ETV Bharat / city

ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಹತ್ತಿರವಾಗಬೇಕು...ಕೃಷಿ ಸಚಿವ ಬಿ.ಸಿ. ಪಾಟೀಲ್ - Emphasis on new research in agricultural university

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯತ್ತ ಹೊಸ ಕಲಿಕೆಗೆ ಅವಕಾಶ ಮಾಡಿಕೊಡುವಲ್ಲಿ ಉಪಯೋಗವಾಗಬೇಕು. ಹೊಸತನ್ನು ಕಲಿಯಲು ಮತ್ತು ಕಲಿಸಲು ರೈತರಿಗೆ ಎಲ್ಲಾ ರೀತಿಯಲ್ಲಿ ಅನುಕೂಲ ಕಲ್ಪಿಸುವಂತಹ ಹೊಸ ಸಂಶೋಧನೆಗಳು ನಡೆಯಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

BC Patil
ಕೃಷಿ ಸಚಿವ ಬಿ.ಸಿ. ಪಾಟೀಲ್
author img

By

Published : May 14, 2020, 11:24 PM IST

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಇಲಾಖೆಗೆ ತಾಯಿ ಇದ್ದಂತೆ. ಆದ್ದರಿಂದ ಕೃಷಿ ವಿ.ವಿಗಳು ರೈತರಿಗೆ ಬಹಳ ಹತ್ತಿರವಾಗಬೇಕು. ಕೃಷಿ ಇಲಾಖೆಗೆ ವಿಶ್ವ ವಿದ್ಯಾಲಯಗಳು ಮಾರ್ಗದರ್ಶಿಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಇಂದು ಮೊದಲ ಕೃಷಿ ವಿಶ್ವವಿದ್ಯಾಲಯಗಳ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದ ಸಚಿವರು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು, ಸೂಚನೆಗಳು ಬರೀ ಕಡತದಲ್ಲಿ ಕಿರುಪುಸ್ತಕದಲ್ಲಷ್ಟೇ ಉಳಿಯದೆ ಕಾರ್ಯರೂಪಕ್ಕೆ ಬರಬೇಕು. ಸಮಯ ವ್ಯರ್ಥಕ್ಕಾಗಿ ಸಭೆಗಳನ್ನು ನಡೆಸದೆ ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯತ್ತ ಹೊಸ ಕಲಿಕೆಗೆ ಅವಕಾಶ ಮಾಡಿಕೊಡುವಲ್ಲಿ ಉಪಯೋಗವಾಗಬೇಕು ಎಂದರು. ವಿಶ್ವವಿದ್ಯಾಲಯಗಳಲ್ಲಿ ಹೊಸತನ್ನು ಕಲಿಯಲು ಮತ್ತು ಕಲಿಸಲು ರೈತರಿಗೆ ಎಲ್ಲಾ ರೀತಿಯಲ್ಲಿ ಅನುಕೂಲ ಕಲ್ಪಿಸುವಂತಹ ಹೊಸ ಸಂಶೋಧನೆಗಳು, ತಳಿಗಳನ್ನು ಕಂಡು ಹಿಡಿಯಲು ಪ್ರಯತ್ನಿಸಬೇಕು ಎಂದು ಸಭೆಯಲ್ಲಿ ಸಚಿವರು ನಿರ್ದೇಶಿಸಿದರು.

ಯಾವ ಕಾಯಿಲೆಗೆ ಯಾವ ಮದ್ದು ಎನ್ನುವುದು ವೈದ್ಯರಿಗೆ ಹೇಗೆ ತಿಳಿದಿರುತ್ತದೆಯೋ ಅದೇ ರೀತಿ ರೈತರ ಬೆಳೆಯ ಸಮಸ್ಯೆಗಳಿಗೆ ಕೃಷಿ ವಿಶ್ವವಿದ್ಯಾಲಯಗಳು ಪರಿಹಾರ ಸೂಚಿಸಬೇಕು. ಪ್ರತಿಯೊಬ್ಬ ಪ್ರೊಫೆಸರನ್ನು ಫೀಲ್ಡ್​​​​ಗೆ ಕಳಿಸಬೇಕು. ಹಿಂದಿನ ಕಾಲದ ಬೇಸಾಯ ಪದ್ಧತಿಗೂ ಈಗಿನ ಪದ್ಧತಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಕಾಲಕ್ಕೆ ತಕ್ಕ ಬೆಳೆ ತಂತ್ರಜ್ಞಾನದ ಬಳಕೆ ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳಿಗೆ ರೈತರಿಗೆ ನೇರವಾಗಿ ಮಾಹಿತಿ ದೊರೆಯುವಂತೆ ನೋಡಿಕೊಳ್ಳಬೇಕು.

ವಿಶ್ವವಿದ್ಯಾಲಯಗಳಲ್ಲಿ ಹೊಸ ತಳಿಗಳ ಸಂಶೋಧನೆ ಹೆಚ್ಚು ನಡೆಯಬೇಕು. ವಿಶ್ವವಿದ್ಯಾಲಯಗಳ ಸಾಧನೆ, ಸಂಶೋಧನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕವೇ ಪ್ರಚಾರಪಡಿಸಬೇಕು. ಸಭೆಗೆ ಯಾವುದೇ ಅಧಿಕಾರಿಗಳಾಗಲೀ, ಕುಲಪತಿ ನಿರ್ದೇಶಕರಾಗಲೀ ಅಥವಾ ಬೇರೆ ಯಾರೇ ಆಗಲಿ ಪೂರ್ವಮಾಹಿತಿ ದಾಖಲೆಯಿಲ್ಲದೇ ಬರಬಾರದು. ಕೃಷಿ ವಿವಿ ಹಾಗೂ ಕೃಷಿ ಇಲಾಖೆ ನಡುವೆ ಎಂದಿಗೂ ಸಮನ್ವಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತರ ಜೊತೆ ಸಂವಾದ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಅರಿತು ಅವುಗಳ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಇನ್ಮುಂದೆ ಪ್ರತಿ ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ನಡೆಸಲಾಗುವುದು. ಮೇಲಿಂದ ಮೇಲೆ ಸಭೆಗಳನ್ನು ನಡೆಸುವುದರಿಂದ ವಿಷಯಗಳ ಮಾಹಿತಿಯ ವಿನಿಮಯ ಕೆಲಸದ ಪ್ರಗತಿ ಬಗ್ಗೆ ಅರಿಯಲು ಹಾಗೂ ರೈತರಿಗಾಗಿ ಇನ್ನಷ್ಟು ದುಡಿಯಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು. ಸಭೆಯಲ್ಲಿ ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.