ETV Bharat / city

ಕೆ.ಆರ್.ಪುರಂ ಫುಟ್ಪಾತ್​​ ತೆರವು: ಸಂಚಾರ ಸುಗಮ, ಬೀದಿ ವ್ಯಾಪಾರಿಗಳು ಕಂಗಾಲು

ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಐ ಗೇಟ್‌ನಿಂದ ಬಿಬಿಎಂಪಿ ಜಂಕ್ಷನ್‌ವರೆಗಿನ ಫುಟ್‌ಪಾತ್ ಅ​ನ್ನು ಆಕ್ರಮಿಸಿದ್ದ ಕಂಬಳಿ, ಬೆಡ್​ಶೀಟ್​​, ಗೊಂಬೆಗಳು ಹಾಗೂ ಮತ್ತಿತರ ಕಲಾಕೃತಿಗಳ ಅಂಗಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.

author img

By

Published : Dec 15, 2020, 5:53 PM IST

bbmp-kr-puram-footpath-clearance-operation
ಫುಟ್ಪಾತ್​​ ತೆರವು

ಬೆಂಗಳೂರು: ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಐ ಗೇಟ್‌ನಿಂದ ಬಿಬಿಎಂಪಿ ಜಂಕ್ಷನ್ ವರೆಗೆ ಫುಟ್ಪಾತ್​ಗಳನ್ನು ಆಕ್ರಮಿಸಿಕೊಂಡಿದ್ದ ಇಪ್ಪತ್ತಕ್ಕೂ ಹೆಚ್ಚು ತಾತ್ಕಾಲಿಕ ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.

ಕೆ.ಆರ್. ಪುರಂ ಫುಟ್ಪಾತ್​​ ತೆರವು

ವೈಟ್​ಫೀಲ್ಡ್​ನಲ್ಲಿ ಶನಿವಾರ ನಡೆದಿದ್ದ 'ಸಂಚಾರ ಸಂಪರ್ಕ ದಿನ'ದಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮುಂದೆ ಕೆಲವು ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳು ಫುಟ್​​ಪಾತ್​​​ ಆಕ್ರಮಿಸಿಕೊಂಡಿದ್ದು ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ ಎಂದು ದೂರು ಹೇಳಿಕೊಂಡಿದ್ದರು. ಈ ದೂರಿನನ್ವಯ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಬೀದಿ ವ್ಯಾಪಾರಿಗಳನ್ನು ತೆರವು ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಓದಿ: ಮೇಲ್ಮನೆಯಲ್ಲಿ ನಡೆದ ಘಟನೆ ದುರದೃಷ್ಟಕರ: ಸಚಿವ ಡಾ.ಕೆ ಸುಧಾಕರ್ ಗರಂ

ಅಂತರ್‌ರಾಜ್ಯ ವ್ಯಾಪಾರಿಗಳ ಗೋಳು

ಗುಜರಾತ್, ರಾಜಸ್ಥಾನ, ಸುರತ್, ಅಸ್ಸಾಂ ಮುಂತಾದ ರಾಜ್ಯಗಳಿಂದ ಬಂದು ಕಂಬಳಿ, ಡೋರ್‌ಮ್ಯಾಟ್‌ಗಳು, ಆಟಿಕೆಗಳು, ಪ್ಲಾಸ್ಟಿಕ್ ಪೀಠೋಪಕರಣಗಳನ್ನು ಮಾರಾಟ ಮಾಡುತ್ತಿದ್ದ ಸುಮಾರು 20ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಕಾರ್ಯಾಚರಣೆಯಿಂದ ತೊಂದರೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.