ಬೆಂಗಳೂರು: ಕೋವಿಡ್ ಚುಚ್ಚುಮದ್ದನ್ನು ಮಾರಾಟ ಮಾಡುತ್ತಿದ್ದ ಡಾ. ಎಂ.ಕೆ.ಪುಷ್ಪಿತರನ್ನು ಬಿಬಿಎಂಪಿ ಕರ್ತವ್ಯದಿಂದ ಬಿಡುಗಡೆಗೊಳಿಸಿದೆ.
ಡಾ. ಎಂ.ಕೆ.ಪುಷ್ಪಿತ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡು ಮಂಜುನಾಥನಗರ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಕೊರೊನಾ ಔಷಧಿ ಮಾರೋದಾಗಿ ವೆಬ್ಸೈಟ್ ಮೂಲಕ ವಂಚನೆ, ಸಿಸಿಬಿ ಪೊಲೀಸರ ಮೇಲೆಯೇ ಹಲ್ಲೆ
ಅನಧಿಕೃತವಾಗಿ ಕೋವಿಡ್ ಲಸಿಕಾ ಚುಚ್ಚುಮದ್ದನ್ನು ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಮಾಹಿತಿ ಪಡೆದು ಸದರಿ ವೈದ್ಯರನ್ನು ಸಾಕ್ಷಿ ಸಮೇತರಾಗಿ ದಸ್ತಗಿರಿ ಮಾಡಿದ್ದಾರೆ.
ವೈದ್ಯರ ಈ ಕೃತ್ಯವನ್ನು ಕರ್ತವ್ಯಲೋಪವೆಂದು ಪರಿಗಣಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಲಾಗಿದೆ.