ಬೆಂಗಳೂರು: ಮಾಸ್ಕ್ ಧರಿಸುವುದು ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟುವ ಮಾರ್ಗೋಪಾಯಗಳಲ್ಲೊಂದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿರುವವರಿಗೆ ಬಿಬಿಎಂಪಿ ದಂಡ ಹಾಕುತ್ತಿದೆ. ಹೀಗೆ ಒಂದೇ ದಿನ ಬರೋಬ್ಬರಿ 98,350 ರೂ. ಹಣವನ್ನು ಸಂಗ್ರಹಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಜನರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಇಲ್ಲದಿದ್ದರೆ ಸಾವಿರ ರೂ ದಂಡ ವಿಧಿಸುವುದಾಗಿ ಬಿಬಿಎಂಪಿ ಏಪ್ರಿಲ್ 30 ರಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ನಿನ್ನೆ ಬೆಳಗ್ಗೆಯಿಂದ ಬೇಟೆಗಿಳಿದ ಪಾಲಿಕೆ ಮಾರ್ಷಲ್ಗಳು, ಪಾಲಿಕೆ ವ್ಯಾಪ್ತಿಯಲ್ಲಿ 190 ವ್ಯಕ್ತಿಗಳಿಂದ ಒಟ್ಟು ರೂ. 98,350 ರೂ. ದಂಡ ವಸೂಲಿ ಮಾಡಿದ್ದಾರೆ.
ಇನ್ನು, ವಸೂಲಿ ಮಾಡಿರುವ ದಂಡದ ಮೊತ್ತದ ವಲಯವಾರು ಅಂಕಿ-ಅಂಶಗಳನ್ನು ಬಿಬಿಎಂಪಿ ಮಾಧ್ಯಮಗಳಿಗೆ ನೀಡಿದೆ. ರಾಜರಾಜೇಶ್ವರಿ ನಗರದಲ್ಲಿ ಅತಿ ಹೆಚ್ಚು ಅಂದರೆ 21,100 ರೂಪಾಯಿ ದಂಡ ವಸೂಲಿಯಾಗಿದೆ.