ಬೆಂಗಳೂರು: ಬಿಬಿಎಂಪಿಯಿಂದ ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಲಂಚ ನೀಡಬೇಕು. ನನ್ನ ಬಳಿಯೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮೋಹನ್ ದಾಸ್ ಪೈ ಆರೋಪಿಸಿದ್ದಾರೆ. ಈ ಬಗ್ಗೆ ದಾಖಲೆ ಸಲ್ಲಿಸಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಪ್ರತಿಕ್ರಿಯಿಸಿದರು.
ಬೂಸ್ಟರ್ ಡೋಸ್ ಅಲಭ್ಯ ಎನ್ನುವ ಮಾತಿಲ್ಲ: ಬೂಸ್ಟರ್ ಡೋಸ್ ಎಲ್ಲೆಡೆಯೂ ಲಭ್ಯ. ಯಾರೂ ಅರ್ಹರೂ ಅವರ ಈ ಲಸಿಕೆ ಪಡೆಯಬಹುದು. ಕೆಲ ಕಡೆಗಳಲ್ಲಿ ಬೋಸ್ಟರ್ ಡೋಸ್ ಪಡೆಯಲು ಹಣ ವಸೂಲಿ ಮಾಡುತ್ತಿರುವ ಕುರಿತು ಆರೋಪ ಕೇಳಿಬಂದಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಖಾತೆ ವರ್ಗೀಕರಣ ಪ್ರಕ್ರಿಯೆ: ಖಾತೆ ವರ್ಗೀಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತೆ ಆಸ್ತಿಗಳು ಆರು ಲಕ್ಷದಷ್ಟಿವೆ. ಅವುಗಳನ್ನು ಪರಿವರ್ತನೆ ಮಾಡುವ ಪ್ರಕ್ರಿಯೆಗೆ ಚಾಲ್ತಿ ನೀಡಲಾಗುವುದು. ಇದರಿಂದ ಜನರಿಗೆ ಅನುಕೂಲವೇ ಹೆಚ್ಚು ಎಂದರು.
ಇದನ್ನೂ ಓದಿ: ಕೋವಿಡ್ 4ನೇ ಅಲೆ ಭೀತಿ: ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ಗೆ ಅಭಾವದ ಕೂಗು