ETV Bharat / city

ಆಧಾರ ರಹಿತ ಆರೋಪ ಮಾಡೋದು ಕಾಂಗ್ರೆಸ್​​ ಹುಟ್ಟುಗುಣ: ಗೋವಿಂದ ಕಾರಜೋಳ - ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

baseless-accusation-that-is-congress-level
author img

By

Published : Nov 3, 2019, 6:54 PM IST

ಬೆಂಗಳೂರು: ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ರಾಜ್ಯಪಾಲರನ್ನ ಭೇಟಿ ಮಾಡಿ ಕೇಂದ್ರ ಸಚಿವ ಅಮಿತ್ ಶಾ, ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು. ನಿಮ್ಮ‌ ಆರೋಪದಲ್ಲಿ ಯಾವುದೇ ಹುರುಳಿದೆಯಾ? ನಿಮ್ಮ ಶಾಸಕರನ್ನ ಸರಿಯಾಗಿ‌ ಇಟ್ಟುಕೊಳ್ಳದವರು ಬಿಜೆಪಿ, ಯಡಿಯೂರಪ್ಪ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ನಿಮ್ಮ ಆರೋಪ ಸತ್ಯಕ್ಕೆ ದೂರವಾದುದ್ದು. ಪದೇ ಪದೆ ಸಿದ್ದರಾಮಯ್ಯ, ಗುಂಡೂರಾವ್ ಅವರು‌ ಯಡಿಯೂರಪ್ಪ, ಅಮಿತ್ ಶಾ ಮೇಲೆ ಆರೋಪಿಸುವ ಬದಲು ಅತೃಪ್ತ ಶಾಸಕರ ಕೆಲಸ ಮಾಡಿಕೊಟ್ಟಿದ್ದರೆ ಅವರು ನಿಮ್ಮೊಂದಿಗೆ ಇರುತ್ತಿದ್ದರು. ನಿಮಗೆ ನೀಡಿದ್ದ ಆ ಜವಾಬ್ದಾರಿ ನೀವು ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.

ಆಧಾರ ರಹಿತ ಆರೋಪ ಮಾಡೋದು ಕಾಂಗ್ರೆಸ್ ಹುಟ್ಟುಗುಣ. ಪ್ರಚಾರದಲ್ಲಿ ಇರೋಕೆ ಬಯಸಿ ಈ ರೀತಿ ಆರೋಪಿಸಲಾಗಿದೆ. ಮೂರು ತಿಂಗಳು ಯಡಿಯೂರಪ್ಪ ರಾಜ್ಯ ಸುತ್ತಿ ಸಂತ್ರಸ್ತರಿಗೆ ಸಮಾಧಾನ ಹೇಳಿ ನೆರವು ನೀಡ್ತಿದ್ದಾರೆ. ಕಾಂಗ್ರೆಸ್ ನಾಯಕರು ಹೀನ ಕೃತ್ಯ ಬಿಟ್ಟು ಸಂತ್ರಸ್ತರ ಪರ ಕೆಲಸ ಮಾಡಲಿ ಎಂದರು.

Intro:

ಬೆಂಗಳೂರು:ಬಿಜೆಪಿ ಹಾಗು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ದಿನ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ರಾಜ್ಯಪಾಲರನ್ನ ಭೇಟಿ ಮಾಡಿದ್ದಾರೆ.ಅಮಿತ್ ಶಾ, ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದಾರೆ, ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು.ನಿಮ್ಮ‌ ಆರೋಪದಲ್ಲಿ ಹುರುಳಿದೆಯಾ? ನಿಮ್ಮ ಶಾಸಕರನ್ನ ಸರಿಯಾಗಿ‌ ಇಟ್ಟುಕೊಳ್ಳದೆ ಬಿಜೆಪಿ,ಯಡಿಯೂರಪ್ಪ ಮೇಲೆ ಆರೋಪ ಸರಿಯಲ್ಲ.ನಿಮ್ಮ ಆರೋಪ ಸತ್ಯಕ್ಕೆ ದೂರವಾದುದ್ದು. ಪದೇ ಪದೇ ಸಿದ್ದರಾಮಯ್ಯ, ಗುಂಡೂರಾವ್ ಅವರು‌ ಯಡಿಯೂರಪ್ಪ, ಅಮಿತ್ ಶಾ ಮೇಲೆ ಆರೋಪ ಮಾಡುವ ಬದಲು ಅನರ್ಹರ ಕೆಲಸ ಮಾಡಿಕೊಟ್ಟು ಉಳಿಸಿಕೊಳ್ಳುವ ಜವಾಬ್ದಾರಿ ಇತ್ತು‌ ಎಂದು ಟೀಕಿಸಿದರು.

ಆಧಾರ ರಹಿತವಾಗಿ ಆರೋಪ ಮಾಡೋದು ಕಾಂಗ್ರೆಸ್ ಹುಟ್ಟುಗುಣ.ಪ್ರಚಾರದಲ್ಲಿ ಇರೋಕೆ ಬಯಸಿ ಈ ರೀತಿ ಆರೋಪ ಮಾಡಲಾಗಿದೆ.ಮೂರು ತಿಂಗಳ ಕಾಲ ಯಡಿಯೂರಪ್ಪ ರಾಜ್ಯ ಸುತ್ತಿ ಸಂತ್ರಸ್ತರಿಗೆ ಸಮಾಧಾನ ಹೇಳಿ ನೆರವು ನೀಡ್ತಿದ್ದಾರೆ.ಕಾಂಗ್ರೆಸ್ ನಾಯಕರು ಹೀನ ಕೃತ್ಯ ಬಿಟ್ಟು ಸಂತ್ರಸ್ತರ ಪರ ಕೆಲಸ ಮಾಡಲಿ ಎಂದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.