ETV Bharat / city

ಗಲಭೆಗೆ ಕಾರ್ಪೊರೇಟರ್, ಉಗ್ರರ ನಂಟು ಶಂಕೆ ಹಿನ್ನೆಲೆ ಮೊಬೈಲ್ ಜಪ್ತಿ: ತನಿಖೆಯ 'ಇನ್​ಸೈಡ್ ಸ್ಟೋರಿ'

ಧರ್ಮ ನಿಂದನೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕೇವಲ ವಿಡಿಯೋ ಆಧಾರದ ಮೇಲೆ ತನಿಖೆ ಅಸಾಧ್ಯ ಎಂದು ಅರಿತ ಸಿಸಿಬಿ ಪೊಲೀಸರು, ಸದ್ಯ ಕೆಲ ಕಾರ್ಪೊರೇಟರ್​​ಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಅವರ ಮೊಬೈಲ್​​ಗಳನ್ನು ಸಹ ವಶಪಡಿಸಿಕೊಂಡಿದ್ದು, ಅವುಗಳನ್ನು ಟೆಕ್ನಿಕಲ್​​ ಸೆಲ್​ಗೆ ರವಾನಿಸಿದ್ದಾರೆ.

bangalore-violence-investigation-inside-report
ಡಿ.ಜಿ ಹಳ್ಳಿ ಕೆ.ಜಿ ಹಳ್ಳಿ ಗಲಭೆ
author img

By

Published : Aug 18, 2020, 7:21 PM IST

ಬೆಂಗಳೂರು: ಡಿ.ಜಿ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಕಾರ್ಪೊರೇಟರ್​​ಗಳ ಪ್ರಾಥಮಿಕ ತನಿಖೆಯನ್ನ ಸದ್ಯ ಸಿಸಿಬಿ ಅಧಿಕಾರಿಗಳು ಮುಗಿಸಿದ್ದಾರೆ. ಆದರೆ, ಮಾಜಿ ಮೇಯರ್ ಸಂಪತ್​ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಹುಸೇನ್​​ಗೆ ಸಿಸಿಬಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಇಬ್ಬರ ಬಳಿಯಿದ್ದ ಮೊಬೈಲ್​ಗಳನ್ನು​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಲಭೆ ರಾತ್ರಿ ನಡೆದ ಕಾರಣ ಕೇವಲ ವಿಡಿಯೋ ಆಧಾರದ ಮೇರೆ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸರು ಮೊಬೈಲ್ ಲೋಕೇಷನ್, ಮೊಬೈಲ್​ ಕರೆಗಳು ಮತ್ತು ಸಂದೇಶಗಳ ಆಧಾರದ ಮೇಲೆ ಆರೋಪಿಗಳನ್ನ ಮಟ್ಟ ಹಾಕ್ತಿದ್ದಾರೆ. ಇಬ್ಬರು ಕಾರ್ಪೊರೇಟರ್​ಗಳ ಮೊಬೈಲ್​​ನಲ್ಲಿರುವ ಮಾಹಿತಿಯು ತನಿಖಾಧಿಕಾರಿಗಳಿಗೆ ಬಹಳ ಮುಖ್ಯವಾಗಿದೆ. ಸದ್ಯ ಸಿಸಿಬಿ‌ ಪೊಲೀಸರು ಸಂಪತ್ ರಾಜ್ ಪಿಎ ಅರುಣ್ ಮೊಬೈಲ್​ನ್ನು ಟೆಕ್ನಿಕಲ್ ಸೆಲ್​​​ಗೆ ರವಾನಿಸಿದ್ದಾರೆ.

