ETV Bharat / city

ಶಿವಮೊಗ್ಗ ಸ್ಫೋಟದ ಸಮಗ್ರ, ನ್ಯಾಯಯುತ ತನಿಖೆ ಆಗಲಿದೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

author img

By

Published : Feb 2, 2021, 7:07 PM IST

ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಯತ್ನ ಸರ್ಕಾರ ಮಾಡಲ್ಲ. ಜಮೀನಿನ ಮಾಲೀಕ ಸೇರಿದಂತೆ ನಾಲ್ಕೈದು ಜನರ ಬಂಧನವಾಗಿದೆ. ಎಲ್ಲಿಂದ ಜಿಲೆಟಿನ್ ಕಡ್ಡಿ ಬಂದಿದೆ, ಯಾರು ತಂದಿದ್ದಾರೆ ಎಂಬಿತ್ಯಾದಿ ವಿವರ ಪತ್ತೆ ಮಾಡುತ್ತಿದ್ದೇವೆ. ಈ ಬಗ್ಗೆ ಸಮಗ್ರ ಹಾಗೂ ನ್ಯಾಯಯುತ ತನಿಖೆ ಆಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Basavaraja Bommai reaction about Shivamogga Gelatin Explosion Case
ಶಿವಮೊಗ್ಗ ಸ್ಫೋಟದ ಸಮಗ್ರ, ನ್ಯಾಯಯುತ ತನಿಖೆ ಆಗಲಿದೆ: ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ಚರ್ಚೆಗೆ ಇನ್ನಷ್ಟು ಅವಕಾಶ ನೀಡುವಂತೆ ಕಾಂಗ್ರೆಸ್ ಹಾಗೂ ಸಾಕಷ್ಟು ಚರ್ಚೆಯಾಗಿದೆ ಎಂದು ಬಿಜೆಪಿ ನಾಯಕರು ಒತ್ತಾಯಿಸಿದ ಸನ್ನಿವೇಶ ವಿಧಾನ ಪರಿಷತ್​ನಲ್ಲಿ ಸೃಷ್ಟಿಯಾಯಿತು.

ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಶಿವಮೊಗ್ಗ ಸಿಎಂ ಹಾಗೂ ಹಿರಿಯ ಸಚಿವರ ತವರಾಗಿದೆ. ಇಲ್ಲಿನ ಸ್ಫೋಟಕ್ಕೆ ಕಾರಣ ಏನೆಂದು ಯಾರೂ ಹೇಳುತ್ತಿಲ್ಲ. ಸಾಕಷ್ಟು‌ ಅನುಮಾನ ಇದೆ. ಸಿಎಂ ಹಾಗೂ ಜಿಲ್ಲೆಯ ಸಚಿವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಆರು ಜನ ಸತ್ತಿದ್ದಾರೆ, ಹಲವರು ಗಾಯಗೊಂಡಿದ್ದಾರೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಸ್ಫೋಟದ ತನಿಖೆ ನಡೆಯುತ್ತಿದೆ. ಈ ಗಣಿಗಾರಿಕೆ ವಿರುದ್ಧ 3 ಪ್ರಕರಣ ದಾಖಲಾಗಿದೆ. ಅವರಿಗೆ ಮತ್ತೆ ಮತ್ತೆ ಪರವಾನಗಿ‌ ನೀಡಿದ್ದು ಯಾರು?. ಯಾಕೆ ಕಾಂಗ್ರೆಸ್ ಸರ್ಕಾರ ತಡೆದಿಲ್ಲ. 3-4 ದಶಕದಿಂದ ಇದು ನಡೆಯುತ್ತಿದೆ. 97 ಬೃಹತ್ ಕ್ರಷರ್​ಗಳಿವೆ. ಇಲ್ಲಿ ಸಿಎಂ, ಸಚಿವರ ರಾಜೀನಾಮೆ ನೀಡುವ ಅಗತ್ಯವಿಲ್ಲ. ನೈತಿಕತೆ ಇದ್ದರೆ ಈ ಹಿಂದೆ ನಡೆದ ಘಟನೆಗೆ ಯಾರು ರಾಜೀನಾಮೆ ನೀಡಿದ್ದಾರೆ, ತನಿಖೆ ಏನಾಗಿದೆ. ಹಿಂದೆಯೂ ಸಾವು ಸಂಭವಿಸಿದೆ. ಮೂರು ದಿನದಲ್ಲಿ ಈ ಘಟನೆಯ ಆಮೂಲಾಗ್ರ ತನಿಖೆ ನಡೆಸಿದ್ದೇವೆ. 64 ಸಾವಿರ ಜಿಲೆಟಿನ್ ಕಡ್ಡಿಯನ್ನು ಆಂಧ್ರಕ್ಕೆ ತೆರಳಿ ವಶಪಡಿಸಿಕೊಂಡಿದ್ದೇವೆ.

