ETV Bharat / city

ಒಂದೇ ದಿನ 5 ಸಾವಿರ ಗುಂಡಿಗಳನ್ನು ಮುಚ್ಚಿದ ಪಾಲಿಕೆ

ಬಿಬಿಎಂಪಿ ಗುರುತಿಸಿದ 10,861 ಗುಂಡಿಗಳ ಪೈಕಿ ಶನಿವಾರ 5,070 ಗುಂಡಿಗಳನ್ನು ಕೋಲ್ಡ್ ಮತ್ತು ಹಾಟ್ ಬಿಟುಮಿನ ಮಿಕ್ಸ್ ಹಾಕಿ ಮುಚ್ಚಲಾಗಿದೆ..

BBMP closed five thousand potholes in one single day
ಒಂದೇ ದಿನ 5 ಸಾವಿರ ಗುಂಡಿಗಳನ್ನು ಮುಚ್ಚಿದ ಪಾಲಿಕೆ
author img

By

Published : May 22, 2022, 5:34 PM IST

ಬೆಂಗಳೂರು : ನಗರದಲ್ಲಿ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆ ವೇಗ ನೀಡಿದೆ. ಶನಿವಾರ ಒಂದೇ ದಿನ 5 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆಯಾಗಿತ್ತು ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.

ಬಿಬಿಎಂಪಿಯ ಬಿಟುಮಿನ್ ಮಿಕ್ಸ್ ಪ್ಲಾಂಟ್ ಕಾರ್ಯ ಸ್ಥಗಿತವಾಗಿ ಮುಚ್ಚಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಸೋಮವಾರದಿಂದ ಬಿಟುಮಿನ್ ಮಿಕ್ಸ್ ಪ್ಲಾಂಟ್ ಕೆಲಸ ಆರಂಭಿಸಿದ್ದು, ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಶನಿವಾರ ಒಂದೇ ನಗರದ ಬಹುತೇಕ ಕಡೆ ಗುಂಡಿಗಳನ್ನು ಮುಚ್ಚಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಗುಂಡಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

5,070 ಗುಂಡಿಗಳಿಗೆ ಮುಕ್ತಿ : ಬಿಬಿಎಂಪಿ ಗುರುತಿಸಿದ 10,861 ಗುಂಡಿಗಳ ಪೈಕಿ ಶನಿವಾರ 5,070 ಗುಂಡಿಗಳನ್ನು ಕೋಲ್ಡ್ ಮತ್ತು ಹಾಟ್ ಬಿಟುಮಿನ್ ಮಿಕ್ಸ್ ಹಾಕಿ ಮುಚ್ಚಲಾಗಿದೆ. 2,148 ಗುಂಡಿಗಳನ್ನು ಬಿಬಿಎಂಪಿ ಸಹಾಯಕ ಎಂಜಿನಿಯರ್ ಪರಿಶೀಲಿಸಿದ್ದಾರೆ. 2,260 ಗುಂಡಿಗಳಿಗೆ ಯೋಜನಾ ವರದಿ ಸಿದ್ಧಪಡಿಸಲಾಗಿದೆ. 1094 ಗುಂಡಿಗಳು ಮುಚ್ಚುವ ಅವಶ್ಯಕತೆ ಇಲ್ಲ ಎಂದು ತಿರಸ್ಕರಿಸಲಾಗಿದೆ. 289 ಗುಂಡಿಗಳನ್ನು ಪ್ರತ್ಯೇಕ ಯೋಜನೆ ಸಿದ್ಧಪಡಿಸಿ ಸರಿಪಡಿಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

ಮೂರ್ನಾಲ್ಕು ದಿನಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣ : ನಗರದಲ್ಲಿ ಮಳೆ ಬಿಡುವು ನೀಡಿದರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣಗೊಳ್ಳಲಿದೆ. ಶನಿವಾರ 5 ಸಾವಿರಕ್ಕೂ ಅಧಿಕ ಗುಂಡಿಗಳಿಗೆ ಕೋಲ್ಡ್ ಬಿಟುಮಿನ್ ಹಾಕಿ ಮುಚ್ಚಲಾಗಿದೆ ಎಂದು ರವೀಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ವಾಯುಭಾರ ಕುಸಿತ: ಇನ್ನೂ ಎರಡು ದಿನ ರಾಜ್ಯದಲ್ಲಿ ಗುಡುಗು ಸಹಿತ ಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.