ಸದ್ಯ ಸಿಸಿಬಿ‌ ಪೊಲೀಸರ ವಿಚಾರಣೆ ವೇಳೆ ಗಲಭೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ‌ ಮೇಯರ್ ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ. ಆದರೆ ತನಿಖಾಧಿಕಾರಿಗಳಿಗೆ ಈಗಾಗಲೇ ಅಖಂಡ ಶಾಸಕ ಶ್ರೀನಿವಾಸ್​ಮೂರ್ತಿ ಹಾಗೂ ಮಾಜಿ ಮೇಯರ್ ಸಂಪತ್​ ರಾಜ್​ಗೆ ಚುನಾವಣಾ ವಿಚಾರದಲ್ಲಿ ಜಿದ್ದಾಜಿದ್ದಿ ಇದ್ದುದಾಗಿ ತಿಳಿದಿದೆ ಎನ್ನಲಾಗ್ತಿದೆ. ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದರೂ ಕೂಡ ಘಟನೆಗೂ ನನಗೂ ಸಂಬಂಧವಿಲ್ಲ. ಹಾಗೆ ನನ್ನ ಪಿಎ ಅರುಣ್ ಗಲಭೆಕೋರರ ಜೊತೆ ಏನ್ ಮಾತಾಡಿದ್ದ ಅನ್ನೋದು ಗೊತ್ತಿಲ್ಲ. ಬಂಧಿತರು ಎಲ್ಲಾ ನಮ್ಮ ವ್ಯಾಪ್ತಿ ಇರುವ ಕಾರಣ ಪರಿಚಯ ಇದೆ ಅಷ್ಟೇ. ಪರಿಚಯ ಇದ್ದ ಕಾರಣಕ್ಕೆ ಗಲಭೆಯನ್ನು ನಾವೇ ಮಾಡಿಸಿದ್ದೇವೆ ಎಂದು ಹೇಳೋದು ತಪ್ಪು ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಸಿಸಿಬಿ ಅಧಿಕಾರಿಗಳು ಸಂಪತ್ ರಾಜ್ ರಿಂದ 18 ಪುಟಗಳ ಹೇಳಿಕೆ, ಜಾಕೀರ್ ಹುಸೇನ್ ನಿಂದ 16 ಪುಟಗಳ ಹೇಳಿಕೆ ದಾಖಲಿಸಿದ್ದಾರೆ. ‌ಮುಂದೆ ಟೆಕ್ನಿಕಲ್ ಸೆಲ್ ಮೊಬೈಲ್ ಆಧಾರದ ಮೇಲೆ ಯಾವ ವರದಿ ಕೊಡುತ್ತೆ, ಅದರ ಅಧಾರದ ಮೇರೆಗೆ ತನಿಖೆ ಸಾಗಲಿದೆ. ಕಾರ್ಪೊರೇಟರ್ ಯಾರ ಜೊತೆ ಸಂಪರ್ಕ ಇದ್ರು, ಗಲಭೆ ನಡೆದ ದಿನ ಎಲ್ಲಿದ್ರು, ಗಲಭೆ ನಡೆದಾಗ ಏನೆಲ್ಲಾ ಕಾಲ್, ಮೆಸ್ಸೇಜ್​ಗಳು ವಿನಿಯಮಯವಾಗಿವೆ ಅನ್ನೋ ಮಾಹಿತಿ ಪಡೆದು ತನಿಖೆ ನಡೆಸಲಿದ್ದಾರೆ.

ಮತ್ತೊಂದೆಡೆ ಉಗ್ರ ಸಂಘಟನೆ ಜೊತೆ ನಂಟಿರುವ ಶಂಕೆ ಮೇರೆಗೆ ಸಮೀಯುದ್ದೀನ್​ಅನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತನ ಜೊತೆ ಗಲಭೆಯಲ್ಲಿ ಭಾಗಿಯಾಗಿದ್ದ 40 ಜನ ಸಂಪರ್ಕದಲ್ಲಿದ್ದರು. ಇವರೆಲ್ಲಾ ಉಗ್ರ ಸಂಘಟನೆ ಹಿನ್ನೆಲೆ ಉಳ್ಳವರು ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆ. ಅಲ್ಲದೆ ಸಮೀಯುದ್ದೀನ್ 2016 ರಲ್ಲಿ ‌ನಡೆದ ಆರ್​ಎಸ್​ಎಸ್​ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳ ಜೊತೆ ಜೈಲಿನಲ್ಲಿ ಸಂಪರ್ಕದಲ್ಲಿದ್ದ. ಹಾಗೆಯೇ ನಗರದ ಹಲವಾರು ಕಡೆ ಇನ್ನಷ್ಟು ದುಷ್ಕೃತ್ಯವೆಸಗಲು ರೆಡಿಯಾದ ವಿಚಾರ ಬೆಳಕಿಗೆ‌ ಬಂದಿದೆ‌.

‌ಡಿ.ಜೆ. ಹಳ್ಳಿ ಠಾಣೆ ಹಾಗೂ ಸಿಸಿಬಿ ಕಚೇರಿಯಲ್ಲಿ ಬೆಂಕಿ ಗಲಭೆ ಸಂಬಂಧಿಸಿದಂತೆ ಒಂದೊಂದು ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ಪ್ರಕರಣದಲ್ಲಿ ಉಗ್ರರ ಕೈವಾಡ, ರಾಜಾಕಾರಣದ ತಿಕ್ಕಾಟದ ಅನುಮಾನಗಳೊಂದಿಗೆ ಪ್ರಕರಣ ಬೇರೆ ಬೇರೆ ‌ಮಜಲು ಪಡೆಯುತ್ತಿದೆ. ಎಲ್ಲಾ ರೀತಿಯಿಂದಲೂ ಪೊಲೀಸರು ತನಿಖೆಗೆ ಇಳಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.