ETV Bharat / city

COVID-19: ಅಪಾರ್ಟ್​ಮೆಂಟ್​ಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ

ಪಾರ್ಟ್​ಮೆಂಟ್​ಗಳಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹಲವು ಸೂಚನೆಗಳನ್ನು ನೀಡಲಾಗಿದೆ. ಈಗಿರುವ ಸರ್ಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳ ಜತೆಗೆ, ಪಾಲಿಕೆ ಹೊರಡಿಸಿರುವ ಮಾರ್ಗಸೂಚಿಯಲ್ಲಿನ ಸೂಚನೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

BBMP
ಬಿಬಿಎಂಪಿ
author img

By

Published : Aug 14, 2021, 9:01 AM IST

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಅಪಾರ್ಟ್​ಮೆಂಟ್ ಕಾಂಪ್ಲೆಕ್ಸ್​ಗಳಲ್ಲಿನ ನಿರ್ವಹಣಾ ಸಮಿತಿಗಳಿಗೆ ಕೋವಿಡ್ ಸಂಬಂಧಿಸಿದಂತೆ ಬಿಬಿಎಂಪಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೊವಿಡ್-19 ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಅಡಿಯಲ್ಲಿ ಸಾಂಕ್ರಾಮಿಕ ರೋಗವೆಂದು ಸೂಚಿಸಲಾಗಿದೆ. ಈ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆಕ್ಷನ್ 4ರ ಅಡಿಯಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆಗೆ ಅಧಿಕಾರ ನೀಡಲಾಗಿದೆ.

ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು:

ಈ ಸಂಬಂಧ ಅಪಾರ್ಟ್​ಮೆಂಟ್​ಗಳಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹಲವು ಸೂಚನೆಗಳನ್ನು ನೀಡಲಾಗಿದೆ. ಈಗಿರುವ ಸರ್ಕಾರಿ ಆದೇಶಗಳು ಮತ್ತು ಮಾರ್ಗಸೂಚಿಗಳ ಜತೆಗೆ, ಪಾಲಿಕೆ ಹೊರಡಿಸಿರುವ ಮಾರ್ಗಸೂಚಿಯಲ್ಲಿನ ಸೂಚನೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

  • ಸೂಚನೆಗಳು:

ಅಪಾರ್ಟ್​ಮೆಂಟ್ ಅಥವಾ ಕಾಂಪ್ಲೆಕ್ಸ್​ಗಳ ಎಲ್ಲರೂ, ಅಲ್ಲಿಗೆ ಭೇಟಿ ನೀಡುವವರ ದೇಹದ ಉಷ್ಣಾಂಶ ತಪಾಸಣೆ ಮಾಡಬೇಕು. ಸ್ಯಾನಿಟೈಸೇಶನ್, ಮಾಸ್ಕ್ ಕಡ್ಡಾಯವಾಗಬೇಕು. ಬೇರೆಯವರು ಅಪಾರ್ಟ್​ಮೆಂಟ್​ಗಳಿಗೆ ಭೇಟಿ ಕೊಟ್ಟರೆ ಹೆಸರು ಮತ್ತು ಮೊಬೈಲ್ ಸಂಖ್ಯೆ ದಾಖಲಿಸಿರಬೇಕು. ಹೊರ ರಾಜ್ಯಗಳಿಗೆ ಭೇಟಿ ನೀಡಿದವರು ಆರ್​ಟಿಪಿಸಿಆರ್ 72 ಗಂಟೆಗಳ ಒಳಗಿನ ನೆಗೆಟಿವ್ ಫಲಿತಾಂಶದ ವರದಿ ತಂದಿರಬೇಕು. ಇಲ್ಲವಾದಲ್ಲಿ ಬಂದ ಮೇಲೆ ಆರ್​ಟಿಪಿಸಿಆರ್ ಪರೀಕ್ಷೆ ನಡೆಸಬೇಕು ಹಾಗೂ ಫಲಿತಾಂಶ ಬರುವವರೆಗೆ ಹೋಂ ಕ್ವಾರಂಟೈನ್ ಆಗಬೇಕು ಎಂದು ಹೇಳಿದೆ.

ಈಜುಕೊಳಗಳು ಮುಚ್ಚಿಯೇ ಇರುತ್ತವೆ. ಆದರೆ, ಜಿಮ್​ಗಳು ಶೇ.60ರಷ್ಟು ಜನರೊಂದಿಗೆ ಕಾರ್ಯ ನಿರ್ವಹಿಸಬಹುದು. 3 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳು ಮಾಸ್ಕ್ ಧರಿಸಿರುವಂತೆ ಪೋಷಕರು ನೋಡಿಕೊಳ್ಳಬೇಕು. ಜನ ಸೇರುವ, ಗುಂಪಾಗಿ ನಡೆಸುವ, ಸಾರ್ವಜನಿಕ ಅಥವಾ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಹೋಂ ಡೆಲಿವರಿ, ಕೊರಿಯರ್ ಇನ್ನಿತರೆ ಸೇವೆಗಳಿಗೆ, ಸೇವೆ ನೀಡುವವರು ಅಪಾರ್ಟ್​ಮೆಂಟ್​ನ ಹೊರಗಿನ ಗೇಟ್ ಅಥವಾ ಮುಖ್ಯ ಗೇಟ್ ವರೆಗೆ ಮಾತ್ರ ಬರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: MGNREGA ಜಲಶಕ್ತಿ ಅಭಿಯಾನ.. ಕರ್ನಾಟಕಕ್ಕೆ ಮೊದಲ ಸ್ಥಾನ

ಕಂಟೈನ್ಮೆಂಟ್ ಝೋನ್​ಗಳಿಂದ ಕಸ ಇತ್ಯಾದಿ ನಿರ್ವಹಣೆಗೆ ವೃತ್ತಿಪರ ಕೆಲಸಗಾರರನ್ನು ಬಳಸುವುದು ಮತ್ತು ಅವರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೆಲಸ ಮಾಡುವುದು. ಕೋವಿಡ್ ಪ್ರಕರಣ ಪತ್ತೆಯಾದಲ್ಲಿ ಅಪಾರ್ಟ್​ಮೆಂಟ್​ನ ಎಲ್ಲರೂ ಸಹಕರಿಸುವುದು. ಮನೆಯಲ್ಲಿ ಹೋಂ ಐಸೋಲೇಷನ್​ಗೆ ಅವಕಾಶ ಇಲ್ಲದಿದ್ದಲ್ಲಿ, ಕೊವಿಡ್ ಕೇರ್ ಸೆಂಟರ್​ಗೆ ಅಥವಾ ಆಸ್ಪತ್ರೆಗೆ ದಾಖಲಾಗಬೇಕು‌ ಎಂದು ಸಲಹೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.