ETV Bharat / city

ನಟ ಪುನೀತ್ ನಿಧನ ಹಿನ್ನೆಲೆ : ಬೆಂಗಳೂರು ವಿವಿ ಎಂಬಿಎ, ಬಿ.ಇಡಿ ಪರೀಕ್ಷೆ ಮುಂದೂಡಿಕೆ

author img

By

Published : Oct 29, 2021, 9:06 PM IST

ಎಂಬಿಎ ಮತ್ತು ಬಿ.ಇಡಿ ಪರೀಕ್ಷೆಗಳ ವೇಳಾ ಪಟ್ಟಿ ಅಕ್ಟೋಬರ್ 30ರಂದು ನಿಗದಿಯಾಗಿತ್ತು. ನಟ ಪುನೀತ್​ ನಿಧನ ಹಿನ್ನೆಲೆ ಇದೀಗ ಎಂಬಿಎ ಪರೀಕ್ಷೆಯನ್ನು ನವೆಂಬರ್ 12 ರಂದು ಹಾಗೂ ಬಿ.ಇಡಿ ಪರೀಕ್ಷೆಯನ್ನು ನವೆಂಬರ್ 6ರಂದು ನಡೆಸಲಾಗುತ್ತಿದೆ..

bangalore-university
ಬೆಂಗಳೂರು ವಿವಿ

ಬೆಂಗಳೂರು : ನಟ, ಪುನೀತ್​ ರಾಜ್​ಕುಮಾರ್ ನಿಧನ ಹಿನ್ನೆಲೆ ನಾಳೆ ನಡೆಯಬೇಕಿದ್ದ ಎಂಬಿಎ ಮತ್ತು ಬಿ.ಇಡಿ ಪರೀಕ್ಷೆಗಳನ್ನು ಮೂಂದೂಡಿ ಬೆಂಗಳೂರು ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.

ಅಕ್ಟೋಬರ್ 30ಕ್ಕೆ ಬೆಂಗಳೂರು ವಿವಿಯ ಎಂಬಿಎ ಮತ್ತು ಬಿ.ಇಡಿ ಪರೀಕ್ಷೆಗಳ ವೇಳಾ ಪಟ್ಟಿ ನಿಗದಿಯಾಗಿತ್ತು. ಆದರೆ, ನಟ ಪುನೀತ್​ ನಿಧನ ಹಿನ್ನೆಲೆ ಇದೀಗ ಎಂಬಿಎ ಪರೀಕ್ಷೆಯನ್ನು ನವೆಂಬರ್ 12ರಂದು ಹಾಗೂ ಬಿ.ಇಡಿ ಪರೀಕ್ಷೆಯನ್ನು ನವೆಂಬರ್ 6ರಂದು ನಡೆಸಲಾಗುತ್ತಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ರಜೆ ಘೋಷಣೆ ಜವಾಬ್ದಾರಿ ಆಯಾ ಶಾಲೆಗೆ ಬಿಟ್ಟಿದ್ದು

ಸರ್ಕಾರಿ ರಜೆ ಘೋಷಣೆ ಮಾಡದ ಕಾರಣಕ್ಕೆ ಇತ್ತ ಕ್ಯಾಮ್ಸ್ ಸಂಘವೂ ಬೆಂಗಳೂರಿನಲ್ಲಿರುವ ಶಾಲೆಗಳು ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆಯನ್ನ ಮಾಡಬಹುದು ಅಂತಾ ತಿಳಿಸಿದೆ. ನಗರ ಪೊಲೀಸ್ ಆಯುಕ್ತರ ಮೇರೆಗೆ ಹಾಗೂ ಸ್ಥಳೀಯವಾಗಿ ವಾತಾವರಣ ಬಿಗಿಯಾದರೆ ಅಂತಹ ಖಾಸಗಿ ಶಾಲೆಗಳು ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಬಹುದು ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.

ನೃಪತುಂಗ ವಿವಿ ಪರೀಕ್ಷೆ ಮುಂದೂಡಿಕೆ

ಅಲ್ಲದೆ, ನೃಪತುಂಗ ವಿಶ್ವವಿದ್ಯಾಲಯದ ನಾಲ್ಕನೇ ಸೆಮಿಸ್ಟರ್​ನ​​​ ಎಲ್ಲಾ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.