ETV Bharat / city

ಪ್ರತಿಭಟನೆ ಕೈ ಬಿಟ್ಟ ಬೆಂಗಳೂರು ವಿವಿ ವಿದ್ಯಾರ್ಥಿಗಳು: ಎಫ್ಐಆರ್ ವಾಪಸ್ - BANGALORE UNIVERSITY STUDENT STOPPED PROTEST

ಬೆಂಗಳೂರು ವಿವಿಯಲ್ಲಿ ರಾತ್ರೋರಾತ್ರಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನ ಇಂದು ವಾಪಸ್​ ಪಡೆದಿದ್ದಾರೆ.

ಬೆಂಗಳೂರು ವಿವಿ ವಿದ್ಯಾರ್ಥಿಗಳು
ಬೆಂಗಳೂರು ವಿವಿ ವಿದ್ಯಾರ್ಥಿಗಳು
author img

By

Published : Jun 1, 2022, 9:08 AM IST

Updated : Jun 1, 2022, 9:40 AM IST

ಬೆಂಗಳೂರು: ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸದೇ 28 ಕೋಟಿ ರೂ. ಮೊತ್ತದ ಬಿಲ್​ಗೆ ರಾತ್ರೋರಾತ್ರೀ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ್‌ ಕೆ.ಆರ್. ಹಣಕಾಸು ವಿಭಾಗದ ಅಧಿಕಾರಿ ಅನುಮೋದನೆ ಕೊಟ್ಟಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನ ವಾಪಸ್​ ಪಡೆದಿದ್ದಾರೆ.

ಮೇ 27 ರಂದು ಹಣಕಾಸು ಅಧಿಕಾರಿ ಜಯಲಕ್ಷ್ಮಿ, ತಮ್ಮ ವಿರುದ್ಧ ಮುಷ್ಕರ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಏಕವಚನದಲ್ಲಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಮೇಲೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ, ಮೇ 30 ರಂದು ಬೆಂಗಳೂರು ವಿಶ್ವವಿದ್ಯಾಲಯ ಬಂದ್ ಮಾಡಿ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು.‌ ಜೊತೆಗೆ ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ಹಿಂಪಡೆಯಲು ಒತ್ತಾಯಿಸಿದ್ದರು.

ಪ್ರತಿಭಟನೆ ಕೈ ಬಿಟ್ಟ ಕುರಿತು ಮಾಹಿತಿ ನೀಡಿದ ವಿದ್ಯಾರ್ಥಿ

ಇದೀಗ ವಿವಿಯ ಉಪ ಕುಲಪತಿ ಪ್ರೊ.ವೇಣುಗೋಪಾಲ್ ದೂರು‌ ಹಿಂಪಡೆಯುವುದಾಗಿ ಭರವಸೆ ನೀಡಿರುವ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ಎರಡು ದಿನಗಳ ಪ್ರತಿಭಟನೆ ಮೊಟಕು ಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಮತ್ತೊಮ್ಮೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿನ ಅನ್ಯಾಯ ಪ್ರಶ್ನಿಸಿ ಪ್ರತಿಭಟಿಸಿದವರ ವಿರುದ್ಧ ಕೇಸ್‌.. ವಿದ್ಯಾರ್ಥಿಗಳ ಮೇಲಿನ FIR ಹಿಂಪಡೆಯಲು ಒತ್ತಾಯ..

Last Updated : Jun 1, 2022, 9:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.