ETV Bharat / city

ಸ್ವಾತಂತ್ರ್ಯ ಚಳವಳಿ: ಮಹಾತ್ಮ ಗಾಂಧೀಜಿ ಹಾಗೂ ಬೆಂಗಳೂರಿನ ಕುರುಹುಗಳು.. - bangaluru,

ದೇಶಾದ್ಯಂತ ಇಂದು ಸ್ವಾತಂತ್ಯ ದಿನದ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ಚಳವಳಿ ಸಂದರ್ಭ ಬೆಂಗಳೂರು ಪ್ರಮುಖ ಪಾತ್ರ ವಹಿಸಿತ್ತು. ಮಹಾತ್ಮ ಗಾಂಧೀಜಿ ಕೆಲವು ಭಾರಿ ನಗರಕ್ಕೆ ಭೇಟಿ ನೀಡಿದ್ದರು.

bangalore plays major role in The freedom movement
ಸ್ವಾತಂತ್ರ್ಯ ಚಳುವಳಿ, ಮಹಾತ್ಮಾ ಗಾಂಧೀಜಿ ಹಾಗೂ ಬೆಂಗಳೂರಿನ ಕುರುಹುಗಳು...
author img

By

Published : Aug 15, 2021, 7:56 AM IST

ಬೆಂಗಳೂರು: ಇಡೀ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾದ ಸಂದರ್ಭದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆಯಲು ಅಂದು ಬೆಂಗಳೂರು ಸಹ ಮಹತ್ವದ ಪಾತ್ರ ವಹಿಸಿದೆ. ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಗರದ ಕೆಲ ಸ್ಥಳಗಳಲ್ಲಿ ಏನು ನಡೆದಿದ್ದವು? ಎಂಬುದನ್ನು ನೋಡೋಣ..

ಮಹಾತ್ಮ ಗಾಂಧೀಜಿ ನಗರಕ್ಕೆ 5 ಭಾರಿ ಭೇಟಿ:

ಮಾಹಾತ್ಮ ಗಾಂಧಿ ನಗರಕ್ಕೆ 1915,1920,1927,1934 ಹಾಗೂ 1936 ರಲ್ಲಿ ಬಂದದ್ದು ಸೇರಿ ಒಟ್ಟು ಐದು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದರು.

ಬೆಂಗಳೂರಿಗೆ ಮೊದಲ ಭೇಟಿ:

ಮೇ 8, 1915ರಲ್ಲಿ ಡಿ ವಿ ಗುಂಡಪ್ಪ ಮನವಿ ಮೇರೆಗೆ ಮದ್ರಾಸ್​ನಿಂದ ಬೆಂಗಳೂರಿಗೆ ಬಾಪೂಜಿ ಹಾಗೂ ಅವರ ಪತ್ನಿ ಕಸ್ತೂರಬಾ ರೈಲು ಮೂಲಕ ನಗರಕ್ಕೆ ಆಗಮಿಸಿದ್ದರು. ದಕ್ಷಿಣ ಆಫ್ರಿಕಾದಿಂದ ಬಂದ ಮಹಾತ್ಮ ಗಾಂಧಿ ಹಾಗೂ ಅವರ ಪತ್ನಿ ಫಸ್ಟ್​​ ಕ್ಲಾಸ್ ಬೋಗಿಯಲ್ಲಿ ಮದ್ರಾಸ್​ನಿಂದ ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಇವರ "ಭಾರತ ಪ್ರವಾಸ" ಅಭಿಯಾನದ ದಕ್ಷಿಣ ಭಾರತದ ವೆಚ್ಚದ ನಿಧಿ ಸಂಗ್ರಹ ಜವಾಬ್ದಾರಿಯನ್ನು ಮದ್ರಾಸ್​​ನ ಪತ್ರಕರ್ತ ಡಿ ಎ ನಟೇಶನ್ ವಹಿಸಿಕೊಂಡಿದ್ದರು.

