ಬೆಂಗಳೂರು: ಬೇಗೂರು ಠಾಣೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಕಾರಣ ಅವರನ್ನ ಚಿಕಿತ್ಸೆಗೊಳಪಡಿಸಿ, ಅವರ ಜೊತೆಗಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ನಿನ್ನೆ ಆರೋಗ್ಯಾಧಿಕಾರಿಗಳ ಎಡವಟ್ಟಿನಿಂದ ಪೊಲೀಸ್ ಸಿಬ್ಬಂದಿಯನ್ನು ಸೊಂಕಿತರ ಪಟ್ಟಿಗೆ ಸೇರಿಸಿರುವುದು ಕಂಡು ಬಂದಿತ್ತು. ಸದ್ಯ ಪೇದೆಗೆ ಕೊರೊನಾ ಸೋಂಕು ಪತ್ತೆಯಾಗದೇ ಇರುವುದು ದೃಢಪಟ್ಟ ಹಿನ್ನೆಲೆ ಆಗ್ನೇಯ ವಿಭಾಗದ ಪೊಲೀಸರು ನಿರಾಳರಾಗಿದ್ದಾರೆ.
ಹೊಂಗಸಂದ್ರದ ಬಳಿ ಬಿಹಾರಿ ಕೂಲಿ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಆ ಸ್ಥಳವನ್ನು ಸೀಲ್ಡೌನ್ ಮಾಡಲಾಗಿತ್ತು. ಹೀಗಾಗಿ ಆಗ್ನೇಯ ವಿಭಾಗದ ಡಿಸಿಪಿ ಜೋಷಿ ಶ್ರೀನಿವಾಸ್ ಮಹದೇವ್ ನೇತೃತ್ವದ ತಂಡ ಸೀಲ್ಡೌನ್ ಏರಿಯಾದ ಭದ್ರತೆ ಹೊಣೆ ಹೊತ್ತಿದ್ರು. ಹೀಗಾಗಿ ಎಲ್ಲ ಸಿಬ್ಬಂದಿಯನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ಭದ್ರತೆಗೆ ತೆರಳಿದ ಬೇಗೂರು ಕಾನ್ಸ್ಟೇಬಲ್ಗೆ ಕೊರೊನಾ ಸೊಂಕು ಪತ್ತೆಯಾಗಿದೆ ಎಂದು ಮೊದಲು ಆರೋಗ್ಯಾಧಿಕಾರಿಗಳು ತಿಳಿಸಿದ್ರು. ಎರಡನೇ ಬಾರಿ ಪರೀಕ್ಷೆ ಮಾಡಿದಾಗ ಸೋಂಕು ತಗುಲಿಲ್ಲ, ಬೇರೆ ವ್ಯಕ್ತಿಗೆ ಬಂದಿರುವ ಸೋಂಕು ಪೇದೆಗೆ ಬಂದಿರುವುದಾಗಿ ಮೊದಲ ರಿಪೋರ್ಟ್ ನೀಡಿರುವುದು ದೃಢಪಟ್ಟಿತ್ತು. ಹೀಗಾಗಿ ಎಲ್ಲ ಹಿರಿಯಾಧಿಕಾರಿಗಳು ನಿರಳಾರಾಗಿದ್ದಾರೆ.
ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೇದೆಗೆ ಹಾಗೂ ಆಗ್ನೇಯ ವಿಭಾಗದ ಸಿಬ್ಬಂದಿಗೆ ಅಭಯ ನೀಡಿದ್ದಾರೆ. ಸದ್ಯ ಪೇದೆ ಮತ್ತೆ ಕೆಲಸ ಮುಂದುವರೆಸುವಂತೆ ತಿಳಿಸಿದ್ದಾರೆ. ಆದರೆ, ಪೇದೆ ಸದ್ಯದ ಮಟ್ಟಿಗೆ ಮನೆಯಲ್ಲೆ ಇದ್ದು ಕೊಂಚ ರಿಲ್ಯಾಕ್ಸ್ ಆಗಲಿದ್ದಾರೆ. ಹಾಗೆ ಸಿಬ್ಬಂದಿ ತಮ್ಮ ಆರೋಗ್ಯ ನೋಡುವಂತೆ ಆಗ್ನೇಯ ವಿಭಾಗದ ಸಿಬ್ಬಂದಿಗೆ ವಾಕಿಯಲ್ಲಿ ತಿಳಿಸಿದ್ದಾರೆ.