ETV Bharat / city

ಬದಲಾಗಲಿದೆ ಬಿಬಿಎಂಪಿ ರೂಪುರೇಷೆ: ಇನ್ಮುಂದೆ ಮೇಯರ್ ಅಧಿಕಾರವಧಿ 30 ತಿಂಗಳು - ವಿಧಾನಸಭೆಯಲ್ಲಿ ವಿದೇಯಕ ಮಂಡಣೆ

ಇನ್ನು ಮುಂದೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಅಸ್ತಿತ್ವಕ್ಕೆ ಬರಲಿದ್ದು, ಪ್ರಸ್ತುತ ಇರುವ 198 ವಾರ್ಡ್​ಗಳಿಂದ 243 ವಾರ್ಡ್​ಗಳು ಹೆಚ್ಚಳವಾಗಲಿದೆ. ಬಿಬಿಎಂಪಿ ಮೇಯರ್ ಅಧಿಕಾರ ಅವಧಿ 30 ತಿಂಗಳಿಗೆ ನಿಗದಿಯಾಗಲಿದೆ.

BBMP
ಬಿಬಿಎಂಪಿ
author img

By

Published : Dec 9, 2020, 3:25 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್​ಗಳ ಹೆಚ್ಚಳ, ಮೇಯರ್ ಅವಧಿ ವಿಸ್ತರಣೆ, ವಲಯಗಳ ಹೆಚ್ಚಳ, ಸ್ಥಾಯಿ ಸಮಿತಿಗಳ ಸದಸ್ಯರ ಏರಿಕೆ, ಪ್ರತಿ ವಲಯಕ್ಕೆ ಸದಸ್ಯರ ನೇಮಕ ಹಾಗೂ ಆಯುಕ್ತರ ನೇಮಕ ಸೇರಿದಂತೆ ಬಹುನಿರೀಕ್ಷಿತ 2020 ನೇ ಸಾಲಿನ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಪರಿಶೀಲಿಸಲು ರಚಿಸಲಾಗಿರುವ ಜಂಟಿ ಪರಿಶೀಲನಾ ಸಮಿತಿ ವರದಿಯನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು.

ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ರಘು ಅವರು, ವಿಧಾನಸಭೆಯಲ್ಲಿ ಈ ವರದಿಯನ್ನು ಇಂದು ಮಂಡಿಸಿದ್ದು, ಸುದೀರ್ಘ ಚರ್ಚೆಯ ನಂತರ ಈ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಸಮಿತಿ ನೀಡಿರುವ ವರದಿಯಂತೆ ಇನ್ನು ಮುಂದೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಅಸ್ತಿತ್ವಕ್ಕೆ ಬರಲಿದ್ದು, ಪ್ರಸ್ತುತ ಇರುವ 198 ವಾರ್ಡ್​ಗಳಿಂದ 243 ವಾರ್ಡ್​ಗಳು ಹೆಚ್ಚಳವಾಗಲಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಒಂದು ಕಿ.ಮೀ ಹೊರಗೆ ಇರುವ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆಗಳನ್ನು ಸಹ ಈ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಕೆಲವು ಶಾಸಕರು ಪತ್ರ ನೀಡಿದ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಬೇಕೆಂದು ವಿಧಾಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೂಚಿಸಿದರು.

ವರದಿಯಲ್ಲಿರುವ ಶಿಫಾರಸ್ಸುಗಳೇನು?

ವರದಿಯಲ್ಲಿ ಪ್ರಮುಖವಾಗಿ ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆಯನ್ನು 12 ರಿಂದ 15ಕ್ಕೆ ಹೆಚ್ಚಳ ಮಾಡುವುದು, ವಲಯಗಳನ್ನು 12 ಕ್ಕೆ ಹೆಚ್ಚಿಸುವುದು, ಮುಖ್ಯ ಕಾರ್ಯದರ್ಶಿಗಳ ಮಾದರಿಯಲ್ಲಿ ಬಿಬಿಎಂಪಿಗೆ ಆಯುಕ್ತರನ್ನು ನೇಮಕ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ವಿಧಾನ ಪರಿಷತ್ ಜಟಾಪಟಿ : ಕಲಾಪದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆ

ಮೇಯರ್ ಅಧಿಕಾರಾವಧಿ ಮೂವತ್ತು ತಿಂಗಳು:

ಬಿಬಿಎಂಪಿ ಮೇಯರ್ ಅಧಿಕಾರ ಅವಧಿ ಇದುವರೆಗೆ ಒಂದು ವರ್ಷ ಇತ್ತು. ಈ ಅಧಿಕಾರ ಅವಧಿ 30 ತಿಂಗಳಿಗೆ ನಿಗದಿಯಾಗಲಿದೆ. ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆ 12 ರಿಂದ 15 ಕ್ಕೆ ಏರಿಕೆಯಾದರೆ ಪ್ರತಿ ವಲಯಗಳಿಗೆ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆಗೆ ಅವಕಾಶ ನೀಡಲಾಗಿದೆ. ವಲಯ ಮಟ್ಟದಲ್ಲಿ ಒಬ್ಬ ಪಾಲಿಕೆ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡುವುದು, ಪ್ರತಿ ವಲಯಕ್ಕೂ ವಿಶೇಷ ಆಯುಕ್ತರು ಕಾರ್ಯ ನಿರ್ವಹಿಸಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ. ಜಂಟಿ ಪರಿಶೀಲನಾ ಸಮಿತಿಯು ಆಗಸ್ಟ್, ಸಪ್ಟೆಂಬರ್ ಹಾಗೂ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸಭೆ ನಡೆಸಿ ನಿಗದಿತ ಸಂದರ್ಭದಲ್ಲಿ ವರದಿಯನ್ನು ಸಲ್ಲಿಸಲಾಗದ ಕಾರಣ ವಿಸ್ತರಣೆ ಮಾಡಲಾಗಿತ್ತು.

ಇದನ್ನೂ ಓದಿ: 'ಮೇಲ್ಮನೆಯಲ್ಲಿ ಭೂ ಸುಧಾರಣಾ ಮಸೂದೆಗೆ ಏಕೆ ಬೆಂಬಲಿಸಿದರೋ ಗೊತ್ತಿಲ್ಲ'

ಎಲ್ಲಾ ಸದಸ್ಯರ ಒಟ್ಟಾರೆ ಅಭಿಪ್ರಾಯವನ್ನು ಸಂಗ್ರಹಿಸಿ ವರದಿಯನ್ನು ಇಂದು ಸಲ್ಲಿಕೆ ಮಾಡಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್, ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಅರವಿಂದ ಲಿಂಬಾವಳಿ, ನರಸಿಂಹನಾಯಕ್, ಎಂ.ಕೃಷ್ಣಪ್ಪ, ರವಿಸುಬ್ರಹ್ಮಣ್ಯ, ಎಂ.ಸತೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್, ಡಾ.ಕೆ.ಎಸ್.ಶ್ರೀನಿವಾಸ್ ಮೂರ್ತಿ, ಉದಯ ಡಿ. ಗರುಡಾಚಾರ್, ಆರ್.ಮಂಜುನಾಥ್, ಎನ್.ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಕೆ.ಗೋವಿಂದ ರಾಜ್, ಪಿ.ಆರ್.ರಮೇಶ್, ಎನ್.ರವಿಕುಮಾರ್, ಆ.ದೇವೇಗೌಡ ಹಾಗೂ ಕೆ.ಎಸ್.ತಿಪ್ಪೇಸ್ವಾಮಿ ಸಮಿತಿಯ ಸದಸ್ಯರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.