ETV Bharat / city

ಬೆಂಗಳೂರು ನಗರ ವಿವಿ ಘಟಿಕೋತ್ಸವ : ಹಿರಿಯ ನಟ ರವಿಚಂದ್ರನ್​ಗೆ ಗೌರವ ಡಾಕ್ಟರೇಟ್ - ಹಿರಿಯ ನಟ ರವಿಚಂದ್ರನ್​ಗೆ ಗೌರವ ಡಾಕ್ಟರೇಟ್​

ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಿಕೋತ್ಸವ ಇದೇ 11 ರಂದು ಆಯೋಜಿಸಲಾಗಿದೆ. ಸೆಂಟ್ರಲ್​ ಹಾಲ್​ನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಕುಲಪತಿ ಪ್ರೊ‌.ಲಿಂಗರಾಜ‌ಗಾಂಧಿ ಮಾಹಿತಿ ನೀಡಿದರು..

convocation
ಘಟಿಕೋತ್ಸವ
author img

By

Published : Apr 9, 2022, 7:13 PM IST

Updated : Apr 9, 2022, 7:40 PM IST

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯವನ್ನು 2017ರಲ್ಲಿ ತ್ರಿವಿಭಜನೆ ಮಾಡಲಾಯ್ತು. ವಿಭಜನೆ ಬಳಿಕ ಚೊಚ್ಚಲ ಘಟಿಕೋತ್ಸವಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯವು ಸಾಕ್ಷಿಯಾಗ್ತಿದೆ‌. 23 ವಿಭಾಗಗಳು, 1,20,000 ವಿದ್ಯಾರ್ಥಿಗಳು ವಿವಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ವಿವಿಯ ಕುಲಪತಿ ಪ್ರೊ‌.ಲಿಂಗರಾಜ‌ ಗಾಂಧಿ, ಆಡಳಿತ ಸುಧಾರಣೆ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ 2017- 18ರಲ್ಲಿ ತ್ರಿವಿಭಜನೆ ಮಾಡಲಾಯ್ತು. ನಗರ ವಿವಿಯ ಶೈಕ್ಷಣಿಕ ವರ್ಷವೂ 2018-19ರಿಂದ ಆರಂಭಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಪದವಿ ನೀಡಲಾಗುತ್ತಿದೆ.

ಬೆಂಗಳೂರು ನಗರ ವಿವಿ ಘಟಿಕೋತ್ಸವ : ಹಿರಿಯ ನಟ ರವಿಚಂದ್ರನ್​ಗೆ ಗೌರವ ಡಾಕ್ಟರೇಟ್

ವಿಭಜನೆಗೊಂಡ ನಂತರ ಮೊದಲ ಘಟಿಕೋತ್ಸವ ಆಯೋಜಿಸಲಾಗಿದೆ. ಏಪ್ರಿಲ್ 11ರಂದು ಸೆಂಟ್ರಲ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿರುವ ಬೆಂಗಳೂರು ನಗರ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಪದ್ಮವಿಭೂಷಣ ಡಾ.ಕೆ.ಕಸ್ತೂರಿರಂಗನ್ ಹಾಗೂ ಸಚಿವ ಸಿ.ಎನ್. ಅಶ್ವತ್ಥ್‌ ನಾರಾಯಣ ಭಾಗಿಯಾಗಲಿದ್ದಾರೆ.

ಇನ್ನು ಬೆಂಗಳೂರು ನಗರ ವಿವಿ ಪ್ರಥಮ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಗೌರವ ಡಾಕ್ಟರೇಟ್‌ಗಳನ್ನು ನೀಡಲಾಗುತ್ತಿದೆ. ಸಮಾಜ ಸೇವಾ ಕ್ಷೇತ್ರದಲ್ಲಿ ಎಂ ಆರ್ ಜೈಶಂಕರ್, ಕನ್ನಡ ಚಿತ್ರೋದ್ಯಮಕ್ಕೆ ಕೊಡುಗೆ ನೀಡಿರುವ ನಟ ವಿ ರವಿಚಂದ್ರನ್, ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಡಾ.ಸತ್ಯನಾರಾಯಣ ಅವರಿಗೆ 'ಗೌಡಾ' ನೀಡಲಾಗ್ತಿದೆ. ಘಟಿಕೋತ್ಸವಕ್ಕೆ ಬರುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಇದ್ದು, ಖಾದಿ ವಸ್ತ್ರವನ್ನೇ ಧರಿಸಿಬರಬೇಕಿದೆ ಎಂದರು.

