ETV Bharat / city

ಕ್ಯಾಬ್​​​​​ನಲ್ಲಿ ಅತ್ಯಾಚಾರ ಪ್ರಕರಣ: ಸಂತ್ರಸ್ಥೆ ಮತ್ತು ಆರೋಪಿ ಇಬ್ಬರೂ ಪರಿಚಯಸ್ಥರೆ..! - ಮುರುಗೇಶ್ ಪಾಳ್ಯದ ಅತ್ಯಾಚಾರ ಪ್ರಕರಣ

ಕ್ಯಾಬ್​ನಲ್ಲಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆರೋಪಿ ಈ ಮೊದಲೇ ಪರಿಚಯವಿದ್ದರೆಂಬ ಮಾಹಿತಿ ಈಗ ಬಯಲಾಗಿದೆ.

bangalore-cab-driver-rape-case-updates
ಕ್ಯಾಬ್​​​​​ನಲ್ಲಿ ಅತ್ಯಾಚಾರ ಪ್ರಕರಣ: ಚಾಲಕ ಮಹಿಳೆಯ ಇಬ್ಬರೂ ಪರಿಚಯಸ್ಥರೆ..!
author img

By

Published : Sep 26, 2021, 12:39 AM IST

ಬೆಂಗಳೂರು: ರಾಜಧಾನಿಯ ಮುರುಗೇಶ್ ಪಾಳ್ಯದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಕ್ಯಾಬ್ ಚಾಲಕ ಮತ್ತು ಸಂತ್ರಸ್ತ ಮಹಿಳೆಗೂ ಮೊದಲೇ ಪರಿಚಯವಿತ್ತು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಆರೋಪಿ ಚಾಲಕ ದೇವರಾಜುಲು ಮತ್ತು 24 ವರ್ಷದ ಸಂತ್ರಸ್ತ ಮಹಿಳೆ ದೂರವಾಣಿ ಸಂಖ್ಯೆಗಳನ್ನು ಸಹ ಪರಸ್ಪರ ಹಂಚಿಕೊಂಡಿದ್ದರು. ಹೋಟೆಲ್ ಕೆಲಸ ಮುಗಿಸಿ ತೆರಳುವಾಗ ಮತ್ತು ಪಾರ್ಟಿಗಳಿಂದ ವಿಳಂಬವಾದಾಗ ದೇವರಾಜುಲು ಅವರಿಗೆ ಮಹಿಳೆ ಕರೆ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಪೊಲೀಸರಿಗೆ ತಿಳಿದು ಬಂದಿದೆ.

ಆಂಧ್ರಪ್ರದೇಶ ಮೂಲದ ಆರೋಪಿ ದೇವರಾಜುಲುಗೆ ಕೋರ್ಟ್ ಸದ್ಯ 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಕೆಲ ತಿಂಗಳ ಹಿಂದೆ ಪರಿಚಯ: ಕೆಲವು ತಿಂಗಳ ಹಿಂದೆ ಮಹಿಳೆಗೆ ದೇವರಾಜುಲು ಪರಿಚಯವಾಗಿತ್ತು. ಕ್ಯಾಬ್ ಬುಕ್ ಮಾಡಿದ್ದ ಮಹಿಳೆಯು ಸಂಚಾರದ ವೇಳೆ ಪರಿಚಯ ಮಾಡಿಕೊಂಡಿದ್ದಳು. ಯಾವಾಗ ಕ್ಯಾಬ್ ಬೇಕಾದರೂ ನನಗೇ ಕಾಲ್ ಮಾಡುವಂತೆ ದೇವರಾಜುಲು ತಿಳಿಸಿದ್ದ. ಬಳಿಕ ಇಬ್ಬರೂ ದೂರವಾಣಿ ಸಂಖ್ಯೆ ಗಳನ್ನು ಕೂಡ ವಿನಿಮಯ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರದ ಶಂಕೆ: ಕೆಲವು ಬಾರಿ ದೇವರಾಜುಲುಗೆ ಕರೆ ಮಾಡಿ ಮಹಿಳೆ ಕ್ಯಾಬ್ ಕೂಡ ಪಡೆದಿದ್ದಳು. ಇತ್ತೀಚೆಗೆ ತಾನೇ ಕರೆ ಮಾಡಿ ಕ್ಯಾಬ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಮಹಿಳೆ ನಿದ್ರೆಗೆ ಜಾರಿದ್ದ ಅವಕಾಶ ದುರುಪಯೋಗಪಡಿಸಿಕೊಂಡ ದೇವರಾಜುಲು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಪಾರ್ಟ್‌ಮೆಂಟ್ ಮುಂಭಾಗ ಲೈಂಗಿಕ ದೌರ್ಜನ್ಯ: ಎಚ್‌ಎಸ್‌ಆರ್ ಲೇಔಟ್‌ನ ಹೋಟೆಲ್‌ನಿಂದ ಕರೆದುಕೊಂಡು ಬಂದ ದೇವರಾಜುಲು ಮುರುಗೇಶಪಾಳ್ಯದ ಆಕೆಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಏಕೆ ನಿರ್ಧರಿಸಿದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿದ್ರೆಗೆ ಜಾರಿದಾಗ ಅತ್ಯಾಚಾರ: ನಿದ್ರೆಗೆ ಜಾರಿದಾಗ ತನ್ನ ಮೇಲೆ ದೇವರಾಜುಲು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪ್ರಜ್ಞೆ ಬಂದಾಗ ನನ್ನ ಮೇಲೆ ಅತ್ಯಾಚಾರಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿತು ಎಂದು ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅತ್ಯಾಚಾರ ಆರೋಪಿ ಅರೆಸ್ಟ್​.. ವಿಚಾರಣೆ ವೇಳೆ ಕ್ಯಾಬ್​ ಡ್ರೈವರ್​ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.