ಬೆಂಗಳೂರು : ರಾಜ್ಯಾದ್ಯಂತ ಲಾಕ್ಡೌನ್ ಆದಾಗಿಂದ ಪೊಲೀಸರು ರಸ್ತೆಗಳ ಮೇಲೆ ಬರುವ ವಾಹನ ತಪಾಸಣೆಯನ್ನು ಕಠಿಣವಾಗಿ ನಿರ್ವಹಿಸುತ್ತಿದ್ದಾರೆ. ಈ ವೇಳೆ ನಿಯಮ ಉಲ್ಲಂಘಿದ ಕೆಲವು ಮಂದಿಯ ಮೇಲೆ ಕೇಸ್ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ನಗರ ಪೊಲೀಸರು ಬುಧವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಸಿದ ಕಾರ್ಯಚರಣೆಯಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ, ಕಾರು, ಆಟೋ ಸೇರಿದಂತೆ ಒಟ್ಟು 941 ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಕೋವಿಡ್ ಆತಂಕ: ಬೆರಳಚ್ಚು ಹಾಜರಾತಿ ಕೈಬಿಡಲು ಕೆಪಿಸಿಎಲ್ ನೌಕರರ ಪ್ರತಿಭಟನೆ
ದ್ವಿಚಕ್ರ ವಾಹನ - 870, ಆಟೋ-37 , ಕಾರು - 34 ಹೀಗೆ ಒಟ್ಟು 941 ವಾಹನಗಳು ಜಪ್ತಿ ಮಾಡಲಾಗಿದೆ. ಕೊರೊನಾ ರೂಲ್ಸ್ ಬ್ರೇಕ್ ಮಾಡಿದ 6 ಮಂದಿಯ ವಿರುದ್ಧ NDMA ಆ್ಯಕ್ಟ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ.