ETV Bharat / city

ಲಾಭದಲ್ಲಿ ನಡೆಯುವವರೆಗೂ ಬೆಮೆಲ್ ಮುಚ್ಚಲ್ಲ: ಸಚಿವ ನಿರಾಣಿ ಸ್ಪಷ್ಟನೆ - no privatization kgf bemel factory

ಎಲ್ಲಿಯವರೆಗೆ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿರುವ ಬೆಮೆಲ್ ಕಾರ್ಖಾನೆ ಲಾಭದಲ್ಲಿರುತ್ತದೋ ಅಲ್ಲಿಯವರೆಗೂ ಖಾಸಗೀಕರಣಗೊಳಿಸುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

bemel-is-not-closed-until-profit-is-made-says-murugesh-nirani
ಲಾಭದಲ್ಲಿ ನಡೆಯುವವರೆಗೂ ಬೆಮೆಲ್ ಮುಚ್ಚಲ್ಲ: ನಿರಾಣಿ ಸ್ಪಷ್ಟನೆ..!
author img

By

Published : Mar 24, 2022, 4:31 PM IST

Updated : Mar 24, 2022, 4:42 PM IST

ಬೆಂಗಳೂರು: ಎಲ್ಲಿಯವರೆಗೆ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿರುವ ಬೆಮೆಲ್ ಕಾರ್ಖಾನೆ ಲಾಭದಲ್ಲಿರುತ್ತದೋ ಅಲ್ಲಿಯವರೆಗೂ ಖಾಸಗೀಕರಣಗೊಳಿಸುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಬೆಮೆಲ್ ಕಾರ್ಖಾನೆ ಖಾಸಗೀಕರಣಗೊಳಿಸುತ್ತಿರುವ ಕುರಿತು ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಮಾತಿಗೆ ಸಚಿವರು ಪ್ರತಿಕ್ರಿಯಿಸಿದರು.

ಹೆಚ್ಚುವರಿ ಜಾಗ ಬಳಕೆಗೆ ಅವಕಾಶ: ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳ ಹೆಚ್ಚುವರಿ ಭೂಮಿಯನ್ನು ಆಯಾ ರಾಜ್ಯಕ್ಕೆ ಕೊಡಬೇಕು ಎಂದು ನೀತಿ ಆಯೋಗದ ತೀರ್ಮಾನವಾಗಿದೆ. ಅದರಂತೆ ಇಡೀ ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಅನ್ವಯ ಆಗುವಂತೆ ನೀತಿ ಆಯೋಗದ ಶಿಫಾರಸ್ಸಿನಂತೆ ಕಾರ್ಖಾನೆ ಪ್ರದೇಶ ಹೊರತುಪಡಿಸಿ ಐಡೆಲ್ ಇರುವ ಜಾಗ ಸದುಪಯೋಗಪಡಿಸಿಕೊಳ್ಳುವ ಕುರಿತು ಕೇಂದ್ರ ಸುತ್ತೋಲೆ ಹೊರಡಿಸಿದೆ. ಅದರಂತೆ, ಬೆಮೆಲ್‌ನ 1975 ಎಕರೆ ಹೆಚ್ಚುವರಿ ಭೂಮಿ ಕೆಐಎಡಿಬಿಗೆ ಕೊಡಲು ಶಿಫಾರಸ್ಸು ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ನಮಗೆ ಬಂದ ಮೇಲೆ ಕೋಲಾರದಲ್ಲಿ ಕೈಗಾರಿಕೆಗಳು ಬರುವ ಸಲುವಾಗಿ ಅದನ್ನು ಬಳಸಲಿದ್ದೇವೆ ಎಂದು ಹೇಳಿದ್ದಾರೆ.

ಚಿನ್ನದ ಗಣಿಯ 3,500 ಎಕರೆ ಮರಳಿ ರಾಜ್ಯಕ್ಕೆ: ಕೋಲಾರ ಗೋಲ್ಡ್ ಮೈನ್ಸ್‌ನ 16 ಸಾವಿರ ಎಕರೆ ಭೂಮಿ ಕೇಂದ್ರ ಸರ್ಕಾರದ ವಶದಲ್ಲಿದೆ. ಅದರಲ್ಲಿ 2 ಸಾವಿರ ಎಕರೆ ಒತ್ತುವರಿಯಾಗಿದೆ. ಉಳಿದಿದ್ದು ಸ್ವಾಧೀನದಲ್ಲಿದೆ. ಈಗ ಮೈನಿಂಗ್ ಬಂದ್ ಆಗಿದೆ.ಇಲ್ಲಿ ನಾವು ಕೇಂದ್ರಕ್ಕೆ ಕೊಟ್ಟಿದ್ದ 3500 ಎಕರೆಯಲ್ಲಿ ಚಿನ್ನ ಇದೆಯೇ ಎಂದು ಪರಿಶೀಲಿಸಿ ನಮಗೆ ಹಸ್ತಾಂತರಿಸಿ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು.

ಈ ಕುರಿತು ಪರಿಶೀಲಿಸಿದ ಕೇಂದ್ರ ಸರಕಾರ ಆ ಜಾಗದಲ್ಲಿ ಚಿನ್ನ ಇಲ್ಲ ಎಂಬ ವರದಿಯೊಂದಿಗೆ ನಾವು ಕೊಟ್ಟಿದ್ದ ಜಾಗವನ್ನು ಮರಳಿ ಕೊಡಲು ನಿರ್ಧರಿಸಿದೆ. ಸರ್ವೆ ನಂಬರ್ ಇತ್ಯಾದಿ ಪರಿಶೀಲಿಸಿ ಕಳುಹಿಸಿದ ನಂತರ ಕೆಜಿಎಫ್ ನ ಇಡೀ ವಲಯವನ್ನೇ ಲಯಬಿಲಿಟಿಸಹಿತ ನೀಡುವುದಾಗಿ ತಿಳಿಸಿದೆ. ಇದನ್ನು ಎರಡು ಹಂತದಲ್ಲಿ ಪಡೆಯಲಾಗುತ್ತದೆ. ಮೊದಲು 3500 ಎಕರೆ ಜಾಗ, ನಂತರ ಲಯಬಿಲಿಟಿ ಸೇರಿ ಇಡಿ ಕೆಜಿಎಫ್ ಪಡೆಯುವ ಕುರಿತು ಸಭೆ ನಡೆಸಿ ನಿರ್ಧಾರಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಖಾಸಗಿಯವರ ಬದ್ಧತೆ ನಮ್ಮ ಅಧಿಕಾರಿಗಳಿಗಿಲ್ಲ: ಹಿಂದೆ ಖಾಸಗಿಯವರು ಕೈಗಾರಿಕೆ ಮಾಡದ ಸ್ಥಿತಿ ಇದ್ದ ಕಾರಣಕ್ಕೆ ಸರ್ಕಾರ ಕಾರ್ಖಾನೆ ಆರಂಭಿಸಿತ್ತು. ಈಗ ಖಾಸಗಿಯವರೇ ಸ್ವಂತ ಕಾರ್ಖಾನೆ ಆರಂಭಿಸಿದ್ದಾರೆ. ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ಮುಚ್ಚಿದೆ, ಜೆಸ್ಡಬ್ಲ್ಯೂ ಲಾಭದಲ್ಲಿದೆ. ಇದಕ್ಕೆ ಖಾಸಗಿಯವರ ಬದ್ಧತೆ ಕಾರಣ ಎಂದು ಹೇಳಿದ್ದಾರೆ.

ವಿಐಎಸ್ಎಲ್ ಮತ್ತು ಜೆಎಸ್ ಡಬ್ಲ್ಯೂ ಒಂದೇ ಮಟ್ಟದಲ್ಲಿ ಆರಂಭವಾಗಿದ್ದವು. ಆದರೆ ಇಂದು ಜೆಎಸ್ಡಬ್ಲಯೂ ನಮ್ಮ ರಾಜ್ಯದ ಬಜೆಟ್ ಗಾತ್ರದ ವಹಿವಾಟು ನಡೆಸುತ್ತಿದೆ ಆದರೆ ವಿಐಎಸ್ ಎಲ್ ಮುಚ್ಚಿದೆ. ಖಾಸಗಿಯವರು ಕಲ್ಪನೆಗೂ ಮೀರಿ ಬೆಳೆಯುತ್ತಿದ್ದಾರೆ. ಸಿವಿಲ್ ಏವಿಯೇಷನ್ ನಿಂದ ಹಿಡಿದು ಗ್ರಾಮೀಣ ಪ್ರದೇಶದವರೆಗೆ ಎಲ್ಲ ಕಡೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಷ್ಟದತ್ತ ಸಾಗುತ್ತಿವೆ. ಖಾಸಗಿ ಕಾರ್ಖಾನೆಗಳಲ್ಲಿ ಶೇ.5 ರಷ್ಟು ಸಿಕ್ ಆಗಿ ಶೇ. 95 ರಷ್ಟು ಲಾಭವಾದರೆ, ಸರ್ಕಾರಿ ಸ್ವಾಮ್ಯದಲ್ಲಿ ಶೇ. 95 ಸಿಕ್ ಆಗಿ ಶೇ.5 ರಷ್ಟು ಲಾಭದಲ್ಲಿರಲಿದೆ ಎಂದರು.

ಇದನ್ನೂ ಓದಿ : ಎದೆ ಝಲ್​ ಎನಿಸುವ ಆ್ಯಕ್ಸಿಡೆಂಟ್​.. ಅಪಘಾತದಲ್ಲಿ ​ಬಾಲಕ ಪವಾಡ ಸದೃಶ್ಯ ಪಾರು! ವಿಡಿಯೋ

Last Updated : Mar 24, 2022, 4:42 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.