ಆಂಧ್ರದ ಅನಂತಪುರಂನಿಂದ ಇದು ಬಂದಿದ್ದು ಹೇಗೆ ಎನ್ನುವುದನ್ನು ಪತ್ತೆ ಮಾಡಿದ್ದೇವೆ. ಕುಲಕರ್ಣಿ ಎಂಬ ವ್ಯಕ್ತಿ ವಿರುದ್ಧ ಕೇಸು ದಾಖಲಾಗಿದೆ. ಆದರೂ ಲೈಸನ್ಸ್ ನೀಡಲಾಗಿದೆ. 20 ವರ್ಷದಿಂದ ನಡೆಯುತ್ತಿರುವುದನ್ನು ರಕ್ಷಿಸಿದ್ದು ಯಾರು. ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡಿಲ್ಲ. 18 ತಿಂಗಳಲ್ಲಿ 40 ಸಾವಿರ ಜಿಲೆಟಿನ್ ಕಡ್ಡಿ ವಶಪಡಿಸಿಕೊಂಡಿದ್ದೇವೆ. ಬಿಡದಿ ಒಂದರಲ್ಲೇ 13 ಸಾವಿರ ಜಿಲೆಟಿನ್ ಕಡ್ಡಿ ವಶಪಡಿಸಿಕೊಂಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದರು. ತನಿಖೆ ಇಲ್ಲಿಗೆ ನಿಲ್ಲಲ್ಲ, ಮುಖ್ಯ ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ. ಶೇ. 100ರಷ್ಟು ನ್ಯಾಯ ಒದಗಿಸುತ್ತೇವೆ. ಅನುಮಾನ ಬೇಡ, ಪ್ರಾಮಾಣಿಕ ತನಿಖೆ ನಡೆಯಲಿದೆ. ಅಗತ್ಯಕ್ಕೆ ತಕ್ಕ ಗಣಿಗಾರಿಕೆ ಮಾಡಲೇಬೇಕು. ದುರಾಸೆಗೆ ಬಿದ್ದು ಗಣಿಗಾರಿಕೆ ಮಾಡುವಂತಿಲ್ಲ. ವಿವಿಧ ಇಲಾಖೆ ಸಹಯೋಗದೊಂದಿಗೆ ನಾವು ಪ್ರಾಮಾಣಿಕ‌ ತನಿಖೆ ನಡೆಸಲಿದ್ದೇವೆ ಎಂದರು.

ಶಿವಮೊಗ್ಗ ಘಟನೆ ಗಮನಿಸಿದರೆ ಆತಂಕ ಆಗಲಿದೆ. ಇಲ್ಲಿ ಭಯೋತ್ಪಾದಕರು ಬಂದಿಲ್ಲ ಎನ್ನುವುದಕ್ಕೆ ಕಾರಣವೇನು? ಜನರಿಗೆ ಈ ಘಟನೆ ಬಗ್ಗೆ ಸಾಕಷ್ಟು ಅನುಮಾನ ಇದೆ. ಇದರಿಂದ ಸಮಗ್ರ ತನಿಖೆ ಆಗಲಿ ಎಂದು ಹರಿಪ್ರಸಾದ್ ಒತ್ತಾಯಿಸಿದರು.

ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್ ಮಾತನಾಡಿ, ನಮ್ಮಲ್ಲಿ ತಪ್ಪಿತಸ್ಥರಿಲ್ಲ. ಯಾರಾದರೂ ಬಂದು ಪ್ರಭಾವ ಬೀರಿದ್ದಾರಾ? ಹಿಂದೆ ಸರ್ಕಾರಗಳಿಂದ ತಪ್ಪಾಗಿದ್ದರೆ ತನಿಖೆ ಮಾಡಿ. ಇಂದು ಸರ್ಕಾರದ ಗುಪ್ತಚರ ಇಲಾಖೆ ವಿಫಲವಾಗಿದೆ. ಗೃಹ ಸಚಿವರು ವಿಫಲವಾಗಿದ್ದಾರೆ. ಇವರ ಇಲಾಖೆ ನಿಷ್ಕ್ರಿಯವಾಗಿದೆ. ಇದು ಸರ್ಕಾರದ ವೈಫಲ್ಯ. ಚೆಕ್ ಪೋಸ್ಟ್ ಏನು ಮಾಡಿದೆ ಎಂದರು.

ಗೃಹ ಸಚಿವರು ಮಾತನಾಡಿ, ನಾವು ಕೂಲಂಕಶ ತನಿಖೆ ನಡೆಸುತ್ತಿದ್ದೇವೆ. ಪ್ರತಿ ಚೆಕ್ ​ಪೋಸ್ಟ್​​ನಲ್ಲಿ ತನಿಖೆ ನಡೆಯುತ್ತಿದೆ. ಆದಷ್ಟು ಶೀಘ್ರ ತನಿಖೆ ಪೂರ್ಣಗೊಳ್ಳಲಿದೆ. ತ್ವರಿತವಾಗಿ ತನಿಖೆ ನಡೆಯಲಿ. ನೀವ್ಯಾಕೆ ಆತಂಕ ಪಡುತ್ತೀರಿ ಎಂದು ಹೇಳಿದರು.

ಆರ್.ಬಿ.ತಿಮ್ಮಾಪೂರ್ ಮಾತು ಮುಂದುವರಿಸಿ, ಇಷ್ಟು ಪ್ರಮಾಣದ ಸರ್ಕಾರಿ ಆಸ್ತಿ ಲೂಟಿ ಮಾಡಿದ್ದಾರೆ. ಅವರ ವಿರುದ್ಧ ಕೈಗೊಂಡ ಕ್ರಮ ಏನಾಗಿದೆ? ಇವರ ಅಕ್ರಮವನ್ನು ಸಕ್ರಮ ಮಾಡುತ್ತೀರಾ? ಸರ್ಕಾರ ಇದೆ ಎನ್ನುವುದನ್ನು ತೋರಿಸಬೇಕು. ಪ್ರಾಮಾಣಿಕ ತನಿಖೆ ಆಗಲಿ ಎಂದರು.

ಕಾಂಗ್ರೆಸ್ ಪಕ್ಷದ ಸಚೇತಕ ನಾರಾಯಣ ಸ್ವಾಮಿ ಮಾತನಾಡಿ, ನಮಗೆ ಸಚಿವರು ನೀಡಿದ ಉತ್ತರ ಸಮಾಧಾನ ತಂದಿಲ್ಲ. ಗಣಿ ಸಚಿವರು, ಗೃಹ ಸಚಿವರು ಸಮಾಧಾನಕರ ಉತ್ತರ ನೀಡಿಲ್ಲ ಎಂದರು. ಈ ವೇಳೆ ವಾಕ್ಸಮರ ನಡೆಯಿತು.

