ETV Bharat / city

ಸಿಲಿಕಾನ್​ ಸಿಟಿಯಲ್ಲಿ ಇಂದು 2035 ಪಾಸಿಟಿವ್, 2725 ಶುಶ್ರೂಷಕಿಯರ ನೇಮಕಾತಿಗೆ ತಯಾರಿ - ಶುಶ್ರೂಷಕಿಯರ ನೇಮಕ

ಮಳೆಗಾಲ ಆರಂಭವಾಗಿರುವುದರಿಂದ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾದಂತಹ ರೋಗಕ್ಕೆ ಜನ ತುತ್ತಾಗದಂತೆ ತಡೆಯಲು ಸೊಳ್ಳೆ ನಿಯಂತ್ರಣ ಕ್ರಮ ಅನುಸರಿಸಿ ಖಾಯಿಲೆಗಳನ್ನು ಹತೋಟಿಯಲ್ಲಿಡಬೇಕಾಗಿದೆ. ಈ ಕೆಲಸಗಳಿಗೆ ಮಾನವ ಸಂಪನ್ಮೂಲದ ಕೊರತೆಯಿದೆ..

bangalore-corona-reports
ಕೊರೊನಾ ವರದಿ
author img

By

Published : Aug 4, 2020, 10:27 PM IST

ಬೆಂಗಳೂರು: ನಗರದಲ್ಲಿ ಇಂದು 2035 ಮಂದಿಗೆ ಕೊರೊನಾ ಸೋಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 63,033ಕ್ಕೆ ಏರಿದೆ. ಗುಣಮುಖರಾಗುತ್ತಿರುವ ಅಂಕಿ-ಅಂಶವನ್ನೂ ಕಲೆ ಹಾಕಲಾಗುತ್ತಿದೆ. ಆಸ್ಪತ್ರೆ ಡಿಸ್ಚಾರ್ಜ್ ಅಲ್ಲದೆ ಹೋಮ್​ ಐಸೋಲೇಶನ್ ಸೇರಿ ಒಟ್ಟು 4274 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 27,877 ಮಂದಿ ಡಿಸ್ಚಾರ್ಜ್ ಆಗಿದ್ದು, 34,021 ಸಕ್ರಿಯ ಪ್ರಕರಣಗಳಿವೆ. ಇಂದು 30 ಮಂದಿ ಮೃತಪಟ್ಟಿದ್ದು, ಈವರೆಗೆ 1134 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ನಗರಕ್ಕೆ 2725 ಶುಶ್ರೂಷಕರ ಕೊರತೆ : ನಗರದಲ್ಲಿ ಈವರೆಗೆ 59,501 ದೃಢೀಕೃತ ಕೋವಿಡ್ ಪ್ರಕರಣ ವರದಿಯಾಗಿವೆ. ಮಾನವ ಸಂಪನ್ಮೂಲ ಕೊರತೆಯಿಂದ ಸೋಂಕಿನ ನಿಯಂತ್ರಣ, ಸಂಪರ್ಕ ಪತ್ತೆಹಚ್ಚುವಿಕೆ, ಕಂಟೇನ್ಮೆಂಟ್​​ ವಲಯದ ಸಮೀಕ್ಷೆ, ಗಂಟಲು ದ್ರವ ಪರೀಕ್ಷೆ ಜೊತೆಗೆ ಇನ್ನಿತರೆ ಚಟುವಟಿಕೆ ಮತ್ತು ಹಲವಾರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ನಿರ್ವಹಿಸಲು ಕಷ್ಟವಾಗಿದೆ.

ಇದರ ಜೊತೆಗೆ ಮಳೆಗಾಲ ಆರಂಭವಾಗಿರುವುದರಿಂದ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾದಂತಹ ರೋಗಕ್ಕೆ ಜನ ತುತ್ತಾಗದಂತೆ ತಡೆಯಲು ಸೊಳ್ಳೆ ನಿಯಂತ್ರಣ ಕ್ರಮ ಅನುಸರಿಸಿ ಖಾಯಿಲೆಗಳನ್ನು ಹತೋಟಿಯಲ್ಲಿಡಬೇಕಾಗಿದೆ. ಈ ಕೆಲಸಗಳಿಗೆ ಮಾನವ ಸಂಪನ್ಮೂಲದ ಕೊರತೆಯಿದೆ. ನಗರದ 1,36,26,081 ಜನಸಂಖ್ಯೆಗೆ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಐದು ಸಾವಿರ ಜನಸಂಖ್ಯೆಗೆ ಒಬ್ಬರು ಶುಶ್ರೂಷಕಿಯರ (ಬಿಎಸ್ಸಿ ನರ್ಸಿಂಗ್ ಪದವಿ ಹಾಗೂ ಸಾರ್ವಜನಿಕ ಆರೋಗ್ಯ ತರಬೇತಿ ಹೊಂದಿರುವ MLHP) ಅಗತ್ಯವಿದೆ.

ಹೀಗಾಗಿ ಬಿಬಿಎಂಪಿ ವ್ಯಾಪ್ತಿಯ ಜನಸಂಖ್ಯೆಗೆ 2725 ಮಿಡಲ್ ಲೆವೆಲ್ ಹೆಲ್ತ್ ಪ್ರೊವೈಡರ್ ಅಥವಾ ಶುಶ್ರೂಷಕಿಯರನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಿಗದಿಪಡಿಸಿದ ವೇತನದಂತೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬಿಬಿಎಂಪಿ ಆಯುಕ್ತರು ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.