ ಹತೋಟಿಗೆ ತೆಗೆದುಕೊಂಡಿದ್ದರು.