ETV Bharat / city

ಪತ್ನಿಯ ಮೊದಲ ಗಂಡನ ಕೊಲೆ ಪ್ರಕರಣ: ಎರಡನೇ ಪತಿ ಸೇರಿ ಮೂವರ ಬಂಧನ - ಬೆಂಗಳೂರು ಕ್ರೈಮ್​ ಸುದ್ದಿ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ಮಹಿಳೆಯ ಮೊದಲ ಗಂಡನನ್ನು ಕೊಲೆ ಮಾಡಿದ್ದ ಎರಡನೇ ಗಂಡ ಸೇರಿ ಮೂವರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ‌.

Basavanagudi police arrest three  accused
ಹೆಂಡತಿಯ ಮೊದಲ ಗಂಡನ ಕೊಲೆ ಪ್ರಕರಣ: ಎರಡನೇ ಪತಿ ಸೇರಿ ಮೂವರ ಬಂಧನ
author img

By

Published : Aug 9, 2020, 8:01 PM IST

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ಮಹಿಳೆಯ ಮೊದಲ ಗಂಡನನ್ನು ಕೊಲೆ ಮಾಡಿದ್ದ ಎರಡನೇ ಗಂಡ ಸೇರಿ ಮೂವರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ‌.

ಹೆಂಡತಿಯ ಮೊದಲ ಗಂಡನ ಕೊಲೆ ಪ್ರಕರಣ: ಎರಡನೇ ಪತಿ ಸೇರಿ ಮೂವರ ಬಂಧನ

ಲಕ್ಷ್ಮಣ್ ಆಲಿಯಾಸ್ ಲಕ್ಕಿ, ಚೇತನ್ ಹಾಗೂ ಪ್ರತಾಪ್ ಬಂಧಿತ ಆರೋಪಿಗಳು. ಸಿದ್ದರಾಜು ಕೊಲೆಯಾಗಿದಾತ. ಮಳವಳ್ಳಿ ಮೂಲದ ಸಿದ್ದರಾಜು ಕಳೆದ ಏಳು ವರ್ಷಗಳ ಹಿಂದೆ ಲತಾ ಎಂಬುವವರನ್ನು ಮದುವೆಯಾಗಿದ್ದು, ಆರು ತಿಂಗಳಲ್ಲೇ ಹೆಂಡತಿಯಿಂದ ದೂರವಾಗಿದ್ದ. ಆ ಬಳಿಕ ಒಂಟಿಯಾದ‌ ಸಿದ್ದರಾಜು ಹೆಂಡತಿಯನ್ನು ಲಕ್ಷ್ಮಣ್ ಎಂಬಾತ ಮದುವೆಯಾಗಿದ್ದ. ಪತ್ನಿಯಿಂದ ದೂರವಾಗಿದ್ದ ಸಿದ್ದರಾಜು, ಗಾಂಧಿಬಜಾರ್ ಬಳಿಯ ಲಾರಿ ಸ್ಟ್ಯಾಂಡ್​ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಬೆಳೆಸಿಕೊಂಡಿದ್ದ ಈತ‌, ಹೆಂಡತಿ‌ ಮನೆ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ.

ಈ ವಿಷಯ ತಿಳಿದ ಎರಡನೇ ಗಂಡ ಲಕ್ಷ್ಮಣ್, ತನ್ನ ಸಹಚರರಿಗೆ ಮದ್ಯಪಾನ ಮಾಡಿಸಿ ಚಾಕುವಿನಿಂದ ಸಿದ್ದರಾಜು ಎದೆಗೆ ಇರಿದು ಕೊಲೆ ಮಾಡಿಸಿದ್ದ. ಈ ಪ್ರಕರಣ ದಾಖಲಿಸಿಕೊಂಡ ಬಸವನಗುಡಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.