ETV Bharat / city

ಬಿಜೆಪಿಗೆ ಕ್ಯಾಂಟೀನ್ ಹೆಸರು ಬದಲಾವಣೆಯಲ್ಲಿರುವ ಆಸಕ್ತಿ ರಾಜ್ಯದ ಅಭಿವೃದ್ದಿ ಕಡೆಯಿಲ್ಲ: ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ - ಬಿಬಿಎಂಪಿ ನಾಯಕರಿಂದ ಬಿಜೆಪಿ ವಿರುದ್ಧ ಆಕ್ರೋಶ

ಇಂದಿರಾಗಾಂಧಿಯವರು 16 ವರ್ಷಗಳು ಪ್ರಧಾನಿಯಾಗಿ ಆಡಳಿತ ಮಾಡಿ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಜನರ ದಿಕ್ಕು ತಪ್ಪಿಸಲು ವಿವಾದ ಸೃಷ್ಟಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

bbmp-leaders-on-indira-canteen-name-change
ಬಿಜೆಪಿಗೆ ಕ್ಯಾಂಟೀನ್ ಹೆಸರು ಬದಲಾವಣೆಯಲ್ಲಿರುವ ಆಸಕ್ತಿ ರಾಜ್ಯದ ಅಭಿವೃದ್ದಿ ಕಡೆಯಿಲ್ಲ: ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ
author img

By

Published : Aug 18, 2021, 4:37 AM IST

ಬೆಂಗಳೂರು: ಬಿಜೆಪಿಗೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಯಲ್ಲಿ ಇರುವ ಆಸಕ್ತಿ ರಾಜ್ಯದ ಅಭಿವೃದ್ದಿ ಕಡೆ ಇಲ್ಲ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮತ್ತು ಮಹಾಲಕ್ಷ್ಮೀಪುರ ವಾರ್ಡ್ ಮಾಜಿ ಸದಸ್ಯ ಎಸ್.ಕೇಶವಮೂರ್ತಿ ಕಿಡಿಕಾರಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿವಾದದ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದು ರಾಜ್ಯದಲ್ಲಿ 2 ವರ್ಷದಿಂದ ಅಭಿವೃದ್ದಿ ಕುಂಠಿತಗೊಂಡಿದೆ. ಜನರ ದಿಕ್ಕು ತಪ್ಪಿಸಲು ವಿವಾದ ಸೃಷ್ಟಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Bbmp leaders on Indira canteen name change
ಪತ್ರಿಕಾ ಪ್ರಕಟಣೆ

ಇಂದಿರಾಗಾಂಧಿಯವರು 16 ವರ್ಷಗಳು ಪ್ರಧಾನಿಯಾಗಿ ಆಡಳಿತ ಮಾಡಿ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ಅವರ ಸ್ಮರಣೆಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕಡಿಮೆ ಹಣದಲ್ಲಿ ಊಟದ ವ್ಯವಸ್ಥೆಯನ್ನು ಕಾಂಗ್ರೆೆಸ್ ಸರ್ಕಾರ ಮಾಡಿತ್ತು. ಇತಿಹಾಸ ತಿಳಿಯದ ಬಿಜೆಪಿ ನಾಯಕರುಗಳು ಹೆಸರು ಬದಲಾವಣೆಗೆ ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಂ.ಶಿವರಾಜು ಅವರಿಂದ ಪತ್ರಿಕಾ ಪ್ರಕಟಣೆ

ಕಾಂಗ್ರೆಸ್‌ನ ಜನಪ್ರಿಯ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಮುಖವಾಗಿದ್ದು, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಲಕ್ಷಾಂತರ ಬಡವರು ಇಲ್ಲಿಯೇ ಊಟ ಮಾಡಿ ಹಸಿವನ್ನು ನೀಗಿಸಿಕೊಂಡಿದ್ದಾರೆ. ಇದರ ಜನಪ್ರಿಯತೆ ಬಗ್ಗೆ ಬಿಜೆಪಿ ನಾಯಕರಿಕೆ ಅಸಮಾಧಾನವಿದೆ. ರಾಜ್ಯ ಸರ್ಕಾರವು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಹೆಸರು ಬದಲಾವಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಕತ್ತು ಸೀಳಿ ವ್ಯಕ್ತಿಯ ಬರ್ಬರ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.