11 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ : ಬೆಂಗಳೂರು ನಗರ ವಿವಿ ಪ್ರಥಮ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 11,768 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ 14,823 (35,49) ಪುರುಷ ವಿದ್ಯಾರ್ಥಿಗಳು ಮತ್ತು 26,945 (64.51%) ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಸ್ನಾತಕ (Under Graduate) ಪದವಿಗೆ ಒಟ್ಟು 29,240 ವಿದ್ಯಾರ್ಥಿಗಳು ಅರ್ಹರಾಗಿದ್ದು, ಅವರುಗಳಲ್ಲಿ ಕಲಾ ನಿಕಾಯದ 2,723 ವಿದ್ಯಾರ್ಥಿಗಳು, ವಿಜ್ಞಾನ ನಿಕಾಯದ 7,179 ವಿದ್ಯಾರ್ಥಿಗಳು, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ 16,881 ವಿದ್ಯಾರ್ಥಿಗಳು ಮತ್ತು ಶಿಕ್ಷಣ ನಿಕಾಯದ 2,457 ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ‌.

ಸ್ನಾತಕೋತ್ತರ (Post Graduate) ಪದವಿಗೆ ಒಟ್ಟು 12,528 ವಿದ್ಯಾರ್ಥಿಗಳು ಅರ್ಹರಾಗಿದ್ದು, ಅವರುಗಳಲ್ಲಿ ಕಲಾ ನಿಕಾಯದ 1.369 ವಿದ್ಯಾರ್ಥಿಗಳು, ವಿಜ್ಞಾನ ನಿಕಾಯದ 2,932 ವಿದ್ಯಾರ್ಥಿಗಳು, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ 8,191 ವಿದ್ಯಾರ್ಥಿಗಳು ಮತ್ತು ಶಿಕ್ಷಣ ನಿಕಾಯದ 36 ವಿದ್ಯಾರ್ಥಿಗಳು ಸೇರಿದ್ದಾರೆ.

ಘಟಿಕೋತ್ಸವದಲ್ಲಿ ಒಟ್ಟು 84 ಪ್ರಥಮ ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಬ್ಯಾಂಕ್ ಸರ್ಟಿಫಿಕೇಟ್‌ಗಳನ್ನು ಸ್ವೀಕರಿಸಲಿದ್ದು, ಅವರುಗಳಲ್ಲಿ 2018 -20ರ ಶೈಕ್ಷಣಿಕ ವರ್ಷದ 32 ಮತ್ತು 2019-21 ಶೈಕ್ಷಣಿಕ ವರ್ಷದ 32 ಸ್ನಾತಕೋತ್ತರ ವಿದ್ಯಾರ್ಥಿಗಳು, ಬೆಂಗಳೂರು ನಗರ, ವಿಶ್ವವಿದ್ಯಾನಿಲಯದ ಸ್ಥಾಪಿತ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ ಮತ್ತು ಆರು ಸ್ನಾತಕ (Under graduate) ವಿದ್ಯಾರ್ಥಿಗಳು (ಆಯಾ ನಿಕಾಯಗಳಲ್ಲಿ ಅತಿ ಹೆಚ್ಚು ಅಂಕಪಡೆದವರು) ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸ್ಥಾಪಿತ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಪಡೆಯಲಿದ್ದಾರೆ. ಜೊತೆಗೆ ವಿವಿಧ ದಾನಿಗಳು ಸ್ಥಾಪಿಸಿರುವ ಒಟ್ಟು 7 ಚಿನ್ನದ ಪದಕಗಳನ್ನು ಸಹ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು.

ಓದಿ: ಕೊನೆಗೂ ಕೆಪಿಸಿಸಿ ಉಪಾಧ್ಯಕ್ಷ, ಪದಾಧಿಕಾರಿಗಳ ನೇಮಿಸಿದ ಹೈಕಮಾಂಡ್.. ಸರ್ವರಿಗೂ ಸಮಪಾಲು..

Last Updated : Apr 9, 2022, 7:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.