ಆನಂದ್​ ರಾವ್ ಸರ್ಕಲ್​ಗೆ ಗಾಂಧೀಜಿ ಭೇಟಿ: ರಥ ಏರಲು ನಿರಾಕಾರಣೆ

ನಗರದಲ್ಲಿ ಬಾಪೂಜಿ ಮೊದಲ ಸಭೆಯನ್ನು ಅಂದಿನ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ (ಇಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು) ಮಾಡಿದ್ದರು. ನಂತರ ಆನಂದ್ ರಾವ್ ವೃತ್ತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ವಿಶೇಷ ರಥವನ್ನು ಸಿದ್ಧಪಡಿಸಲಾಗಿತ್ತು. ಆಗ ಯುವಕರು ನಾನು ಕೂರುವ ರಥವನ್ನು ಎಳೆಯುತ್ತಾರೆ ಎಂದು ಗಾಂಧೀಜಿ ರಥವನ್ನು ಏರಲು ಒಪ್ಪದೆ ಕಾಲ್ನಡಿಗೆಯಲ್ಲಿಯೇ ಆನಂದ ರಾವ್ ವೃತ್ತಕ್ಕೆ ಹೋದರು ಎಂಬುದು ಗಾಂಧಿ ಸ್ಮಾರಕ ನಿಧಿ ಪ್ರಕಟಿಸಿರುವ " ಗಾಂಧಿ ಇನ್ ಬೆಂಗಳೂರು"(Gandhi In Bengaluru) ಪುಸ್ತಕದಲ್ಲಿ ದಾಖಲೆಯಾಗಿದೆ.

ಅಸಹಕಾರ ಚಳವಳಿ-ಈದ್ಗಾ ಖುದ್ದುಸ್ ಸಾಹೇಬ್​ಗೆ ಭೇಟಿ

ಗಾಂಧೀಜಿ ಎರಡನೇ ಬಾರಿ ಮಿಲ್ಲರ್ಸ್ ರಸ್ತೆ (ಇಂದಿನ ಶಿವಾಜಿನಗರ)ಯ ಈದ್ಗಾ ಖುದ್ದುಸ್ ಸಾಹೇಬ್​ಗೆ ಭೇಟಿ ನೀಡಿ ಸಹಸ್ರಾರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಆಗ ದೇಶದಲ್ಲಿ ಅಸಹಕಾರ ಚಳವಳಿ ಪ್ರಾರಂಭವಾಗಿತ್ತು. ಗಾಂಧೀಜಿ ಅವರ ಅರ್ಧ ದಿನದ ಭೇಟಿಯಲ್ಲಿ 40,000 ಕ್ಕೂ ಹೆಚ್ಚು ಜನರು ಭಾಷಣ ಕೇಳಲು ಸೇರಿದ್ದರು.

ಯಶವಂತಪುರ ರೈಲು ನಿಲ್ದಾಣ: ಪ್ರಾರ್ಥನೆ ದಾಖಲೆ ಸೃಷ್ಟಿಸಿದ ಜನ ಸಮೂಹ

ಏಪ್ರಿಲ್ 20,1927 ರಂದು ನಗರದಲ್ಲಿ ಆಗಮಿಸಿದ ಮಾಹಾತ್ಮ ಗಾಂಧಿ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಾಗ ಅಪಾರ ಜನ ಸಮೂಹ ಸೇರಿತ್ತು. ಬಾಪು ರೈಲಿನಿಂದ ಹೊರಬಂದಾಗ ಅವರ ಪ್ರಾರ್ಥನಾ ಸಮಯವಾಗಿತ್ತು. ಆಗ ಪ್ಲಾಟ್​ಫಾರ್ಮ್​​ನಲ್ಲೇ ಇಡೀ ಸಮೂಹ ಗಾಂಧೀಜಿ ಜೊತೆ ಪ್ರಾರ್ಥನೆ ನಡೆಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.

