ETV Bharat / city

ಸ್ಮಾರ್ಟ್ ಸಿಟಿ ನಗರಗಳ ಮಧ್ಯೆ ಸ್ಪರ್ಧೆ: ನಡಿಗೆ, ಓಟ, ಸೈಕಲ್​​ನಲ್ಲಿ ಬೆಂಗಳೂರು ಫಸ್ಟ್

ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್ ಸಿಟಿ ನಗರಗಳ ನಡುವೆ ಈ ಹಿಂದೆ ಏರ್ಪಡಿಸಿದ್ದ 3 ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಎರಡು ಬಹುಮಾನಗಳನ್ನು ಪಡೆದುಕೊಂಡಿದೆ. ಭಾರತದ ಒಟ್ಟು 130 ಸ್ಮಾರ್ಟ್ ಸಿಟಿಯ ನಗರಗಳು ಸ್ಪರ್ಧೆಯಲ್ಲಿದ್ದವು.

banglore-won-competion-conducted-by-the-central-govt
ಸ್ಮಾರ್ಟ್ ಸಿಟಿ ನಗರಗಳ ಮಧ್ಯೆ ಸ್ಪರ್ಧೆ
author img

By

Published : Feb 19, 2022, 1:42 PM IST

ಬೆಂಗಳೂರು : ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್ ಸಿಟಿ ನಗರಗಳ ನಡುವೆ ಏರ್ಪಡಿಸಿದ್ದ 3 ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಎರಡು ಬಹುಮಾನಗಳನ್ನು ಪಡೆದುಕೊಂಡಿದೆ.

ಸ್ಮಾರ್ಟ್ ಸಿಟಿ ನಗರಗಳ ನಾಗರಿಕರಲ್ಲಿ ನಡಿಗೆ, ಓಟ ಮತ್ತು ಸೈಕಲ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ Freedom2Walk, Freedom2Run ಮತ್ತು Freedom2Cycle ಎಂಬ ಮೂರು ರೀತಿಯ ಸ್ಪರ್ಧೆಗಳನ್ನು ಜನವರಿ 1ರಿಂದ 26ರವರೆಗೆ ದೇಶದಾದ್ಯಂತ ನಡೆಸಲಾಗಿತ್ತು. ಇದರಲ್ಲಿ ನಡಿಗೆ ಮತ್ತು ಓಟದ ಸ್ಪರ್ಧೆಗಳಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ 'ಮುಂಚೂಣಿ ನಗರ' ( Front Runner City ) ಎಂಬ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.

ಭಾರತದ ಒಟ್ಟು 130 ಸ್ಮಾರ್ಟ್ ಸಿಟಿ ನಗರಗಳ ನಡುವೆ ನಡೆದ ಸ್ಪರ್ಧೆಗಳ ಫಲಿತಾಂಶ ನವದೆಹಲಿಯಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸ್ಮಾರ್ಟ್ ಸಿಟಿ ಲಿಮಿಟೆಡ್ ಮುಖ್ಯಸ್ಥ ರಾಕೇಶ್ ಸಿಂಗ್ ಅವರು, ಇದಕ್ಕಾಗಿ ಶ್ರಮಿಸಿದ ಅಧಿಕಾರಿಗಳು ಮತ್ತು ನೌಕರರನ್ನು ಅಭಿನಂದಿಸಿದ್ದಾರೆ.

ಓದಿ : ಮಗನೋ.. ರಾಕ್ಷಸನೋ.. ಹೆತ್ತ ತಾಯಿಯನ್ನೇ ಕ್ರೂರವಾಗಿ ಥಳಿಸಿದ ಮಗ.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.