ಬೆಂಗಳೂರು : ಬಸವನಗುಡಿಯ ಬಟ್ಟೆ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಖದೀಮನೊಬ್ಬ, ಹಳೇ ದ್ವೇಷದ ಹಿನ್ನೆಲೆ ರಾಜಸ್ಥಾನದಿಂದ ವಿಮಾನದಲ್ಲಿ ಬಂದು ಕಳವು ಮಾಡಿ ಮತ್ತೆ ಅದೇ ವಿಮಾನದಲ್ಲಿ ರಾಜಸ್ಥಾನಕ್ಕೆ ವಾಪಸ್ ತೆರಳಿದ ವಿಚಿತ್ರ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಬಸವನಗುಡಿ ಠಾಣಾ ವ್ಯಾಪ್ತಿಯ ರಾಮ್‌ದೇವ್ ಬಟ್ಟೆ ಅಂಗಡಿಯಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ ಕೆಲಸಕ್ಕಿದ್ದ. ಈತ ಅಂಗಡಿಯಲ್ಲೇ ಕಳ್ಳತನ ಮಾಡಿ ರಾಮದೇವ್ ಕೈಗೆ ಸಿಕ್ಕಿಬಿದ್ದಿದ್ದ. ಹಾಗಾಗಿ, ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದೇ ದ್ವೇಷದಿಂದ ಕೆಲಸ ಬಿಟ್ಟ ಹೋದ ಮೇಲೂ ಆಗಾಗ್ಗೆ ಅಂಗಡಿ ಬಳಿಗೆ ಬಂದು ಗಮನಿಸಿ ಹೋಗುತ್ತಿದ್ದ.
ಬಸವನಗುಡಿಯಲ್ಲಿರುವ ಬಟ್ಟೆ ಅಂಗಡಿ ಕಳ್ಳತನ : ಕಳೆದ ವಾರ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಗಲ್ಲಾಪೆಟ್ಟಿಗೆಯಲ್ಲಿದ್ದ 2 ಲಕ್ಷ ರೂ. ಕದ್ದು ಪರಾರಿಯಾಗಿದ್ದ. ಇದಕ್ಕಾಗಿ ಈತ ರಾಜಸ್ಥಾನದಿಂದ ವಿಮಾನದಲ್ಲಿ ಬಂದಿದ್ದ. ಈ ಬಗ್ಗೆ ಅಂಗಡಿ ಮಾಲೀಕ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.