ಕುಮಾರಕೃಪ ಅತಿಥಿ ಗೃಹದಲ್ಲಿ ಮೂರು ತಿಂಗಳ ನೆಲೆ: ಪ್ರತಿನಿತ್ಯ ಜನರ ಭೇಟಿ, ಪ್ರಾರ್ಥನೆ

ಕುಮಾರ ಪಾರ್ಕ್​​ನಲ್ಲಿ ಈಗಿರುವ ಗಾಂಧಿ ಭವನದಲ್ಲಿ ಮಾಹಾತ್ಮ ಗಾಂಧಿ 1927ರಲ್ಲಿ ಮೂರು ತಿಂಗಳು ನೆಲೆಸಿ ಪ್ರತಿ ನಿತ್ಯ ಪ್ರಾರ್ಥನೆ ಹಾಗೂ ಜನರ ಭೇಟಿ ನಡೆಸಿದ್ದರು. ಈಗ ಈ ಸ್ಥಳವನ್ನ ಐತಿಹಾಸಿಕ ಸ್ಮಾರಕವಾಗಿ ರೂಪಾಂತರ ಗೊಳಿಸಲಾಗಿದೆ. ಬಾಪು ಇದ್ದ ಸ್ಥಳಕ್ಕೆ ನಗರದ ವಿವಿಧ ಸ್ಥಳಗಳಿಂದ ಅನೇಕ ಜನರು ಭೇಟಿಗೆ ಬರುತ್ತಿದ್ದು, ಗಾಂಧೀಜಿ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ತಿಳಿಹೇಳುತ್ತಿದ್ದರು. ಇವರು ತಂಗಿದ ಅತಿಥಿ ಗೃಹ ಪಕ್ಕಕ್ಕೆ ಆಗ ಇಂಪೀರಿಯಲ್ ಡೈರಿ ಫಾರ್ಮ್​​​ನ ಮುಖ್ಯಸ್ಥ ವಿಲಿಯಂ ಸ್ಮಿತ್ ಕಚೇರಿ ಇತ್ತು. ಆಗ ಗಾಂಧೀಜಿ ಮತ್ತು ವಿಲಿಯಂ ಸ್ಮಿತ್ ದೇಶದಲ್ಲಿ ಹೈನುಗಾರಿಕೆ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದರು.

ನಂದಿ ಬೆಟ್ಟಕ್ಕೆ ಭೇಟಿ: ಗಾಂಧಿಗೆ ಅಚ್ಚುಮೆಚ್ಚಿನ ತಾಣ

1936 ರಲ್ಲಿ ಮಹಾತ್ಮ ಗಾಂಧೀಜಿಗೆ ರಕ್ತದೊತ್ತಡ ಸಮಸ್ಯೆ ಹೆಚ್ಚಳ ಆಗಿದ್ದು, 45 ದಿನಗಳ ವಿಶ್ರಾಂತಿಗೆ ನಗರದಿಂದ 40 ಕಿ.ಮೀ ದೂರದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ರುದ್ರ ರಮಣೀಯ ನಂದಿ ಬೆಟ್ಟವನ್ನು ಬ್ರಿಟಿಷರು ಹಾಗೂ ಹಿಂದೆ ಟಿಪ್ಪು ಸುಲ್ತಾನ್​ ಕೂಡ ಬೇಸಿಗೆ ಅರಮನೆಯಾಗಿ ಉಪಯೋಗಿಸುತ್ತಿದ್ದರು. ನಂದಿ ಬೆಟ್ಟದ ವಾತಾವರಣ ನೋಡಿದ ಬಾಪುವಿಗೆ ಈ ತಾಣ ಅಚ್ಚುಮೆಚ್ಚಿನ ಜಾಗ ಎಂದು ಅನಿಸಿತ್ತು.

ಇದನ್ನೂ ಓದಿ: 75 ನೇ ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಪೊಲೀಸ್​ ಭದ್ರತೆ

ಇವರು ಇದ್ದ ಸಮಯದಲ್ಲಿ ಬೆಟ್ಟದ ತಪ್ಪಲಿನ ಮಾಡಕು ಹೊಸಳ್ಳಿ ಗ್ರಾಮಕ್ಕೆ ಭೇಟಿ ನೀಡುವ ಜೊತೆಗೆ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಗ್ರಾಮದ ಭೇಟಿ ಸ್ಮರಣಾರ್ಥವಾಗಿ ಕೆಲ ದಶಕಗಳ ಹಿಂದೆ ಈ ಗ್ರಾಮವನ್ನು ಗಾಂಧಿಪುರ ಎಂದು ನಾಮಕರಣ ಮಾಡಲಾಯಿತು.ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಹೆಸರು ಬಿಟ್ಟು ಚಳವಳಿಯನ್ನು ಹೇಳಲು ಸಾಧ್ಯವಿಲ್ಲ. ಗಾಂಧೀಜಿ ಇದ್ದ ಕಡೆ ದೇಶಾಭಿಮಾನ ಹಾಗೂ ಸ್ವಾತಂತ್ರ್ಯ ಮಹತ್ವದ ಚಿಂತನೆ ಇರುತ್ತಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.