ETV Bharat / city

ಬಿಬಿಎಂಪಿ: ಇದೇ ಮೊದಲ ಬಾರಿಗೆ ₹3 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹ

ಮಾರ್ಚ್‌ 2022ರ ಅಂತ್ಯಕ್ಕೆ ಬಿಬಿಎಂಪಿ 3,074 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿ ದಾಖಲೆ ಬರೆದಿದೆ.

BBMP
ಬಿಬಿಎಂಪಿ
author img

By

Published : Apr 3, 2022, 2:18 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಜಾನೆಯಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹವಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ ಮೂರು ಸಾವಿರ ಕೋಟಿ ತೆರಿಗೆ ವಸೂಲಿ ಮಾಡುವ ಗುರಿಯನ್ನು ಪಾಲಿಕೆ ಹೊಂದಿತ್ತು.‌ ಅದರಂತೆ, ಮಾರ್ಚ್ 2022ರ ಅಂತ್ಯಕ್ಕೆ 3,074 ಕೋಟಿ ರೂ. ಸಂಗ್ರಹಿಸಿ ದಾಖಲೆ ಮಾಡಿದೆ. ಮಹದೇವಪುರ ವಲಯದಲ್ಲಿ ಅತೀ ಹೆಚ್ಚು ತೆರಿಗೆ ವಸೂಲಿಯಾಗಿದೆ.

ವಲಯವಾರು ತೆರಿಗೆ ಸಂಗ್ರಹ ಮಾಹಿತಿ:

ವಲಯತೆರಿಗೆ ಮೊತ್ತ
ಪೂರ್ವ ವಲಯ 584.31 ಕೋಟಿ
ಪಶ್ಚಿಮ ವಲಯ 334.92 ಕೋಟಿ
ದಕ್ಷಿಣ ವಲಯ 448.50 ಕೋಟಿ
ಬೊಮ್ಮನಹಳ್ಳಿ 328.51 ಕೋಟಿ
ಆರ್.ಆರ್. ನಗರ
202.47 ಕೋಟಿ
ದಾಸರಹಳ್ಳಿ 83.56 ಕೋಟಿ
ಮಹದೇವಪುರ 793.98 ಕೋಟಿ
ಯಲಹಂಕ ವಲಯ 290.91 ಕೋಟಿ

ಐಟಿ-ಬಿಟಿ ಜನರೇ ತುಂಬಿರುವ ಮಹದೇವಪುರ ವಲಯದಲ್ಲಿ ಸುಮಾರು 793.98 ಕೋಟಿ ತೆರಿಗೆ ಸಂಗ್ರಹವಾಗಿದೆ. ನಂತರ ಪೂರ್ವ ವಲಯ 584.31 ಕೋಟಿ ರೂ, ದಕ್ಷಿಣ ವಲಯ - 448.50 ಕೋಟಿ, ಕಡಿಮೆ ಮೊತ್ತದ ತೆರಿಗೆ ದಾಸರಹಳ್ಳಿ ವಲಯಲ್ಲಿ ಸಂಗ್ರಹಿಸಲಾಗಿದೆ‌. 2020-21ರಲ್ಲಿ 2820.53ಕೋಟಿ ತೆರಿಗೆ ಸಂಗ್ರಹ ಮಾಡಲಾಗಿತ್ತು. ಹಾಗೇ 2021-22ರಲ್ಲಿ 3074.95 ಕೋಟಿಯಷ್ಟು ತೆರಿಗೆ ಸಂಗ್ರಹಿಸಲಾಗಿದೆ.

Bbmp Collects Rs 3 Thousand Crore Tax
ವಲಯವಾರು ತೆರಿಗೆ ಸಂಗ್ರಹ

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮಧ್ಯರಾತ್ರಿ ಆಯವ್ಯಯ ಮಂಡನೆ ಮಾಡಿದ ಬಿಬಿಎಂಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.