ಅಂತಿಮ ಉತ್ತರ:

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಂತಿಮವಾಗಿ ಉತ್ತರ ನೀಡಿ, ಹೊಗಳಿಕೆ, ಟೀಕೆ ಸಮನಾಗಿ‌ ಸ್ವೀಕರಿಸುತ್ತೇನೆ. ಯಾರನ್ನೂ ರಕ್ಷಿಸುವ ಪ್ರಯತ್ನ ಸರ್ಕಾರ ಮಾಡಲ್ಲ. ಬಂಧನ ವಿಚಾರ ಬಂದಿದೆ. ಇದರಿಂದ ಜಮೀನಿನ ಮಾಲೀಕ ಸೇರಿದಂತೆ ನಾಲ್ಕೈದು ಜನರ ಬಂಧನವಾಗಿದೆ. ಎಲ್ಲಿಂದ ಜಿಲೆಟಿನ್ ಕಡ್ಡಿ ಬಂದಿದೆ, ಯಾರು ತಂದಿದ್ದಾರೆ ಎಂಬಿತ್ಯಾದಿ ವಿವರ ಪತ್ತೆ ಮಾಡುತ್ತಿದ್ದೇವೆ. ತುಂಗಾ ನಗರದಲ್ಲಿ ಸಿಕ್ಕ ಸ್ಫೋಟಕದ ಮಾಹಿತಿ ಕಲೆಹಾಕುತ್ತಿದ್ದೇವೆ. ಸೂಕ್ತ ತನಿಖೆ ಆಗಲಿದೆ. ಅಧಿಕಾರಿಗಳ ಮೇಲೆ ಏನು ಕ್ರಮ ಎಂದು ಕೇಳಲಾಗಿದೆ. ಆಂತರಿಕ ವರದಿಗೆ ಸೂಚಿಸಿದ್ದು, ಇಲ್ಲಾದ ಲೋಪದ ಕುರಿತು ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ತನಿಖೆ ವರದಿ ತಕ್ಷಣ ಕೇಳಿದ್ದೇವೆ. ಸಿಕ್ಕ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದರು.

ಇದಕ್ಕೆ ಪ್ರತಿಪಕ್ಷ ಸದಸ್ಯರು ಮರಿತಿಬ್ಬೇಗೌಡರ ನೇತೃತ್ವದಲ್ಲಿ ಎಷ್ಟು ದಿನದಲ್ಲಿ ಕ್ರಮ ಕೈಗೊಳ್ಳಲಿದ್ದೀರಿ ಎಂದು ಕೇಳಿದರು. ವರದಿ ಬಂದ 24 ಗಂಟೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಮೊದಲ ಹಂತದ ನಂತರ ಅನಿವಾರ್ಯವಾದರೆ ಎನ್ಐಎಗೆ ತನಿಖೆಗೆ ವಹಿಸುವ ಕ್ರಮ ಕೈಗೊಳ್ಳುತ್ತೇವೆ. ಚೆಕ್ ಪೋಸ್ಟ್ ಲೋಪದ ತನಿಖೆ ಆಗಲಿದೆ. ತಪ್ಪತಸ್ಥರಿಗೆ ಸೂಕ್ತ ಶಿಕ್ಷೆ ಆಗಲಿದೆ. ಮುಂದಿನ ಎಲ್ಲಾ ಅಕ್ರಮಗಳಿಗೆ ಇದು ಪಾಠ ಕಲಿಸುವ ಕ್ರಮ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಸಭಾತ್ಯಾಗ: ಸಚಿವರು ನೀಡಿದ ಉತ್ತರ ಸಮಾಧಾನ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಸಭಾತ್ಯಾಗ ಮಾಡಿದರು. ಬಸವರಾಜ ಬೊಮ್ಮಾಯಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ನೀವು ನೀಡಿದ ಲೈಸನ್ಸ್​ನಿಂದಾಗಿ ಇಷ್ಟೆಲ್ಲಾ ಸಮಸ್ಯೆ ಆಗಿದೆ ಎಂದರು. ಗದ್ದಲದ ನಡುವೆ ಕಾಂಗ್ರೆಸ್ ಸದಸ್ಯರು ಹೊರನಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.