ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿಯಾಗಿ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಕೋವಿಡ್-19 ಮಟ್ಟಹಾಕಲು ರಾಜ್ಯ ಸರ್ಕಾರ ಹರಸಾಹಸ ಮಾಡುತ್ತಿದ್ದೆ. ಇದರ ನಡುವೆ ಹೊಸದಾಗಿ ದಾಖಲಾಗಿರುವ ಕೊರೊನಾ ಸೋಂಕು ಪೀಡಿತರ ಸಂಖ್ಯೆಯ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಸರಿಯಾದ ಮಾಹಿತಿ ಇಲ್ಲದ್ದು ವಿಪರ್ಯಾಸವೇ ಸರಿ.
ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆ ವಾರ್ತಾ ಇಲಾಖೆ ಪ್ರಾರಂಭ ಮಾಡಿರುವ 'ಕೊರೊನಾ ವಾರ್ ರೂಂ' ಕಾರ್ಯ ವೈಖರಿ ಪರೀಕ್ಷೆ ಮಾಡಲು ಬಂದಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಕೊರೊನಾ ಪ್ರಕರಣಗಳ ಬಗ್ಗೆ ಕೇಳಿದ್ರೆ ಸರಿಯಾದ ಮಾಹಿತಿ ಇಲ್ಲ 27 ಮಾತ್ರ ಕನ್ಫರ್ಮ್ ಅಂತ ಉತ್ತರ ಕೊಟ್ಟರು.
ಆದರೆ, ರಾಜ್ಯದಲ್ಲಿ ಇಂದು ಏಳು ಜನ ಕೊರೊನಾ ಸೋಂಕಿತರು ಸೇರ್ಪಡೆಯಾಗಿದ್ದು, ಒಟ್ಟು 33 ಪಾಸಿಟಿವ್ ಸೋಂಕಿತರು ಅನ್ನೋದು ಗೊತ್ತಾಗಿದೆ. ಆದರೆ, ಆರೋಗ್ಯ ಸಚಿವರಾಗಿರುವ ಶ್ರೀರಾಮುಲು 27 ಮಾತ್ರ ಕನ್ಫರ್ಮ್ ಅಂತಾರೆ. ನನಗೆ ಸರಿಯಾದ ಮಾಹಿತಿ ಇಲ್ಲಾ. ಮಾಹಿತಿ ಸಮೇತ ಮತ್ತೆ ಮಾತನಾಡ್ತೀನಿ ಅಂತ ಹೇಳಿದ್ರು.
ಇನ್ನು ಕರ್ನಾಟಕ ಪೂರ್ತಿ ಲಾಕ್ ಡೌನ್ ಬಗ್ಗೆ ಸರಿಯಾದ ಮಾಹಿತಿ ಇಲ್ಲಾ. ಇಂದು 9 ಜಿಲ್ಲೆಗಳನ್ನ ಲಾಕ್ ಡೌನ್ ಮಾಡುವ ಬಗ್ಗೆ ಮಾತ್ರ ತೀರ್ಮಾನ ಆಗಿದೆ. ಈ ಬಗ್ಗೆ ನಾಳೆ ಸಭೆ ನಡೆಸಿ ಚರ್ಚೆ ಮಾಡುವುದಾಗಿ ಶ್ರೀರಾಮುಲು ತಿಳಿಸಿದರು.