ETV Bharat / city

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪರ್ವಕ್ಕೆ ಬಿಬಿಎಂಪಿ ಪ್ಲಾನ್​.. ಶಿಕ್ಷಣ ವಂಚಿತ, ಬಡ ಕಾರ್ಮಿಕರ ಮಕ್ಕಳಿಗೆ 'ರಾತ್ರಿ ಶಾಲೆ'

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಬಿಬಿಎಂಪಿ ನೂತನ ವಿಶೇಷ ಶಿಕ್ಷಣ ಆಯುಕ್ತ ರಾಮಪ್ರಸಾದ್​ ಮನೋಹರ್ ಹೊಸ ಪ್ಲಾನ್​ ಮಾಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪರ್ವಕ್ಕೆ ಬಿಬಿಎಂಪಿ ಪ್ಲಾನ್

author img

By

Published : Jun 12, 2022, 6:26 PM IST

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿಯ 198 ವಾರ್ಡ್​ಗಳಲ್ಲಿ ಶಿಕ್ಷಣ ವಂಚಿತ ಮಕ್ಕಳಿಗೆ ಹೊಸ ಯೋಜನೆ ತರುವುದಕ್ಕೆ ಮುಂದಾಗಿದೆ. ಅಂದುಕೊಂಡಂತೆ ಆದ್ರೆ ಇದೇ ಆಗಸ್ಟ್ 15 ರಿಂದ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಶಿಕ್ಷಣಕ್ಕೆ ಎಂದು ವರ್ಷಕ್ಕೆ ಕೋಟ್ಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಅಂದುಕೊಂಡಷ್ಟು ಮಕ್ಕಳು ಶಾಲೆಗಳಿಗೆ ಬರುತ್ತಿಲ್ಲ.‌ ಕೂಲಿ ಕಾರ್ಮಿಕ ವರ್ಗದ ಮಕ್ಕಳು, ಬಡ ಕುಟುಂಬದ ಮಕ್ಕಳು ಶಾಲೆಗೆ ಬರದೆ ದಿನಗೂಲಿಗೆ ಹೋಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಬ್ರೇಕ್ ಹಾಕಬೇಕು ಎಂದು ಬಿಬಿಎಂಪಿ ನೂತನ ವಿಶೇಷ ಶಿಕ್ಷಣ ಆಯುಕ್ತ ರಾಮಪ್ರಸಾದ್​ ಮನೋಹರ್ ಅಂತಹ ಮಕ್ಕಳಿಗಾಗಿ ರಾತ್ರಿ ಶಾಲೆಯನ್ನು ಆರಂಭಿಸಲು ಮುಂದಾಗಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಶಿಕ್ಷಣ ವಂಚಿತ ಮಕ್ಕಳು ಲಕ್ಷಕ್ಕೂ ಅಧಿಕವಾಗಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾದ್ ಮನೋಹರ್​ ಹೊಸ ಶಿಕ್ಷಣ ರಾತ್ರಿ ಶಾಲೆ ಯೋಜನೆ ಜಾರಿಗೆ ತರಲು ಹೊರಟಿದ್ದಾರೆ.‌ ಈ ಹಿಂದೆ ಬಳ್ಳಾರಿ ಡಿಸಿಯಾಗಿ ಕಾರ್ಯನಿರ್ವಹಿಸಿದ ಮನೋಹರ್ ಈ ರೀತಿ ರಾತ್ರಿ ಶಿಕ್ಷಣ ಯೋಜನೆ ಜಾರಿಗೆ ತಂದು ಸಕ್ಸಸ್ ಆಗಿದ್ದರು. ಈಗ ಇದೇ ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತರಲು ಸಜ್ಜಾಗಿದ್ದಾರೆ.

ನಗರದಲ್ಲಿ ಲಕ್ಷಾಂತರ ಬಡ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಅವರಿಗೆ ಶಿಕ್ಷಣ ಒದಗಿಸಲೆಂದು ರಾತ್ರಿ ಶಾಲೆ ಅರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಯೋಜನೆ ಹಾಕಿದ್ದಾರೆ.

ರಾತ್ರಿ ಶಿಕ್ಷಣದಲ್ಲಿ ಏನೆಲ್ಲಾ ಇರುತ್ತೆ?

  1. ಈಗಿರುವ ಪ್ರತಿ ವಾರ್ಡ್​ನ ಸರ್ಕಾರಿ ಅಥವಾ ಬಿಬಿಎಂಪಿ ಶಾಲೆಗಳಲ್ಲಿ ಕಲಿಕೆಗೆ ಅವಕಾಶ.
  2. ಸಂಜೆ 6 ರಿಂದ 9 ರವರೆಗೆ ಶಾಲೆಯ ವೇಳಾಪಟ್ಟಿ.
  3. ಶಾಲೆಗೆ ಬರುವ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ, ಲೇಖನ ಸಮಗ್ರಿಗಳು, ಯೂನಿಫಾರ್ಮ್
  4. ರಾತ್ರಿ ವೇಳೆ ಮಕ್ಕಳಿಗೆ ಊಚಿತ ಇಸ್ಕಾನ್ ಊಟ.‌
  5. ನುರಿತ ಶಿಕ್ಷಕರಿಂದ ಪಠ್ಯ ಬೋಧನೆ
  6. ಮಕ್ಕಳಿಗೆ ರಾತ್ರಿ ವೇಳೆ ಮನೆಗೆ ತೆರಳಲು ಉಚಿತ ಬಸ್ ವ್ಯವಸ್ಥೆ.‌
  7. ಶಾಲೆಗೆ ಬರುವ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
  8. ವರ್ಷಕ್ಕೆ ಒಂದು ಬಾರಿ ಉಚಿತವಾಗಿ ಶೈಕ್ಷಣಿಕ ಪ್ರವಾಸ

ಓದಿ: ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾದ 'ಇಡಿ': ದಿನೇಶ್ ಗುಂಡೂರಾವ್ ಟ್ವೀಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.